Rajinikanth: ‘ಜೈಲರ್’(Jailer) ಮೂಲಕ ಬ್ಯಾಕ್ ಟು ಬ್ಯಾಕ್ ಸೋತ ಸಿನಿಮಾಗಳಿಗೆ ಬಡ್ಡಿ ಸಮೇತ ಉತ್ತರ ಕೊಟ್ಟವರಂತೆ ಎದ್ದು ಬಂದವರು ರಜನಿಕಾಂತ್. ತಮ್ಮ ಕ್ರೇಜ಼್ ಇನ್ನೂ ಕಮ್ಮಿಯಾಗಿಲ್ಲ ಎಂದು ಬ್ಲಾಕ್ ಬಸ್ಟರ್ ಹಿಟ್ ನೀಡಿರುವ ತಲೈವಾ ಸಂಭಾವನೆಯನ್ನೂ ದುಪ್ಪಟ್ಟು ಮಾಡಿಕೊಂಡಿದ್ದಾರೆ. ಸೂಪರ್ ಸ್ಟಾರ್ ಸಂಭಾವನೆ ಕೇಳಿ ತಲೆ ಗಿರ್ ಅನ್ನೋದಂತೂ ಗ್ಯಾರೆಂಟಿ.
‘ಜೈಲರ್’(Jailer) ಹಿಟ್ ಆದ ಬೆನ್ನಲ್ಲೇ ‘ಜೈಲರ್2’(Jailer2) ನಿರ್ಮಾಣದ ಬಗ್ಗೆ ಚರ್ಚೆ ಜೋರಾಗಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈ ಬಗ್ಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ಸಿನಿಮಾಗೆ ರಜನಿಕಾಂತ್(Rajinikanth) ಬರೊಬ್ಬರಿ 250 ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಸದ್ಯ ಈ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸಖತ್ ಸಂಚಲನ ಸೃಷ್ಟಿಸಿದೆ. ಜೈಲರ್ ಕಲೆಕ್ಷನ್ ಸಿನಿಮಾ ಸಾವಿರ ಕೋಟಿ ದಾಟುತ್ತಿದ್ದಂತೆ ರಜನಿ ಸಂಭಾವನೆಯೂ 200ರ ಗಡಿ ದಾಟಿದ್ದು. ಒಂದು ವೇಳೆ ಇದು ನಿಜವೇ ಆದಲ್ಲಿ ತಲೈವಾ ಸಂಭಾವನೆ ವಿಚಾರದಲ್ಲೂ ದಾಖಲೆ ಬರೆಯಲಿದ್ದಾರೆ.
‘ಜೈಲರ್’(Jailer) ಸೀಕ್ವೆಲ್‌ಗೆ ‘ಹುಕುಂ’ ಎಂದು ಟೈಟಲ್ ಫೈನಲ್ ಆಗಿದೆ ಎಂಬ ಸುದ್ದಿ ಹರಿದಾಡ್ತಿದೆ. ಜೂನ್‌ನಲ್ಲಿ ಸಿನಿಮಾ ಪ್ರಿ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿದ್ದು. ಈ ಚಿತ್ರಕ್ಕೂ ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದೆ. ರಜನಿಕಾಂತ್(Rajinikanth) ‘ವೆಟ್ಟೈಯನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದು ಮುಗಿಯುತ್ತಿದ್ದಂತೆ ಜೈಲರ್ ಸೀಕ್ವೆಲ್ ಆರಂಭಗೊಳ್ಳಲಿದೆ.