Pushpa-2: ʻಪುಷ್ಪ' ಸಿನಿಮಾ ಮೂಲಕ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ಸುಕುಮಾರ್(Sukumar)ಕಾಂಬೋ ತೆರೆ ಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಿತ್ತು. ಸೌತ್ ಇಂಡಿಯಾ ಸೂಪರ್ ಸ್ಟಾರ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕ್ರೇಜ಼್ ಸೃಷ್ಟಿಸಿಕೊಂಡರು.
`ಐಕಾನ್’ ಸ್ಟಾರ್ ಆಗಿ ಬೆಳೆದ ಅಲ್ಲು ನ್ಯಾಶನಲ್ ಅವಾರ್ಡ್‌ಗೂ ಮುತ್ತನ್ನಿಟ್ರು. ಇದೀಗ ಈ ಸೂಪರ್ ಡೂಪರ್ ಕಾಂಬೋ ಪುಷ್ಪ-2(Pushpa-2) ಮೂಲಕ ವರ್ಲ್ಡ್ ವೈಡ್ ಕಮಾಲ್ ಮಾಡೋಕೆ ಬರುತ್ತಿದೆ. ಭಾರೀ ಕ್ರೇಜ಼್ ಕ್ರಿಯೇಟ್ ಮಾಡಿರುವ ಈ ಚಿತ್ರತಂಡದಿಂದ ಟೀಸರ್ ಬಿಡುಗಡೆ ದಿನಾಂಕ ಹೊರಬಿದ್ದಿದೆ.
ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬಕ್ಕೆ ಅಂದ್ರೆ ಏಪ್ರಿಲ್ 8ಕ್ಕೆ ಪುಷ್ಪ-2(Pushpa-2) ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ಪೋಸ್ಟರ್ ರಿಲೀಸ್ ಮಾಡಿ ಡೇಟ್ ಅನೌನ್ಸ್ ಮಾಡಿರುವ ಚಿತ್ರತಂಡ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಕಾಲಿಗೆ ಗೆಜ್ಜೆ ಕಟ್ಟಿರುವ ಈ ಪೋಸ್ಟರ್ ಸಿನಿಮಾದಲ್ಲಿ ಡಿವೈನ್ ಸ್ಟೋರಿ ಕೂಡ ಇರಬಹುದಾ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅದೇನೆ ಇರಲಿ ಸಿನಿಮಾ ಅಪ್ಡೇಟ್ ಕೇಳಿ ಅಲ್ಲು ವರ್ಲ್ಡ್ ವೈಡ್ ಅಭಿಮಾನಿ ಬಳಗ ಥ್ರಿಲ್ ಆಗಿದೆ. ಟೀಸರ್ ಸೆಲೆಬ್ರೇಟ್ ಮಾಡೋಕೆ ರೆಡಿಯಾಗಿದೆ.
ಪುಷ್ಪ-2(Pushpa-2) ಸಿನಿಮಾ ಇದೇ ವರ್ಷ ಆಗಸ್ಸ್ 15ಕ್ಕೆ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದೆ. ಪಾರ್ಟ್ -1 ಗಿಂತ ದೊಡ್ಡ ಮಟ್ಟದಲ್ಲಿ ಪುಷ್ಪ-2(Pushpa-2) ಮೂಡಿ ಬರುತ್ತಿದೆ. ಪುಷ್ಪರಾಜ್ ಅಂಗಳದಲ್ಲಿ ಯಾರೆಲ್ಲ ಇರಲಿದ್ದಾರೆ, ಏನೆಲ್ಲ ವಿಶೇಷತೆ ಇರಬಹುದು ಅನ್ನೋದ್ರ ಬಗ್ಗೆ ಈಗಾಗಲೇ ಸೌತ್ ಸಿನಿ ದುನಿಯಾದಲ್ಲಿ ಲೆಕ್ಕಾಚಾರ ಶುರುವಾಗಿದೆ. ಇಲ್ಲಿವರೆಗೂ ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಕಾಪಾಡಿಕೊಂಡು ಬಂದಿರುವ ಚಿತ್ರತಂಡ ಏಪ್ರಿಲ್ 8ರಿಂದ ಪುಷ್ಪರಾಜ್ ಮಾಸ್ ಮೆರವಣಿಗೆ ಆರಂಭಿಸಲಿದೆ.