Rakshak Bullet: ವಯಸ್ಸು, ಮಾತು ಎರಡರಲ್ಲೂ ಎಳಸು, ಸಿನಿಮಾ ಮಾಡದೇ ಇದ್ರು ನೂರು ಸಿನಿಮಾ ಮಾಡಿದ ರೇಂಜಿಗೆ ಭಾಷಣ. ಟ್ರೋಲ್ ಹೈಕ್ಳು ಇರಲಿ, ಸಾಮಾನ್ಯ ಜನರಿಂದಲೂ ಥೋ ಇವನ್ಯಾರಪ್ಪ ಹಿಂಗಾಡ್ತಿದ್ದಾನೆ ಅನ್ನೋ ರೇಜಿಗೆ ತಂದಿಟ್ಟ ವ್ಯಕ್ತಿತ್ವ. ಖಾಲಿ ಡಬ್ಬ ಸದ್ದು ಜೋರು ಅಂತಾರಲ್ಲ ಆ ರೇಂಜಿಗೆ ಸೌಂಡ್ ಮಾಡ್ತಿರೋ ರಕ್ಷಕ್ ಬುಲೆಟ್(Rakshak Bullet) ಹೀರೋ ಆಗೋ ಕನಸು ಫೈನಲಿ ನನಸಾಗಿದೆ.
ತಂದೆ ಬುಲೆಟ್ ಪ್ರಕಾಶ್(Bullet Prakash) ಹೆಸರು ಈ ಹುಡುಗನ ಅಸ್ತ್ರ. ಅದನ್ನೇ ಇಟ್ಟುಕೊಂಡು ಮಾಸ್ ಹೀರೋ ಆಗೋ ಗೀಳು. ನೋಡೋಕೆ ಆ ಧಮ್ಮು, ರಿಧಮ್ಮು ಇರ್ದೇ ಇದ್ರೂ ಮಾಸ್ ಮಹಾರಾಜ ಆಗಲು ಹೊರಟ ಈತನ ಮೊದಲ ಸಿನಿಮಾ ಅನೌನ್ಸ್ ಆಗಿದೆ. ಬುಲೆಟ್ ಪ್ರಕಾಶ್ ಹುಟ್ಟುಹಬ್ಬದಂದೇ ಮೊದಲ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ ರಕ್ಷಕ್(Rakshak Bullet)
ಮೊದಲ ಸಿನಿಮಾ ಪೋಸ್ಟರ್ ಹಂಚಿಕೊಂಡಿದ್ದಾರೆ ರಕ್ಷಕ್(Rakshak Bullet). ಪೋಸ್ಟರ್‌ನಲ್ಲಿರುವ ಭರ್ಜರಿ ಡೈಲಾಗ್‌ಗಳು ಮಾಸ್ ಸಿನಿಮಾ ಅನ್ನೋದನ್ನ ಹೇಳ್ತಿವೆ. ಈ ಚಿತ್ರಕ್ಕೆ ಹೊಸ ಪ್ರತಿಭೆ ಕ್ರಿಶ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯದಲ್ಲೇ ಟೈಟಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಇನ್ನಷ್ಟು ವಿಚಾರ ಹೇಳಲಿದೆ ಚಿತ್ರತಂಡ. ಚಿತ್ರಕ್ಕೆ ಶ್ರೀಹರಿ ಸಂಗೀತ ನಿರ್ದೇಶನ, ಶಿವು ಕೊರಿಯೋಗ್ರಫಿ, ಮಹೇಶ್ ಗಂಗಾವತಿ ಸಾಹಸ, ಶ್ರೀಧರ್ ಕಶ್ಯಪ್ ಕ್ಯಾಮೆರಾ ನಿರ್ದೇಶನ ರಕ್ಷಕ್ ಮೊದಲ ಚಿತ್ರಕ್ಕಿರಲಿದೆ.