Deepika Padukone: ರಂಜಾನ್ ಹಬ್ಬದಂದು ಸಲ್ಮಾನ್ ಖಾನ್(Salman Khan) ಹೊಸ ಚಿತ್ರ ಘೋಷಿಸಿದ್ದು ಜಾಹೀರಾಗಿದೆ. ‘ಘಜಿನಿ’ ಖ್ಯಾತಿಯ ಮುರುಗದಾಸ್(Murugadoss) ಜೊತೆ ಕೈ ಜೋಡಿಸಿರುವ ಸಲ್ಲು ಭಾಯ್ ‘ಸಿಕಂದರ್’(Sikandar) ಆಗಿ ಕಮಾಲ್ ಮಾಡಲಿದ್ದಾರೆ. ಈ ಚಿತ್ರಕ್ಕೆ ಸಲ್ಲು ಜೊತೆ ಸ್ಕ್ರೀನ್ ಶೇರ್ ಮಾಡೋರು ಯಾರು ಅನ್ನೊದರತ್ತಲೇ ಎಲ್ಲರ ಚಿತ್ತ.
‘ಸಿಕಂದರ್’ ಸಿನಿಮಾದಲ್ಲಿ ಸಲ್ಲುಗೆ ನಾಯಕಿ ಯಾರ್ ಆಗ್ತಾರೆ ಅನ್ನೋದೇ ಈಗ ಲೇಟೆಸ್ಟ್ ಸಮಾಚಾರ. ಆ ಲಕ್ಕಿ ಹೀರೋಯಿನ್ ಯಾರು ಅನ್ನುವಾಗಲೇ ದೀಪಿಕಾ ಪಡುಕೋಣೆ(Deepika Padukone) ಹೆಸರು ಕೇಳಿ ಬರ್ತಿದೆ. ಚಿತ್ರತಂಡವೂ ಈ ಬಗ್ಗೆ ಡಿಪ್ಪಿ ಜೊತೆ ಮಾತುಕತೆ ನಡೆಸಿದೆಯಂತೆ. ಸಲ್ಲು ಹಾಗೂ ಎ.ಆರ್.ಮುರುಗದಾಸ್ ದೀಪಿಕಾ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಡಿಪ್ಪಿ ಓಕೆ ಎಂದರೆ ಸಲ್ಲು(Salman Khan) ಜೊತೆ ನಟಿಸುವ ಮೊಟ್ಟ ಮೊದಲ ಸಿನಿಮಾ ‘ಸಿಕಂದರ್’(Sikandar) ಪಾಲಾಗಲಿದೆ. ಆದ್ರೆ ಇಲ್ಲಿವರೆಗೂ ಈ ಬಗ್ಗೆ ಚಿತ್ರತಂಡ ಅಧೀಕೃತ ಅನೌನ್ಸ್ ಮಾಡಿಲ್ಲ.
ಆದಗ್ಯೂ ಇಲ್ಲಿ ಒಂದಿಷ್ಟು ಗಮನಿಸಬೇಕಾದ ಸಂಗತಿಯಿದೆ. ‘ಸಿಕಂದರ್’(Sikandar) ಸಿನಿಮಾ 2025ರ ರಂಜಾನ್‌ಗೆ ತೆರೆ ಕಾಣಲಿದೆ. ಇತ್ತ ಸಿನಿಮಾದಿಂದ ಬ್ರೇಕ್ ಪಡೆದಿರುವ ಡಿಪ್ಪಿ(Deepika Padukone) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಈ ಪ್ರಾಜೆಕ್ಟ್ ಒಪ್ಪಿಕೊಂಡರೆ ಶೂಟಿಂಗ್‌ನಲ್ಲಿ ಭಾಗಿಯಾಗೋದು ಯಾವಾಗ ಅನ್ನೋದು ಎಲ್ಲರ ಪ್ರಶ್ನೆ ಒಂದ್ಕಡೆಯಾದ್ರೆ, ಇಬ್ಬರು ಒಂದಾದ್ರೆ ಆಕ್ಷನ್ ಪವರ್ ಪ್ಯಾಕ್ಡ್ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗೋದಂತೂ ಪಕ್ಕ. ಇಷ್ಟು ವರ್ಷ ಈ ಜೋಡಿಯನ್ನು ಒಟ್ಟಿಗೆ ಕಣ್ತುಂಬಿಕೊಳ್ಳುವ ಅಭಿಮಾನಿಗಳ ಕನಸು ಈ ಬಾರಿ ನನಸಾಗುತ್ತಾ ಕಾದುನೋಡ್ಬೇಕು.
ಸಲ್ಲು(Salman Khan) ಬಿಟೌನ್ ಸೂಪರ್ ಸ್ಟಾರ್ ಆದರೂ ‘ಭಜರಂಗಿ ಭಾಯ್‌ಜಾನ್’ ನಂತರ ಸಲ್ಲು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ್ದೇ ಇಲ್ಲ. ಇತ್ತ ಮುರುಗದಾಸ್ ಕೂಡ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳಿಂದ ಕಂಗೆಟ್ಟಿದ್ದಾರೆ. ಹೀಗಿದ್ದೂ ಸಲ್ಲು ಮುರುಗದಾಸ್ ಜೊತೆ ಕೈ ಜೋಡಿಸಿದ್ದಾರೆ ಅಂದ್ರೆ ಸ್ಕ್ರಿಪ್ಟ್ ಥ್ರಿಲ್ ಆಗಿದೆ ಅನ್ನೋದೇ ಸಲ್ಲು ಫ್ಯಾನ್ಸ್ ಸಮಾಧಾನಕ್ಕೆ ಕಾರಣ. ಇದೆಲ್ಲದಕ್ಕೂ ಉತ್ತರ ಮುಂದಿನ ರಂಜಾನ್.