Aradhana Ram: ಸ್ಯಾಂಡಲ್ವುಡ್ ಅಂಗಳದ ಕನಸಿನ ರಾಣಿ ಮಾಲಾಶ್ರಿ. ʻಕಾಟೇರʼ(Katera) ಸಿನಿಮಾ ಮೂಲಕ ಮಾಲಾಶ್ರಿ(Malashri) ಪುತ್ರಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಮೊದಲ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಖುಷಿಯಲ್ಲಿರುವ ಆರಾಧನಾ ರಾಮ್(Aradhana Ram) ನಯಾ ಲುಕ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದಾರೆ.
ʻಕಾಟೇರʼ(Katera) ಮೂಲಕ ಆರಾಧನಾ ರಾಮ್(Aradhana Ram) ಮುನ್ನೆಲೆಯಲ್ಲಿದ್ದಾರೆ. ಮೊದಲ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ನಟಿ ನಟನೆ, ಫಿಟ್ನೆಸ್, ಲುಕ್ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಸಿನಿಮಾಗಳಿಗಾಗಿ ಎದುರು ನೋಡುತ್ತಿರುವ ನಟಿ ಇದರ ನಡುವೆ ಫೋಟೋಶೂಟ್ ಮೂಲಕವೂ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಹೊಸದೊಂದು ಫೋಟೋಶೂಟ್ ಮಾಡಿಸಿರುವ ಆರಾಧನಾ ನಯಾ ಲುಕ್ನಲ್ಲಿ ಬ್ಲ್ಯಾಕ್ ಡ್ರೆಸ್ನಲ್ಲಿ ಮಿಂಚಿದ್ದಾರೆ. ತಮ್ಮ ಲುಕ್ ಬದಲಾಯಿಸಿಕೊಂಡಿರುವ ಆರಾಧನಾ ಸಖತ್ ಬೋಲ್ಡ್ ಅವತಾರ ತಾಳಿದ್ದಾರೆ.
ರಾಧನಾ ರಾಮ್ ಆರಾಧನಾ ರಾಮ್(Aradhana Ram) ಆಗಿ ʻಕಾಟೇರʼ ಮೂಲಕ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್(Challenging Star Darshan) ಜೊತೆ ತೆರೆಹಂಚಿಕೊಳ್ಳೊ ಸೂಪರ್ ಆಫರ್ ಪಡೆದು ಕಾಟೇರನ ಬೆಡಗಿಯಾಗಿ ಮಿಂಚಿದ್ರು. ಮಾಲಾಶ್ರೀ ತರಭೇತಿ, ತರುಣ್ ಸುದೀರ್ ನಿರ್ದೇಶನದಲ್ಲಿ ಪಳಗಿದ ಆರಾಧನಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿ ಮೆಚ್ಚುಗೆ ಪಡೆದುಕೊಂಡಿದ್ರು. ʻಕಾಟೇರʼ(Katera) ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕಂಡಿದ್ದು, ಆರಾಧನಾ ಖ್ಯಾತಿಯೂ ಹೆಚ್ಚಿದೆ.