ಸಿನಿಮಾ: ಮಾರಿ ಗೋಲ್ಡ್
ನಿರ್ದೇಶನ: ರಾಘವೇಂದ್ರ ಎಂ ನಾಯಕ್
ನಿರ್ಮಾಣ: ರಘುವರ್ಧನ್
ತಾರಾಬಳಗ: ದಿಗಂತ್, ಸಂಗೀತಾ ಶೃಂಗೇರಿ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ.
ರಾಘವೇಂದ್ರ ಎಂ ನಾಯಕ್ ಸಾರಥ್ಯದಲ್ಲಿ ದಿಗಂತ್(Diganth), ಸಂಗೀತಾ ಶೃಂಗೇರಿ(Sangeetha Sringeri) ಮುಖ್ಯ ಭೂಮಿಕೆಯ ‘ಮಾರಿಗೋಲ್ಡ್’(Marigold) ಸಿನಿಮಾ ಬಿಡುಗಡೆಯಾಗಿದೆ. ಚಿತ್ರದ ವಿಮರ್ಶೆ ಇಲ್ಲಿದೆ.
ಕಥೆ:
ಹಣ ಸಂಪಾದಿಸಬೇಕು, ಶ್ರೀಮಂತನಾಗಬೇಕು, ಅದಕ್ಕೆ ಯಾವ ದಾರಿಯಾದರೂ ಸರಿಯೇ ಒಟ್ನಲ್ಲಿ ದುಡ್ಡು ಮಾಡಬೇಕು ಎನ್ನುವುದು ನಾಯಕನ ಪಾಲಿಸಿ. ಅವನೊಂದಿಗೆ ಸೇರಿಕೊಂಡ ಗೆಳೆಯರ ಗ್ಯಾಂಗ್. ನಾಲ್ವರೂ ಸೇರಿ ದೊಡ್ಡ ಡೀಲ್‌ಗೆ ಕೈ ಹಾಕುತ್ತಾರೆ. ಅವರ ಡೀಲ್ ವರ್ಕೌಟ್ ಆಗುತ್ತಾ..? .ಕಂಡ ಕನಸು ನಿಜವಾಗಿ ಶ್ರೀಮಂತ ಬದುಕು ಅವರದ್ದಾಗುತ್ತಾ..? ಎನ್ನುವುದರ ಸುತ್ತ ಹೆಣೆದ ಸ್ಟೋರಿ ಮಾರಿಗೋಲ್ಡ್(Marigold).
ನಿರ್ದೇಶನ:
ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಸಿನಿಮಾವಾಗಿಸುವ ಪ್ರಯತ್ನಕ್ಕೆ ಬಿದ್ದ ರಾಘವೇಂದ್ರ(Raghavendra M Naik) ಅವರು ಚಿತ್ರಕಥೆಯತ್ತ ಗಮನಹರಿಸಿದ್ದರೆ ಆ ಪ್ರಯತ್ನ ಯಶಸ್ವಿಯಾಗುತ್ತಿತ್ತು. ಕೆಲ ಡೈಲಾಗ್‌ಗಳು ಇದು ಬೇಕಿತ್ತಾ ಅನ್ನೋವಷ್ಟು ಬೇಸರವನ್ನೂ ತರಿಸುತ್ತೆ. ಹಾಡುಗಳ ಬಗ್ಗೆಯೂ ಇನ್ನಷ್ಟು ಹೋಂ ವರ್ಕ್ ಮಾಡಬೇಕಿತ್ತು. ಅದೇ ಓಲ್ಡ್ ಸ್ಟೋರಿ ಆಯ್ಕೆ ಮಾಡಿಕೊಂಡ ನಿರ್ದೇಶಕರು ರಸವತ್ತಾಗಿ, ಥ್ರಿಲ್ಲಿಂಗ್ ಆಗಿ ಕಟ್ಟಿಕೊಡುವಲ್ಲಿ ಕೆಲಸ ಮಾಡಿದ್ರೆ ‘ಮಾರಿಗೋಲ್ಡ್’ ಹೆಸರಿನಷ್ಟೇ ಶ್ರೀಮಂತ್ರವಾಗುತ್ತಿತ್ತು.
ಕಲಾವಿದರ ಅಭಿನಯ:
ಒಂದೇ ರೀತಿಯ ನಟನೆಗೆ ಒಗ್ಗಿಕೊಂಡಿದ್ದ ದಿಗಂತ್(Diganth), ಈ ಚಿತ್ರದಲ್ಲಿ ನಟನೆ, ಮ್ಯಾನರಿಸಂ ಮೂಲಕ ಇಷ್ಟವಾಗುತ್ತಾರೆ. ಹೊಸ ಇಮೇಜ್‌ನತ್ತ ಹೊರಳುತ್ತಿರುವುದು ಅರಿವಿಗೆ ಬರುತ್ತೆ. ಸಂಗೀತಾ ಶೃಂಗೇರಿ(Sangeetha Sringeri) ಅಭಿನಯವೂ ಗಮನ ಸೆಳೆಯುತ್ತದೆ. ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸಂಪತ್ ಕುಮಾರ್ ಕೂಡ ಎಂದಿನಂತೆ ತಮ್ಮ ಅದ್ಭುತ ಅಭಿನಯದ ಮೂಲಕ ಇಷ್ಟವಾಗುತ್ತಾರೆ.
ಸಿನಿಮಾ ಹೇಗಿದೆ:
ಸಸ್ಪೆನ್ಸ್, ಥ್ರಿಲ್ಲರ್ ಎಂದ ಮಾತ್ರಕ್ಕೆ ಸೀಟಿನ ತುದಿಯಲ್ಲಿ ಕೂತು ನೋಡುವಷ್ಟು ಕೌತುಕ ಜಗತ್ತು ಮಾರಿಗೋಲ್ಡ್(Marigold) ಒಳಗಿಲ್ಲ. ಸಿನಿಮಾ ನಿರೂಪಣೆಯತ್ತ ಇನ್ನಷು ಹೋವರ್ಕ್ ಮಾಡಿ, ಒಂದಿಷ್ಟು ಕೆಟ್ಟ ಸಂಭಾಷಣೆಗೆ ಬ್ರೇಕ್ ಹಾಕಬೇಕಿತ್ತು. ಮಾಮೂಲಿ ಸ್ಟೋರಿ ಆಯ್ಕೆ ಮಾಡಿಕೊಂಡ ನಿರ್ದೇಶಕರು ರಸವತ್ತಾಗಿ ತೋರಿಸುವ ಪ್ರಯತ್ನದಲ್ಲಿ ಸೋತಿದ್ದಾರೆ.