Janhvikapoor: ಬಿಟೌನ್ ಬ್ಯೂಟಿಫುಲ್ ಬೆಡಗಿ ಜಾನ್ವಿ ಕಪೂರ್(Janhvikapoor), ನಟ ರಾಜ್‌ಕುಮಾರ್ ರಾವ್(Rajkummar Rao) ನಟಿಸುತ್ತಿರುವ ಸಿನಿಮಾ ‘ಮಿಸ್ಟರ್ ಅಂಡ್ ಮಿಸ್ಟರ್ಸ್ ಮಹಿ’(Mr &MRS Mahi). ಮೊದಲ ಬಾರಿ ಇಬ್ಬರ ಕಾಂಬೋ ತೆರೆ ಮೇಲೆ ಮೋಡಿ ಮಾಡೋಕೆ ರೆಡಿಯಾಗಿದ್ದು, ಸದ್ಯ ನಯಾ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದೆ ಚಿತ್ರತಂಡ.
ನಿರ್ಮಾಪಕ ಕರಣ್ ಜೋಹಾರ್(Karan Johar) ಸೋಶಿಯಲ್ ಮೀಡಿಯಾದಲ್ಲಿ ‘ಮಿಸ್ಟರ್ ಅಂಡ್ ಮಿಸ್ಟರ್ಸ್ ಮಹಿ’(Mr &MRS Mahi) ನಯಾ ಪೋಸ್ಟರ್ ಹಂಚಿಕೊಂಡಿದ್ದಾರೆ. ಮಹಿಮಾ, ಮಹೇಂದ್ರ ಪಾತ್ರಕ್ಕೆ ಜಾನ್ವಿ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ಬಣ್ಣ ಹಚ್ಚಿದ್ದಾರೆ. ಕ್ರಿಕೆಟ್ ಜೆರ್ಸಿ ತೊಟ್ಟು ಸ್ಟೇಡಿಯಂ ಕಡೆ ಮುಖಮಾಡಿರುವ ನಯಾ ಪೋಸ್ಟರ್ ಬಿಡುಗಡೆಯಾಗಿದೆ. ನಯಾ ಪೋಸ್ಟರ್‌ಗೆ ಇಬ್ಬರ ಅಭಿಮಾನಿಗಳು ಮೆಚ್ಚುಗೆ ಹೇಳುತ್ತಿದ್ದಾರೆ.
ಈ ವರ್ಷದ ಬಹು ನಿರೀಕ್ಷಿತ ಬಿಟೌನ್ ಸಿನಿಮಾ ಇದಾಗಿದ್ದು ಮೇ 31ರಂದು ಬಿಡುಗಡೆಯಾಗುತ್ತಿದೆ. ಶರಣ್ ಶರ್ಮಾ ನಿರ್ದೇಶನದ ಸಿನಿಮಾ ಇದಾಗಿದೆ. 2018ರಲ್ಲಿ ‘ಧಡಕ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ ಪುತ್ರಿ ಬಿಟೌನ್ ಜೊತೆಗೆ ಸೌತ್ ಸಿನಿರಂಗದಲ್ಲೂ ಮಿಂಚುತ್ತಿದ್ದಾರೆ. ಜೂ. ಎನ್‌ಟಿಆರ್(Jr.NTR) ‘ದೇವರ’(Devara) ಸಿನಿಮಾದಲ್ಲಿ ನಟಿಸಿರುವ ಜಾನ್ವಿ(Janhvikapoor), ರಾಮ್ ಚರಣ್(Ram Charan) ಚಿತ್ರಕ್ಕೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಬ್ಯುಸಿಯಾಗಿರುವ ಜಾನ್ವಿ ಕಪೂರ್ ಮೇ 31ರಂದು ಮಹಿಯಾಗಿ ರಂಜಿಸಲು ಬರ್ತಿದ್ದಾರೆ.