Manvita Kamath: ‘ಕೆಂಡ ಸಂಪಿಗೆ’ ಸಿನಿಮಾದಲ್ಲಿ ಮುಗ್ಧ ಅಭಿನಯದ ಮೂಲಕ ಮೋಡಿ ಮಾಡಿ. ‘ಟಗರು’(Tagaru) ಸಿನಿಮಾದಲ್ಲಿ ‘ಮೇ ಮೆಂಟಲ್ ಹೋ ಜಾವ’ ಎಂದು ಚಿತ್ರರಸಿಕರ ಮನದಲ್ಲಿ ಖಾಯಂ ಸ್ಥಾನ ಪಡೆದವರು ಮಾನ್ವಿತಾ ಕಾಮತ್. ‘ಟಗರು ಪುಟ್ಟಿ’ ಎಂದೇ ಖ್ಯಾತಿಯಾದ ಮಾನ್ವಿತಾ ಕಾಮತ್(Manvita Kamath) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಮಾನ್ವಿತಾ ಕಾಮತ್(Manvita Kamath) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೇ 1ರಂದು ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮದುವೆ ಆಮಂತ್ರಣ ಪತ್ರಿಕೆ ಹಂಚಿಕೊಂಡಿರುವ ಮಾನ್ವಿತಾ ‘ಎರಡು ಕಲಾತ್ಮಕ ಜೀವಗಳು ಒಂದಾದಾಗ ಮ್ಯಾಜಿಕ್ ಸಂಭವಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಂಗೀತ ನಿರ್ದೇಶಕ ಅರುಣ್ ಕುಮಾರ್ ಮಾನ್ವಿತಾ ಕಾಮತ್(Manvita Kamath) ಮದುವೆಯಾಗ್ತಿರೋ ಹುಡುಗ. ಮಾನ್ವಿತಾ ಹುಟ್ಟೂರಾದ ಮಂಗಳೂರಿನಲ್ಲಿ ಮದುವೆ ನಡೆಯಲಿದ್ದು, ಏಪ್ರಿಲ್ 29, 30ರಂದು ಮೆಹಂದಿ ಶಾಸ್ತ್ರ ಹಾಗೂ ಸಂಗೀತ್ ಶಾಸ್ತ್ರ ನಡೆಯಲಿದೆ
‘ಟಗರು’ ಸಿನಿಮಾ ನಂತರ ಮಾನ್ವಿತಾ ಕಾಮತ್(Manvita Kamath) ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗ್ತಾರೆ ಗಾಂದೀನಗರದ ಭವಿಷ್ಯವಾಗಿತ್ತು. ಆದ್ರೆ ಮಾನ್ವಿತಾ ಬೆರಳೆಣಿಕೆ ಸಿನಿಮಾದಲ್ಲಿ ನಟಿಸಿದ್ರು. ಅದು ಕೂಡ ಸ್ಟಾರ್ ನಟರ ಸಿನಿಮಾಗಳಲ್ಲ. ಹೀಗಿರುವಾಗಲೇ ಓದಿನ ಕಡೆ ಗಮನ ಹರಿಸಿದ ಮಾನ್ವಿತಾ ಇದೀಗ ಸಿನಿಮಾಗೆ ಬ್ರೇಕ್ ಹೇಳಿ ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ.