Vijay Sethupathi: ‘ಮಕ್ಕಳ್ ಸೆಲ್ವನ್’ ಖ್ಯಾತಿಯ ಸೌತ್ ಸಿನಿರಂಗದ ಖ್ಯಾತ ನಟ ವಿಜಯ್ ಸೇತುಪತಿ(Vijay Sethupathi). ಇವರ ವೃತ್ತಿ ಜೀವನದ ಐವತ್ತನೇ ಸಿನಿಮಾ ‘ಮಹಾರಾಜ'(Maharaja). ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿ ಸೇತುಪತಿ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
‘ಮಹಾರಾಜ’(Maharaja) ಸಿನಿಮಾಗಾಗಿ ಎದುರು ನೋಡುತ್ತಿದ್ದ ‘ಮಕ್ಕಳ್ ಸೆಲ್ವನ್’(Makkal Selvan) ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಮೇ 16ರಂದು ಸಿನಿಮಾ ಬಿಯಗಡೆಯಾಗುತ್ತಿರೋದನ್ನ ಜಾಹೀರು ಮಾಡಿದೆ ಚಿತ್ರತಂಡ. ಈ ಮೂಲಕ ಬೇಸಿಗೆಯ ಧಗೆಯಲ್ಲಿ ಬೆಂದವರಿಗೆ ತಮ್ಮ ನಟನೆ ಮೂಲಕ ತಂಪೆರಚಲು ಬರುತ್ತಿದ್ದಾರೆ ವಿಜಯ್ ಸೇತುಪತಿ.
‘ಮಹಾರಾಜ’ ವಿಜಯ್ ಸೇತುಪತಿ(Vijay Sethupathi) ಸಿನಿ ಕೆರಿಯರ್‌ನ 50ನೇ ಸಿನಿಮಾವಾಗಿರೋದ್ರಿಂದ ಮಹತ್ವದೆನಿಸಿದೆ. ತಮ್ಮ ಅಮೋಘ ಅಭನಯದ ಮೂಲಕ ಮೋಡಿ ಮಾಡುವ ವಿಜಯ್ ಈ ಸಿನಿಮಾದಲ್ಲಿ ಯಾವ ರೀತಿ ರಂಜಿಸಲಿದ್ದಾರೆ ಎನ್ನುವತ್ತ ಎಲ್ಲರ ಗಮನವಿದೆ. ನಿತಿಲನ್ ಸಾಮಿನಾತನ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಚಿತ್ರಕ್ಕೆ ಕನ್ನಡಿಗ ಅಜನೀಶ್ ಲೋಕನಾಥ್(Ajaneesh Loknath) ಸಂಗೀತ ನಿರ್ದೇಶನವಿದೆ. ತಮಿಳು, ತೆಲುಗಿನಲ್ಲಿ ಸಿನಿಮಾ ತೆರೆ ಕಾಣುತ್ತಿದ್ದು, ರಾ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.