ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Taapsee Pannu: ವೈರಲ್‌ ಆಯ್ತು ತಾಪ್ಸಿ ಪನ್ನು ಮದುವೆ ವೀಡಿಯೋ- ಸದ್ದಿಲ್ಲದೇ ಹಸಮಣೆ ಏರಿದ್ದ ಬಿಟೌನ್‌ ಬೆಡಗಿ..!

Bharathi Javalliby Bharathi Javalli
03/04/2024
in Majja Special
Reading Time: 1 min read
Taapsee Pannu: ವೈರಲ್‌ ಆಯ್ತು ತಾಪ್ಸಿ ಪನ್ನು ಮದುವೆ ವೀಡಿಯೋ- ಸದ್ದಿಲ್ಲದೇ ಹಸಮಣೆ ಏರಿದ್ದ ಬಿಟೌನ್‌ ಬೆಡಗಿ..!

Taapsee Pannu: ಬಾಲಿವುಡ್‌ ಬ್ಯೂಟಿ ತಾಪ್ಸಿ ಪನ್ನು(Taapsee Pannu) ಮದುವೆ ಸುದ್ದಿ ಕಳೆದ ವಾರ ಬಿಟೌನ್‌ ಅಂಗಳದಲ್ಲಿ ಸಖತ್‌ ಸುದ್ದಿಯಾಗಿತ್ತು. ಸ್ಟಾರ್‌ ನಟಿಮಣಿ ಸದ್ದಿಲ್ಲದೇ ಬಹು ಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿದಿದ್ದರು. ಆಕೆಯ ಆತ್ಮೀಯರ ಮೂಲಕ ಈ ಸುದ್ದಿ ಪಸರ್‌ ಆಗಿ ಸಖತ್‌ ವೈರಲ್‌ ಆಗಿತ್ತು. ಇಲ್ಲಿವರೆಗೂ ಮದುವೆ ಬಗ್ಗೆ ಮಾತನಾಡದ ʻತಪ್ಪಡ್‌ʼ ಬೆಡಗಿ ಮ್ಯಾರೇಜ್‌ ಸ್ಟೋರಿ ಲೀಕ್‌ ಆಗಿದೆ.

ಹೌದು, ತಾಪ್ಸಿ ಉದಯಪುರದಲ್ಲಿ ಡೆನ್ಮಾರ್ಕ್‌ ಮೂಲದ ಬಾಡ್ಮಿಂಟನ್‌ ಆಟಗಾರ ಮ್ಯಾಥ್ಯೂಸ್‌ ಬೋ(Mathias Boe) ಜೊತೆ ಸಪ್ತಪದಿ ತುಳಿದಿದ್ದಾರೆ. ಫ್ಯಾಮಿಲಿ ಹಾಗೂ ಆಪ್ತರ ಸಮ್ಮುಖದಲ್ಲಿ ಮಾರ್ಚ್‌ 23ರಂದು ತಾಪ್ಸಿ ಹಸೆಮಣೆ ಏರಿದ್ದರು. ಇದೀಗ ಇವರ ಮದುವೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮದುವೆ ನಂತರವೂ ಈ ಬಗ್ಗೆ ಪೋಸ್ಟ್‌ ಆಗಲಿ, ಸ್ಟೇಟ್‌ಮೆಂಟ್‌ ಆಗಲಿ ನೀಡಿರಲಿಲ್ಲ ಈ ಜೋಡಿ.

ಮದು ಮಗಳಾಗಿ ರೆಡ್‌ ಡ್ರೆಸ್‌ನಲ್ಲಿ ಮಿಂಚಿರುವ ತಾಪ್ಸಿ(Taapsee) ಡಾನ್ಸ್‌ ಮಾಡುತ್ತಾ ತನ್ನ ಗೆಳೆಯ ಮ್ಯಾಥ್ಯೂಸ್‌ ಬೋ(Mathias Boe) ನತ್ತ ಎಂಟ್ರಿ ಕೊಟ್ಟಿರುವ ವೀಡಿಯೋ ಸಖತ್‌ ವೈರಲ್‌ ಆಗಿದೆ. ಇಬ್ಬರು ಕೈ ಕೈ ಹಿಡಿದು ಸ್ಟೇಜ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಇನ್ನು ಮದುವೆಗೆ ಆತ್ಮೀಯರನ್ನು ಹೊರತು ಪಡಿಸಿ ಯಾರಿಗೂ ಆಹ್ವಾನ ಬಂದಿಲ್ಲ ಅನ್ನೋದಕ್ಕೂ ವೀಡಿಯೋ ಸಾಕ್ಷಿಯಾಗಿದೆ. ಈ ವೀಡಿಯೋ ಮೂಲಕ ಮದುವೆ ಸುತ್ತ ಹುಟ್ಟಿಕೊಂಡ ಊಹಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Sridevi: ತೆರೆ ಮೇಲೆ ಬರಲಿದೆಯಾ ಶ್ರೀದೇವಿ ಆತ್ಮಕಥೆ – ಬೋನಿ ಕಪೂರ್‌ ಕೊಟ್ಟರಲ್ಲ ಸುಳಿವು..!

Sridevi: ತೆರೆ ಮೇಲೆ ಬರಲಿದೆಯಾ ಶ್ರೀದೇವಿ ಆತ್ಮಕಥೆ - ಬೋನಿ ಕಪೂರ್‌ ಕೊಟ್ಟರಲ್ಲ ಸುಳಿವು..!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.