Duniya Vijay: ಸ್ಯಾಂಡಲ್‌ವುಡ್ ಬ್ಲಾಕ್ ಕೋಬ್ರಾ, ದುನಿಯಾ ವಿಜಯ್(Duniya Vijay) ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಭೀಮ’ ಮೂಲಕ ಅಬ್ಬರಿಸಲು ಸಜ್ಜಾಗಿರುವ ವಿಜಿ ಹೊಸದೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಿನಿಮಾದ ಮಾಸ್ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ವಿಜಿ ನಯಾ ವೆಂಚರ್ ವಿಶೇಷ ಏನಪ್ಪಾ ಅಂದ್ರೆ ಈ ಸಿನಿಮಾ ಮೂಲಕ ವಿಜಿ ಮಗಳ ಚಿತ್ರರಂಗ ಎಂಟ್ರಿ ಕೂಡ ಆಗುತ್ತಿದೆ.
‘ಗುರು ಶಿಷ್ಯರು’ ಸಿನಿಮಾ ಖ್ಯಾತಿಯ ನಿರ್ದೇಶಕ ಜಡೇಶ್ ಕುಮಾರ್ ಹಂಪಿ(Jadeshaa K Hampi) ನಿರ್ದೇಶನದ ಸಿನಿಮಾದಲ್ಲಿ ಬ್ಲಾಕ್ ಕೋಬ್ರಾ ನಟಿಸುತ್ತಿದ್ದಾರೆ. ತಂದೆ ಮಗಳ ಸೆಂಟಿಮೆಂಟ್ ಎಳೆಯುಳ್ಳ ಈ ಚಿತ್ರದಲ್ಲಿ ರೀಲ್‌ನಲ್ಲೂ ತಂದೆ ಮಗಳ ಪಾತ್ರಕ್ಕೆ ವಿಜಿ ಹಾಗೂ ಹಿರಿಯ ಮಗಳು ಮೋನಿಕಾ(Monica) ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ದುನಿಯಾ ವಿಜಿ ಪುತ್ರಿ ಮೋನಿಕಾ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ನಟನೆ ವಿಚಾರದಲ್ಲಿ ವಿಜಿ ಗರಡಿಯಲ್ಲಿ ಪಳಗಿರುವ ಮೋನಿಕಾ ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲ್‌ನಲ್ಲೂ ತರಭೇತಿ ಪಡೆದಿದ್ದಾರೆ.
‘ಸಲಗ'(Salaga) ಗೆಲುವಿನ ಮೂಲಕ ಸತತ ಸೋಲುಗಳಿಂದ ಕಂ ಬ್ಯಾಕ್ ಮಾಡಿರುವ ವಿಜಿ ‘ಭೀಮ'(Bheema) ಮೂಲಕ ಮತ್ತೊಮ್ಮೆ ನಿರ್ದೇಶಕ ಕಂ ನಟನಾಗಿ ತೆರೆ ಮೇಲೆ ಕಮಾಲ್ ಮಾಡೋಕೆ ರೆಡಿಯಾಗಿದ್ದಾರ. ಈಗಾಗಲೇ ಈ ಚಿತ್ರದ ಹಾಡುಗಳು ಸಖತ್ ವೈರಲ್ ಆಗಿದ್ದು, ಭೀಮ ಸಿನಿಮಾ ವಿಜಿಗೆ ಮತ್ತೊಂದು ಹಿಟ್ ನೀಡಲಿದೆ ಎನ್ನುತ್ತಿದೆ ಗಾಂಧಿನಗರ.