Crew: ಬಿಟೌನ್ ಈ ನಡುವೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದೆ. ಇದೀಗ ಆ ಹಿಟ್ ಲಿಸ್ಟ್ ಸಾಲಿಗೆ ಬಿಟೌನ್ ಬ್ಯೂಟಿಫುಲ್ ಗರ್ಲ್ಸ್ ಸಿನಿಮಾವೂ ಸೇರಿದೆ. ಆ ಚಿತ್ರ ಬೇರಾವುದು ಅಲ್ಲ ಕ್ರ್ಯೂ(Crew) ಸಿನಿಮಾ. ಸ್ಟಾರ್ ಹೀರೋಯಿನ್‌ಗಳ ತಾರಾಬಳಗ ಹೊಂದಿರುವ ಈ ಚಿತ್ರದ ಕಲೆಕ್ಷನ್ ನೂರು ಕೋಟಿಯತ್ತ ಸಾಗಿದೆ.
ಕರೀನಾ ಕಪೂರ್(Kareena Kapoor), ಟಬು(Tabu), ಕೃತಿ ಸನೂನ್(Kriti Sanon) ಹೀಗೆ ಬಿಟೌನ್ ಸ್ಟಾರ್ ನಟಿಮಣಿಯರಿಂದ ಕೂಡಿದ ಸಿನಿಮಾ ಕ್ರ್ಯೂ.(Crew) ಮಾರ್ಚ್ 29ರಂದು ತೆರೆಕಂಡಿತ್ತು. ಮಹಿಳಾ ಮಣಿಗಳೇ ಮುಖ್ಯ ಭೂಮಿಕೆಯಾಗಿ ನಟಿಸಿರುವ ಈ ಚಿತ್ರ 80ಕೋಟಿ ಕಲೆಕ್ಷನ್ ಕದ ತಟ್ಟಿದೆ. ಒಂದೇ ವಾರದಲ್ಲಿ ಭಾರತದಲ್ಲಿ 48ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ, ಬೇರೆ ದೇಶಗಳಲ್ಲಿ 28ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರತಂಡ ನೀಡಿರೋ ಲೆಕ್ಕಾಚಾರದ ಪ್ರಕಾರ ಇಲ್ಲಿವರೆಗೆ 80ಕೋಟಿ ಬಾಚಿಕೊಂಡು ಲಾಭದಲ್ಲಿದೆ ಕ್ರ್ಯೂ ಸಿನಿಮಾ. ಈ ವಾರಾಂತ್ಯದಲ್ಲಿ ಸಿನಿಮಾ ನೂರು ಕೋಟಿ ಕ್ಲಬ್ ಸೇರೋದು ಪಕ್ಕಾ ಅನ್ನೋದು ಬಿಟೌನ್ ಪಂಡಿತರ ಲೆಕ್ಕಾಚಾರ.
ರಿಯಾ ಕಪೂರ್(Ria Kapoor) ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ರಾಜೇಶ್ ಎ ಕೃಷ್ಣನ್(Rajesh A Krishnan) ಆಕ್ಷನ್ ಕಟ್ ಹೇಳಿದ್ದಾರೆ. ಕರೀನಾ ಕಪೂರ್, ಕೃತಿ ಸನೂನ್, ಟಬು ಮೂವರು ಗಗನಸಖಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಆಕ್ಟಿಂಗ್, ಇಂಟ್ರಸ್ಟಿಂಗ್ ಸ್ಟೋರಿ, ನಿರ್ದೇಶನ ಎಲ್ಲವೂ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ನಿರ್ಮಾಪಕಿ ರಿಯಾ ಕಪೂರ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎಂದು ಪೋಸ್ಟರ್ ಶೇರ್ ಮಾಡಿಕೊಂಡಿದ್ದು, ಮೂವರು ನಟಿಮಣಿಯರು ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್‌ನಿಂದ ಥ್ರಿಲ್ ಆಗಿದ್ದಾರೆ.