Samantha: ಟಾಲಿವುಡ್ ಅಂಗಳದ ಬ್ಯೂಟಿಫುಲ್ ಚೆಲುವೆ ಸಮಂತಾ(Samantha). ನೈಜ ಅಭಿನಯದ ಮೂಲಕ ಮೋಡಿ ಮಾಡೋ ಸ್ಯಾಮ್ ಎಂದರೆ ಟಾಲಿವುಡ್ ಮಂದಿಗೂ ಅಚ್ಚು ಮೆಚ್ಚು. ಅಪಾರ ಅಭಿಮಾನಿ ಬಳಗ ಹೊಂದಿರೋ ಸಮಂತಾ ಟಾಲಿವುಡ್ ಸ್ಟಾರ್ ಡೈರೆಕ್ಟರ್ ಅಚ್ಚು ಮೆಚ್ಚಿನ ನಟಿ ಕೂಡ ಹೌದು. ಇದೀಗ ಈ ಸ್ಟಾರ್ ಡೈರೆಕ್ಟರ್ ನೀಡಿರುವ ಸ್ಟೇಟ್‌ಮೆಂಟ್ ಸಖತ್ ವೈರಲ್ ಆಗಿದೆ.
ಟಾಲಿವುಡ್ ಆಲ್ ಟೈಂ ಸೂಪರ್ ಹಿಟ್ ಸಿನಿಮಾ ʻಆರ್ಯʼ ಸೃಷ್ಟಿಕರ್ತ, ʻರಂಗಸ್ಥಳಂʼ ಮಾಂತ್ರಿಕ, ʻಪುಷ್ಪʼ(Pushpa) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕ್ರೇಜ಼್ ಸೃಷ್ಟಿಸಿರುವ ನಿರ್ದೇಶಕ ಸುಕುಮಾರ್(Sukumar). ಸುಕುಮಾರ್‌ಗೆ ಸಮಂತಾ(Samantha) ಅಭಿನಯವೆಂದರೆ ಅಚ್ಚುಮೆಚ್ಚಂತೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ʻರಂಗಸ್ಥಳಂʼ ಸಿನಿಮಾದಲ್ಲಿ ಸ್ಯಾಮ್ ಅಭಿನಯ ನೋಡಿ ಸುಕುಮಾರ್ ಸ್ಯಾಮ್ ಅಭಿಮಾನಿಯಾಗಿದ್ದಾರೆ. ಸಮಂತಾಗೆ ವಯಸ್ಸು 40 ಆದರೂ ಅವರಿಗೆ ಸರಿ ಹೊಂದುವ ಪಾತ್ರ ನೀಡುತ್ತೇನೆ ಎನ್ನುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʻರಂಗಸ್ಥಳಂʼ(Rangasthalam) ಸಿನಿಮಾಗೆ ನಾಯಕಿ ಆಯ್ಕೆ ಸಮಯದಲ್ಲಿ ಸಮಂತಾ ಈ ಸಿನಿಮಾಗೆ ಬೇಡ ಎಂದುಕೊಂಡಿದ್ದೆ. ರಾಮ್ ಚರಣ್(Ram Charan) ಹಾಗೂ ಸಮಂತಾ(Samanth) ಇಬ್ಬರು ಸ್ಟಾರ್ ಆಗಿರೋದ್ರಿಂದ ಹ್ಯಾಂಡಲ್ ಮಾಡೋದು ಕಷ್ಟ ಎಂದುಕೊಂಡಿದ್ದೆ. ಆದರೆ ಕೊನೆಗೆ ಸಮಂತಾ ಅವರನ್ನೇ ಆಯ್ಕೆ ಮಾಡಬೇಕಾಯ್ತು. ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಸಮಂತಾ ನಟನೆ ನೋಡಿ ಥ್ರಿಲ್ ಆಗಿದ್ದೆ. ಆದ್ರಿಂದ ನಾನು ನಿರ್ದೇಶನ ಮಾಡೋವರೆಗೂ ಸಮಂತಾಗೆ ಸರಿ ಹೊಂದೋ ಪಾತ್ರ ನೀಡುತ್ತೇನೆ ಎಂದು ಅಭಿಮಾನ ಮೆರೆದಿದ್ದಾರೆ ಸುಕುಮಾರ್.