Nora Fatehi: ‘ಕುಸು ಕುಸು’, ‘ದಿಲ್‌ಬರ್’, ‘ಡಾನ್ಸ್ ಮೇರಿ ರಾಣಿ’ ಸೂಪರ್ ಡೂಪರ್ ಹಾಡುಗಳ ಒಡತಿ ನೋರ ಫತೇಹಿ(Nora Fatehi). ತಮ್ಮ ಅದ್ಭುತ ಡಾನ್ಸ್ ಸ್ಕಿಲ್ ಮೂಲಕ ಎಲ್ಲರ ಕಣ್ಮನ ಸೆಳೆಯುವ ಬಿಟೌನ್ ನಟಿ ಕಂ ಡಾನ್ಸರ್ ಈಕೆ. ಕೆನಡಾದ ಈ ಬ್ಯೂಟಿಫುಲ್ ಚೆಲುವೆ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳು ಈಗ ಸಖತ್ ವೈರಲ್ ಆಗಿದೆ.
ಸೆಲೆಬ್ರಿಟಿ ಕಪಲ್‌ಗಳ ಬಗ್ಗೆ ನೋರಾ ಫತೇಹಿ(Nora Fatehi) ಹೇಳಿರುವ ಮಾತು ಸಖತ್ ವೈರಲ್ ಆಗಿದೆ. ಇಲ್ಲಿ ಕೆಲವರು ಬೇರೆಯವರ ಫೇಮ್, ಪವರ್, ಹಣವನ್ನು ಉಪಯೋಗಿಸಿಕೊಳ್ಳುತ್ತಾರೆ. ಎಲ್ಲರಂತೆ ನಾವು ಚೆನ್ನಾಗಿ ಇದ್ದೇವೆ ಎಂಬ ತೋರಿಕೆಗಾಗಿ ಸೆಲೆಬ್ರಿಟಿ ಕಪಲ್‌ಗಳು ಪ್ರೀತಿಯಲ್ಲಿ ಇರುವಂತೆ ನಾಟಕವಾಡುತ್ತಾರೆ. ಅಷ್ಟೇಅಲ್ಲ ಇಂತವರು ಸದಾ ಕ್ಯಾಲುಕ್ಲೇಟಿವ್ ಆಗಿದ್ದು, ಸಿನಿಮಾ ಮತ್ತು ಖಾಸಗಿ ಜೀವನವನ್ನು ಮಿಕ್ಸ್ ಮಾಡುತ್ತಾರೆ. ಕೊನೆಗೆ ಖಿನ್ನತೆ ಜೊತೆಗೆ ಆತ್ಮಹತ್ಯೆ ಭಾವನೆಗೊಳಗಾಗುತ್ತಾರೆ ಎಂದಿದ್ದಾರೆ.
ಬೇರೆಯರವರ ಖ್ಯಾತಿಯನ್ನು ತಮ್ಮ ಹಿತಕ್ಕೆ ಬಳಸಿಕೊಳ್ಳಲು ಸದಾ ನೋಡುತ್ತಾರೆ. ಆದರೆ ಇದು ನನ್ನ ಬಳಿ ನಡೆಯೋದಿಲ್ಲ ಎಂದಿದ್ದಾರೆ ಕೆನಡಾದ ಬೆಡಗಿ. ಇಂತವರನ್ನೂ ನೋರ(Nora Fatehi) ‘ಪರಭಕ್ಷಕರು’ ಎಂದು ಕರೆದಿದ್ದಾರೆ. ಈ ಕಾರಣದಿಂದಲೇ ನಾನು ಯಾವ ಹುಡುಗರ ಜೊತೆ ಸುತ್ತಾಡೋದಾಗಲಿ, ಡೇಟ್ ಮಾಡೋದಾಗಲಿ ನೀವು ನೋಡಿರಲು ಸಾಧ್ಯವಿಲ್ಲ. ಕೆಲವರಂತೂ ವರ್ಚಸ್ಸಿಗಾಗಿ ಮದುವೆಯಾಗುತ್ತಾರೆ. ಈ ರೀತಿ ಮಾಡೋ ಹುಡುಗರಾಗಲಿ, ಹುಡುಗಿಯರಾಗಲಿ ದುಡ್ಡಿಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿಸದೇ ಒಬ್ಬ ವ್ಯಕ್ತಿ ಜೊತೆ ಕೇವಲ ಹಣ, ವರ್ಚಸ್ಸಿಗಾಗಿ ಇರುವುದಕ್ಕಿಂತ ದುರಂತ ಇನ್ನೊಂದಿಲ್ಲ. ಇಂತಹ ಉದಾಹರಣೆಗಳು ಬಾಲಿವುಡ್‌ನಲ್ಲಿ ಸಾಕಷ್ಟಿವೆ ಎಂದು ಬಿಟೌನ್ ಕೆಲ ಜೋಡಿಗಳ ಮುಖವಾಡ ಬಯಲು ಮಾಡಿದ್ದಾರೆ ನೋರಾ ಫತೇಹಿ(Nora Fatehi).