Shahrukh Khan: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್(Shahrukh Khan) ಹಾಗೂ ಜೂಹಿ ಚಾವ್ಲಾ ಇಬ್ಬರು ಆತ್ಮೀಯ ಸ್ನೇಹಿತರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ತೆರೆಯ ಮೇಲೆ, ತೆರೆಯ ಹಿಂದೆ ಈ ಇಬ್ಬರೂ ಬಲು ಆತ್ಮೀಯರು. ಇದೀಗ ಜೂಹಿ ಚಾವ್ಲಾ(Juhi Chawla) ಕಿಂಗ್ ಖಾನ್ ಬಗ್ಗೆ ಹೇಳಿರುವ ಮಾತು ಸಖರ್ ವೈರಲ್ ಆಗಿದೆ.
ಹಾಗೆಂದ ಮಾತ್ರಕ್ಕೆ ಶಾರುಖ್(Shahrukh Khan) ಅಭಿಮಾನಿಗಳು ಸಿಟ್ಟಾಗೋ ಅವಶ್ಯಕತೆ ಏನಿಲ್ಲ. ಇದು ಆತ್ಮೀಯತೆಯಲ್ಲೇ, ಸಲುಗೆಯಲ್ಲೇ ಹೇಳಿದ ಮಾತು. ಸಿನಿಮಾರಂಗದಲ್ಲಿ ಇರುವ ಇವರ ಸ್ನೇಹ ಕ್ರಿಕೆಟ್ ಅಂಗಳದಲ್ಲೂ ಮುಂದುವರೆದಿದೆ. ಇಬ್ಬರೂ ಕೂಡ ಕ್ರಿಕೆಟ್ ಪ್ರಿಯರು. ಶಾರುಖ್ ಹಾಗೂ ಜೂಹಿ(Juhi Chawla) ಕೆಕೆಆರ್ ಕ್ರಿಕೆಟ್ ಫಾಂಚೈಸ್ ಓನರ್. ಮೈದಾನದಲ್ಲಿ ಐಪಿಎಲ್ ವೇಳೆ ಈ ಸೂಪರ್ ಹಿಟ್ ಜೋಡಿ ನೋಡೋದೆ ಫ್ಯಾನ್ಸ್‌ಗಳಿಗೆ ಹಬ್ಬ. ಆದ್ರೆ ಜೂಹಿಗೆ ಮಾತ್ರ ಶಾರುಖ್ ಜೊತೆ ಕ್ರಿಕೆಟ್ ನೋಡೋಕೆ ಬಲು ಕಷ್ಟವಂತೆ. ಹೀಗಂತ ಸಂದರ್ಶನವೊಂದರಲ್ಲಿ ಫನ್ ಮುಮೆಂಟ್ ಶೇರ್ ಮಾಡಿಕೊಂಡಿದ್ದಾರೆ.
ಶಾರುಖ್((Shahrukh Khan) ಕ್ರಿಕೆಟ್ ಆಟವನ್ನು ಸಖತ್ ಎಂಜಾಯ್ ಮಾಡ್ತಾರೆ. ಅವರ ಎನರ್ಜಿ ಬೇರೆ ಲೆವೆಲ್‌ನಲ್ಲಿ ಇರುತ್ತೆ. ಕೆಕೆಆರ್ ಆಟವಿದ್ದಾಗ ಎಸ್‌ಆರ್‌ಕೆ ಜೊತೆ ಅದನ್ನು ಎಂಜಾಯ್ ಮಾಡುವುದು ಸುಲಭದ ಮಾತಲ್ಲ. ತಂಡ ಉತ್ತಮ ಪ್ರದರ್ಶನ ಕಾಣದಿದ್ದಾಗ ಸಿಕ್ಕಾಪಟ್ಟೆ ಕೋಪಗೊಳ್ಳುತ್ತಾರೆ. ನನ್ನ ಮೇಲೆ ಕೋಪ ತೋರುತ್ತಾರೆ. ನಾನು ನನ್ನ ಮೇಲೆ ಯಾಕೆ ಕೋಪ ತೋರಿಸುತ್ತೀರಾ, ತಂಡದ ಮೇಲೆ ಹೇಳಿ ಎಂದು ಹೇಳುತ್ತೇನೆ ಎಂದು ಫನ್ ಮುಮೆಂಟ್ ಹಂಚಿಕೊಂಡಿದ್ದಾರೆ ಬಿಟೌನ್ ಬ್ಯೂಟಿ ಕ್ವೀನ್.
90ರ ದಶಕದ ಈ ಸೂಪರ್ ಜೋಡಿ ಎಲ್ಲರ ಅಚ್ಚುಮೆಚ್ಚಿನ ಜೋಡಿ ಕೂಡ ಹೌದು, ‘ಫಿರ್ ಬಿ ದಿಲ್ ಹೈ ಹಿಂದೂಸ್ತಾನಿ’, ‘ರಾಜು ಬನ್ ಗಯಾ ಜೆಂಟಲ್‌ಮ್ಯಾನ್’, ‘ರಾಮ್ ಜಾನೇ’ ಸೇರಿದಂತೆ ಹಲವು ಸಿನಿನಿಮಾಗಳಲ್ಲಿ ಈ ಜೋಡಿ ಒಟ್ಟಾಗಿ ನಟಿಸಿದ್ದಾರೆ.