Pushpa-2: ಅಲ್ಲುಅರ್ಜುನ್(AlluArjun), ಸುಕುಮಾರ್(Sukumar)ಪುಷ್ಪ-2(Pushpa-2) ಮೂಲಕ ಮತ್ತೊಮ್ಮೆ ಗೆಲುವಿನ ನಗೆ ಬೀರಲು ರೆಡಿಯಾಗಿದ್ದಾರೆ. ಏಪ್ರಿಲ್ 8ಕ್ಕೆ ಟೀಸರ್ ಮೂಲಕ ಪುಷ್ಪರಾಜ್ ಎಂಟ್ರಿಯಾಗುತ್ತಿದೆ. ಇದರ ನಡುವೆ ವೆರಿ ಇಂಟರಸ್ಟಿಂಗ್ ಸಂಗತಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದೆ. ಇದಕ್ಕೆಲ್ಲಾ ಕಾರಣ ಆಸ್ಟೇಲಿಯಾ ಕ್ರಿಕೆಟರ್ ಡೇವಿಡ್ ವಾರ್ನರ್(David Warner).
ಅಲ್ಲು ಅರ್ಜುನ್(Allu Arjun) ತ್ರಿಶೂಲ ಹಿಡಿದಿರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿ ಟೀಸರ್ ಬಿಡುಗಡೆಗೆ ಮೂರು ದಿನ ಎಂದು ಹೇಳಿದೆ. ಈ ಪೋಸ್ಟರ್ ಅಲ್ಲು ಅರ್ಜುನ್ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ಗೆ ಆಸ್ಟ್ರೇಲಿಯಾ ಕ್ರಿಕೆಟರ್ ಡೇವಿಡ್ ವಾರ್ನರ್(David Warner). ‘ಗೆಸ್ಟ್ ಅಪಿಯರೆನ್ಸ್’ ಎಂದು ಕಮೆಂಟ್ ಬರೆದು ನಗುವ ಸಿಂಬಲ್ ಹಾಕಿದ್ದಾರೆ. ಇದನ್ನು ಕಂಡಲ್ಲಿಂದ ‘ಪುಷ್ಪ-2’ ಸಿನಿಮಾದಲ್ಲಿ ಡೇವಿಡ್ ವಾರ್ನರ್ ಇರ್ತಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲೆಲ್ಲಾ ಸಖತ್ ಸೇಲ್ ಆಗ್ತಿದೆ.
ಈ ಸುದ್ದಿ ನಿಜವಾಗುವ ಸಾಧ್ಯತೆಯೂ ಹೆಚ್ಚಿದೆ. ಇದಕ್ಕೆ ಕಾರಣವೂ ಮತ್ತದೇ ಡೇವಿಡ್ ವಾರ್ನರ್((David Warner). ವಾರ್ನರ್ ಸಿನಿಮಾ ಅಭಿಮಾನಿ ಕೂಡ ಹೌದು. ಅದರಲ್ಲೂ ʻಪುಷ್ಪʼ ಸಿನಿಮಾ ಬಿಡುಗಡೆಯಾದಾಗ ಅದರ ಹುಕ್ ಸ್ಟೆಪ್, ಪುಷ್ಪರಾಜ್ ವಾಕಿಂಗ್ ಸ್ಟೈಲ್, ವೈರಲ್ ಡೈಲಾಗ್ ಎಲ್ಲಾವನ್ನು ಕ್ರಿಕೆಟ್ ಮೈದಾನದಲ್ಲಿ ಇಮಿಟೇಟ್ ಮಾಡುತ್ತಿದ್ದರು. ಇದಲ್ಲೆವೂ ಚಿತ್ರತಂಡ ಗಮನಕ್ಕೆ ತೆಗೆದುಕೊಂಡು ವಾರ್ನರ್ಗೆ ಗೆಸ್ಟ್ ಅಪಿಯರೆನ್ಸ್ ನೀಡಿರಬಹುದು ಎನ್ನುವುದು ಹಲವರ ಲೆಕ್ಕಾಚಾರ. ಇತ್ತ ವಾರ್ನರ್ ಕೂಡ ‘ಪುಷ್ಪ-2′((Pushpa-2)ಸಿನಿಮಾ ಪೋಸ್ಟರ್ಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವೆಲ್ಲವೂ ಖಂಡಿತ ವಾರ್ನರ್ ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಎಂಬ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ.