Baak: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ(Tamannaah Bhatia) ಹಾಗೂ ರಾಶಿ ಖನ್ನಾ(Raashi Khanna) ಜೊತೆಯಾಗಿ ಸ್ಕ್ರೀನ್ ಶೇರ್ ಮಾಡಿರುವ ತೆಲುಗು ಸಿನಿಮಾ ‘ಬಾಕ್’(Baak). ಹಾರಾರ್, ಕಾಮಿಡಿ ಸಬ್ಜೆಕ್ಸ್ ಒಳಗೊಂಡ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
‘ಬಾಕ್’(Baak) ಚಿತ್ರದಲ್ಲಿ ತಮನ್ನಾ((Tamannaah Bhatia) ಶಿವಾನಿಯಾಗಿ, ರಾಶಿ ಖನ್ನಾ((Raashi Khanna) ಮಾಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇಬ್ಬರ ಲುಕ್ ಚಿತ್ರತಂಡ ರಿವೀಲ್ ಮಾಡಿದ್ದು, ಶಿವಾನಿಯಾಗಿ ತಮನ್ನಾ ಟ್ರೆಡಿಶನಲ್ ಲುಕ್‌ನಲ್ಲಿ ದೀಪ ಹಿಡಿದು ಸಖತ್ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಯ ಲುಕ್‌ನಲ್ಲಿ ರಾಶಿ ಖನ್ನಾ ಮುಖದಲ್ಲಿ ಭಯ ಆವರಿಸಿದ್ದು, ಸದ್ಯ ರಿಲೀಸ್ ಆಗಿರೋ ಫಸ್ಟ್ ಲುಕ್ ಪೋಸ್ಟರ್ ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ.
ಕಾಲಿವುಡ್ ಖ್ಯಾತ ನಿರ್ದೇಶಕ ಸುಂದರ್ ಸಿ(Sundar C) ಆಕ್ಷನ್ ಕಟ್ ಹೇಳಿರುವ ಹಾರಾರ್ ಕಾಮಿಡಿ ಸರಣಿಯಾದ ‘ಅರಣ್ಮಣೈ-4’ ತೆಲುಗಿನಲ್ಲಿ ‘ಬಾಕ್’(Baak) ಆಗಿ ತೆರೆ ಕಾಣುತ್ತಿದೆ. ನಿರ್ದೇಶನದ ಜೊತೆಗೆ ಚಿತ್ರದ ಲೀಡ್ ರೋಲ್‌ನಲ್ಲೂ ಬಣ್ಣಹಚ್ಚಿದ್ದಾರೆ ಸುಂದರ್ ಸಿ. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ರಿಲೀಸ್ ಡೇಟ್ ಸದ್ಯದಲ್ಲೇ ಅನೌನ್ಸ್ ಆಗಲಿದೆ.