Deepika Padukone: ಬಿಟೌನ್ ಬ್ಯೂಟಿ ಕ್ವೀನ್ ದೀಪಿಕಾ ಪಡುಕೋಣೆ(Deepika Padukone). ಸೂಪರ್ ಹಿಟ್ ಸಿನಿಮಾಗಳ ಒಡತಿ. ಸದ್ಯ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಡಿಪ್ಪಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಆಸ್ಕರ್ ಅವಾರ್ಡ್ ಅವರ ಅಕಾಡೆಮಿ ಇನ್ಸ್‌ಸ್ಟ್ರಾಗ್ರಾಂ ಖಾತೆ.
ಹೌದು, ನಿನ್ನೆಯಿಂದ ಡಿಪ್ಪಿ(Deepika Padukone) ಬಗ್ಗೆ ಹರಿದಾಡ್ತಿರೋ ಸುದ್ದಿ ಸ್ವತಃ ದೀಪಿಕಾರನ್ನೂ ಸಂತಸದ ಅಲೆಯಲ್ಲಿ ತೇಲಿಸಿದೆ. ಡಿಪ್ಪಿ ಅಭಿಮಾನಿಗಳು ಆನಂದದ ಅಲೆಯಲ್ಲಿ ತೇಲಿದ್ದಾರೆ. ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಅವರ ಅಕಾಡೆಮಿ ಇನ್ಸ್‌ಸ್ಟ್ರಾಗ್ರಾಂ ಖಾತೆಯಲ್ಲಿ ದೀಪಿಕಾ ಪಡುಕೋಣೆ ʻಬಾಜಿರಾವ್ ಮಸ್ತಾನಿʼ(Bajirao Mastani) ಸಿನಿಮಾದ ʻದಿವಾನಿ ಮಸ್ತಾನಿʼ ಹಾಡಿನ ವೀಡಿಯೋವನ್ನು ಶೇರ್ ಮಾಡಲಾಗಿದೆ. ದೀಪಿಕಾ ಹೆಜ್ಜೆ ಹಾಕಿರುವ ಹಾಡಿನ ತುಣುಕನ್ನು ಶೇರ್ ಮಾಡಿ ಸಿನಿಮಾ ನಟ, ನಟಿ, ನಿರ್ದೇಶಕರ ಹೆಸರನ್ನು ಬರೆಯಲಾಗಿದೆ. ಅಕಾಡೆಮಿ ಪೇಜ್‌ನಲ್ಲಿ ಡಿಪ್ಪಿ ಹಾಗೂ ಬಾಜಿರಾವ್ ಮಾಸ್ತಾನಿ ಸಿನಿಮಾಗೆ ಸಿಕ್ಕ ಈ ಗೌರವ ಕಂಡು ಬಿಟೌನ್ ಅಂಗಳ, ಡಿಪ್ಪಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಪತಿ ರಣವೀರ್(Ranveer Singh) ಸಂತಸಕ್ಕಂತೂ ಪಾರವೇ ಇಲ್ಲ. ವೀಡಿಯೋ ನೋಡಿ ʻಮೆಸ್ಮರಿಕ್ʼ ಎಂದು ಕಮೆಂಟ್ ಮಾಡಿದ್ದಾರೆ ರಣವೀರ್.
2015ರಲ್ಲಿ ತೆರೆಕಂಡ ಬಾಜಿರಾವ್ ಮಸ್ತಾನಿ ಸಿನಿಮಾ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದರು. ರಣವೀರ್ ಸಿಂಗ್(Ranveer Singh), ದೀಪಿಕಾ ಪಡುಕೋಣೆ(Deepika Padukone). ಪ್ರಿಯಾಂಕ ಚೋಪ್ರ ಮುಖ್ಯ ತಾರಾಬಳಗದಲ್ಲಿ ನಟಿಸಿದ್ದರು. ಬಿಟೌನ್‌ನಲ್ಲಿ ಬಾಕ್ ಬಸ್ಟರ್ ಹಿಟ್ ಕಂಡ ಈ ಸಿನಿಮಾ ಹಾಡುಗಳು ಸೂಪರ್ ಹಿಟ್. ಇದೀಗ ಆಲ್ ಟೈಂ ಫೇವರೇಟ್ ಸಿನಿಮಾಗೆ ಆಸ್ಕರ್ ಅಕಾಡೆಮಿ ಗೌರವ ನೀಡಿರೋದು ಸಂತಸದ ವಿಚಾರ.