ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Adah Sharma: ಸುಶಾಂತ್‌ ಸಿಂಗ್‌ ರಜಪೂತ್‌ ಮನೆ ಖರೀದಿ ಮಾಡಿದ ʻರಣವಿಕ್ರಮʼ ನಟಿ ಅದಾ ಶರ್ಮಾ

Bharathi Javalliby Bharathi Javalli
06/04/2024
in Majja Special
Reading Time: 1 min read
Adah Sharma: ಸುಶಾಂತ್‌ ಸಿಂಗ್‌ ರಜಪೂತ್‌ ಮನೆ ಖರೀದಿ ಮಾಡಿದ ʻರಣವಿಕ್ರಮʼ ನಟಿ ಅದಾ ಶರ್ಮಾ

Adah Sharma: ಕನ್ನಡದಲ್ಲಿ ʻರಣವಿಕ್ರಮʼ ಸಿನಿಮಾದಲ್ಲಿ ಅಪ್ಪು ಜೊತೆ ತೆರೆಹಂಚಿಕೊಂಡಿದ್ದ ನಟಿ ಅದಾ ಶರ್ಮಾ(Adah Sharma). ʻದಿ ಕೇರಳ ಸ್ಟೋರಿʼ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಬಹುಭಾಷಾ ನಟಿ ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ (Sushant Singh Rajput) ಫ್ಲ್ಯಾಟ್ ಖರೀದಿಸಿ ಸುದ್ದಿಯಲ್ಲಿದ್ದಾರೆ.

ಮುಂಬೈನ ಮೌಂಟ್‌ ಬ್ಲಾಂಕ್‌ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿ ಮಾಡಿ ನಟ ಸುಶಾಂತ್‌ ಸಿಂಗ್‌ ರಜಪೂತ್‌ (Sushant Singh Rajput) ವಾಸವಿದ್ದರು. 2020ರ ಅವರ ಸಾವಿನ ನಂತರ ಆ ಮನೆಯನ್ನ ಯಾರೂ ಖರೀದಿ ಮಾಡಿರಲಿಲ್ಲ. ಮಾರಾಟಕ್ಕಿದ್ದ ಮನೆಯನ್ನು ಕಳೆದ ವರ್ಷ ಅದಾ ಶರ್ಮಾ(Adah Sharma) ಖರೀದಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅದಾ ಮಾತ್ರ ಈ ಬಗ್ಗೆ ಮೌನಕ್ಕೆ ಶರಣಾಗಿದ್ದರು. ಇದೀಗ ಸುಶಾಂತ್‌ ಪ್ಲ್ಯಾಟ್‌ ಖರೀದಿ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ.‌

ʻಇದೀಗ ನಾನು ಪ್ರತಿಯೊಬ್ಬರ ಹೃದಯದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಲು ಇಷ್ಟ ಪಡುತ್ತೇನೆ. ಸುಶಾಂತ್‌ ಸಿಂಗ್‌ ಮನೆ ಖರೀದಿ ಮಾಡಲು ಹೋದಾಗ ಮಾಧ್ಯಮದವರ ಕಣ್ಣು ನನ್ನ ಮೇಲಿತ್ತು. ನಾನು ಯಾವಾಗಲೂ ನನ್ನ ಖಾಸಗಿ ವಿಚಾರಗಳನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳಲು ಬಯಸುತ್ತೇನೆ. ಸಿನಿಮಾ ವಿಚಾರವಾಗಿ ಮಾತ್ರ ಸುದ್ದಿಯಲ್ಲಿ ಇರಲು ಬಯಸುತ್ತೇನೆʼ. ಆದ್ರಿಂದ ಈ ಬಗ್ಗೆ ಟಾಕ್ ಶುರುವಾದಾಗ ನಾನು ಪ್ರತಿಕ್ರಿಯೆ ನೀಡಿರಲಿಲ್ಲ ಎಂದಿದ್ದಾರೆ.

ಸುಶಾಂತ್‌(Sushant Singh Rajput)ಸಾವಿನ ನಂತರ ಅವರು ಡ್ರಗ್ಸ್‌ ತೆಗೆದು ಕೊಳ್ಳುತ್ತಿದ್ದರು ಎಂದು ಎಲ್ಲರೂ ಮಾತನಾಡುತ್ತಿದ್ದರು. ಇದು ನನಗೆ ಬೇಸರ ಉಂಟು ಮಾಡಿತ್ತು. ನಾನು ಮನೆ ಖರೀದಿಸಲು ಹೋದಾಗ ನನ್ನನ್ನೂ ಕೂಡ ಟ್ರೋಲ್‌ ಮಾಡಿದ್ದರು. ಈ ಜಗತ್ತಿನಲ್ಲಿ ಇಲ್ಲದ ವ್ಯಕ್ತಿ ಬಗ್ಗೆ ಮಾತನಾಡೋದು ತಪ್ಪು ಎಂದು ನಾನು ಭಾವಿಸಿದ್ದೇನೆ. ಯಾರೂ ಕೂಡ ಈ ರೀತಿ ಮಾಡಬೇಡಿ ಎಂದಿರುವ ಅದಾ ಶರ್ಮಾ(Adah Sharma) ಸುಶಾಂತ್‌ ಮೇಲೆ ಅಪಾರ ಗೌರವವಿದೆ ಎಂದಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post

 Aradhanaa Ram: ನಯಾ ಲುಕ್‌ನಲ್ಲಿ ಮಿಂಚಿದ ‌ʻಕಾಟೇರʼ ಬೆಡಗಿ ಆರಾಧನಾ ರಾಮ್‌..!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.