ಶನಿವಾರ, ಜುಲೈ 5, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Tharun Kishore Sudir: ʻಕಾಟೇರʼ ನಿರ್ದೇಶಕರ ಮನೆಗೆ ಬಂತು BMW ಕಾರು- ಅಮ್ಮನ ಜೊತೆ ಮೊದಲ ರೈಡ್‌…!

Bharathi Javalliby Bharathi Javalli
02/04/2024
in Majja Special
Reading Time: 1 min read
Tharun Kishore Sudir: ʻಕಾಟೇರʼ ನಿರ್ದೇಶಕರ ಮನೆಗೆ ಬಂತು BMW ಕಾರು- ಅಮ್ಮನ ಜೊತೆ ಮೊದಲ ರೈಡ್‌…!

Tharun Kishore Sudir: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ(Kateera) ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದ್ದು ಎಲ್ಲರಿಗೂ ಗೊತ್ತಿರೋ ವಿಷ್ಯ. ಈ ಸಿನಿಮಾದ ಸೂತ್ರದಾರ ಒಂದ್‌ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಲನ್‌ ಆಗಿ ಮಿಂಚಿದ್ದ ಸುಧೀರ್‌ ಪುತ್ರ ತರುಣ್‌ ಕಿಶೋರ್‌ ಸುಧೀರ್‌(Tharun Kishore Sudir). ಕಾಟೇರ ಸೂಪರ್‌ ಸಕ್ಸಸ್‌ ಬಳಿಕ ಸ್ಯಾಂಡಲ್‌ ವುಡ್‌ನಲ್ಲಿ ಬಹು ಬೇಡಿಕೆಯ ನಿರ್ದೇಶಕರ ಪಟ್ಟಿಗೆ ಸೇರಿದ್ದಾರೆ. ಖ್ಯಾತಿಯೂ ಹೆಚ್ಚಿದೆ. ಆ ಸಕ್ಸಸ್‌ ಬೆನ್ನಲ್ಲೇ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.

ಹೌದು, ಕಾಟೇರ ಸೂಪರ್‌ ಸಕ್ಸಸ್‌ ತರುಣ್‌(Tharun Kishore Sudir) ಖ್ಯಾತಿಯನ್ನೂ ಮತ್ತಷ್ಟು ಹೆಚ್ಚಿಸಿದೆ. ಆಕ್ಷನ್‌ ಕಟ್‌ ಹೇಳಿದ ʻಚೌಕʼ, ʻರಾಬರ್ಟ್‌ʼ, ʻಕಾಟೇರʼ ಸಿನಿಮಾಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದ್ದು, ಸ್ಯಾಂಡಲ್‌ವುಡ್‌ ಅಂಗಳದಲ್ಲಿ ತರುಣ್‌ ಡಿಮ್ಯಾಂಡ್‌ ಹೆಚ್ಚಿಸಿದೆ. ಸದ್ಯ ಓಡೋ ಕುದುರೆ ಲಿಸ್ಟ್‌ನಲ್ಲಿ ತರುಣ್‌ ಹೆಸರು ಮುಂಚೂಣಿಯಲ್ಲಿದೆ. ಈ ಮೂಲಕ  ಇಷ್ಟು ವರ್ಷದ ಪರಿಶ್ರಮಕ್ಕೆ ತರುಣ್‌ ಕಷ್ಟದ ಜೀವನಕ್ಕೆ ಬ್ರೇಕ್‌ ಬಿದ್ದಿದ್ದು, ಒಂದೊಂದೇ ಗೆಲುವಿನ ರುಚಿ ನೋಡುತ್ತಿದ್ದಾರೆ. ಅದೇ ಖುಷಿಯಲ್ಲಿ ದುಬಾರಿ ಬೆಲೆಯ BMW ಕಾರ್‌ ಖರೀದಿ ಮಾಡಿದ್ದಾರೆ. ತಮ್ಮ ಹೊಸ ಕಾರ್‌ನಲ್ಲಿ ತಾಯಿ ಜೊತೆ ರೈಡ್‌ ಕೂಡ ಹೋಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಕ್ಸಸ್‌ ಅಂದ್ರೆ ಇದು ಎನ್ನುತ್ತಿದ್ದಾರೆ ನೆಟ್ಟಿಗರು.

ತಂದೆ ಸುಧೀರ್ ಅದ್ಭುತ ಕಲಾವಿದ,‌ ಅಪಾರ ಖ್ಯಾತಿಗಳಿಸಿದ್ರು ಕೂಡ ಮಕ್ಕಳು ಚಿತ್ರರಂಗಕ್ಕೆ ಬಂದಾಗ ಗ್ರ್ಯಾಂಡ್‌ ವೆಲ್‌ ಕಂ ಸಿಗಲಿಲ್ಲ. ಆರಂಭದಲ್ಲಿ ಅವಮಾನಗಳು ಇವರನ್ನೂ ಬಿಟ್ಟಿಲ್ಲ. ಕಷ್ಟದ ದಿನಗಳನ್ನು ಪ್ರತಿಭೆ ಮೂಲಕ ಮೆಟ್ಟಿ ನಿಂತ ತರುಣ್‌(Tharun Kishore Sudir) ಹಾಗೂ ಸಹೋದರ ನಂದಕಿಶೋರ್‌ ಇಬ್ಬರೂ ಇಂದು ಸ್ಯಾಂಡಲ್‌ ವುಡ್‌ ಬೇಡಿಕೆಯ ನಿರ್ದೇಶಕರು. ಒಂದ್‌ ಕಾಲದಲ್ಲಿ ಅವಕಾಶಗಳಿಗಾಗಿ ಗಾಂದೀನಗರ ಸುತ್ತಿದ್ದ ತರುಣ್‌ ನಟರಾಗಿ ಗೆಲುವು ಕಾಣದಿದ್ರು, ನಿರ್ದೇಶಕರಾಗಿ ಖ್ಯಾತಿ ಗಳಿಸಿಕೊಂಡಿದ್ದಾರೆ. ಸದ್ಯ ದರ್ಶನ್‌(Dharshan) ಮುಂದಿನ ಚಿತ್ರಕ್ಕೆ ಸ್ಕ್ರಿಪ್ಟ್‌ ಕೆಲಸದಲ್ಲಿ ಬ್ಯುಸಿಯಾಗಿರುವ ತರುಣ್‌ ಸುಧೀರ್‌, ರಿಯಾಲಿಟಿ ಶೋ ಒಂದರ ಜಡ್ಜ್‌ ಕೂಡ ಆಗಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Sreeleela: ಟಿಲ್ಲು ಸ್ಕ್ವೇರ್‌ ಸೂಪರ್‌ ಸಕ್ಸಸ್‌ -‌ ಶ್ರೀಲೀಲಾ ತಿರಸ್ಕರಿಸಿದ್ದೇಕೆ ಈ ಸಿನಿಮಾವನ್ನ..?

Sreeleela: ಟಿಲ್ಲು ಸ್ಕ್ವೇರ್‌ ಸೂಪರ್‌ ಸಕ್ಸಸ್‌ -‌ ಶ್ರೀಲೀಲಾ ತಿರಸ್ಕರಿಸಿದ್ದೇಕೆ ಈ ಸಿನಿಮಾವನ್ನ..?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.