Rashmika Mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ(Rashmika Mandanna) ಇಂದು ಹುಟ್ಟುಹಬ್ಬದ ಸಂಭ್ರಮ. ಸೌತ್ ಹಾಗೂ ಬಿಟೌನ್ ಅಂಗಳದ ಬಹು ಬೇಡಿಕೆ ನಟಿಯಾಗಿರುವ ಕನ್ನಡತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಿನಿಮಾ ತಂಡಗಳು ರಶ್ ನಯಾ ಲುಕ್ ರಿವೀಲ್ ಮಾಡಿ ಶುಭ ಹಾರೈಸುತ್ತಿದ್ದು, ಮೋಸ್ಟ್ ಎಕ್ಸ್‌ಪೆಕ್ಟೆಡ್ ಪುಷ್ಪ-2(Pushpa-2) ಸಿನಿಮಾದ ರಶ್ಮಿಕಾ ಲುಕ್ ರಿವೀಲ್ ಆಗಿದೆ.
ಪುಷ್ಪ ಸಿನಿಮಾ ಮೂಲಕ ಶ್ರೀವಳ್ಳಿಯಾಗಿ ಖ್ಯಾತಿಯಾಗಿರುವ ರಶ್ ಪುಷ್ಟ-2ನಲ್ಲೂ ಮ್ಯಾಜಿಕ್ ಮಾಡಲಿದ್ದಾರೆ. ಪುಷ್ಪ-2(Pushpa-2) ಚಿತ್ರತಂಡ ಶ್ರೀವಳ್ಳಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದೆ. ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡಿರುವ ಶ್ರೀವಳ್ಳಿ ಕಿಲ್ಲಿಂಗ್ ಲುಕ್ ಪಕ್ಕಾ ಪುಷ್ಟ-2ನಲ್ಲಿ ಕಮಾಲ್ ಮಾಡಲಿದೆ ಎನ್ನೋದ್ರಲ್ಲಿ ಡೌಟೇ ಇಲ್ಲ.
ರಶ್ಮಿಕಾ(Rashmika Mandanna) ಅಭಿನಯದ `ಗರ್ಲ್‌ಫ್ರೆಂಡ್’(Girlfriend) ಸಿನಿಮಾ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಬರ್ತ್‌ಡೇಗೆ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು ಆದ್ರೆ ರಶ್ ಅಬುದಾಭಿಯಿಂದ ಮರಳಿದ ನಂತರ ದೊಡ್ಡ ಇವೆಂಟ್ ಮುಖಾಂತರ ʻಗರ್ಲ್‌ಫ್ರೆಂಡ್ʼ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಅಬುದಾಭಿಯದಲ್ಲಿ ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತಿರುವ ರಶ್ಮಿಕಾ(Rashmika Mandanna) ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಈ ಚಿತ್ರ ಕೂಡ ಇಂದೇ ತೆರೆ ಕಂಡಿದೆ. ಕನ್ನಡದ ಕುವರಿ ಇಂದು ನ್ಯಾಶನಲ್ ಲೆವೆಲ್‌ನಲ್ಲಿ ಕ್ರೇಜ಼್ ಸೃಷ್ಟಿಸಿದ್ದು, ಬ್ಲಾಕ್ ಬಸ್ಟರ್ ಹಿಟ್‌ಗಳು ಈಕೆಯ ಯಶಸ್ಸಿನ ನಾಗಲೋಟಕ್ಕೆ ಮತ್ತಷ್ಟು ಬಲ ನೀಡಿದೆ.