Shah Rukh Khan: ́ಪಠಾಣ್’, ‘ಜವಾನ್’, ‘ಡಂಕಿ’ ಸಿನಿಮಾಗಳ ಬ್ಯಾಕ್ ಟು ಬ್ಯಾಕ್ ಗೆಲುವಿನ ಖುಷಿಯಲ್ಲಿದ್ದಾರೆ ಕಿಂಗ್ ಖಾನ್(Suhana Khan). ಆ ಗೆಲುವಿನ ಖುಷಿಯಲ್ಲೇ ಪುತ್ರಿ ಸುಹಾನ ಖಾನ್(Suhana Khan)ರನ್ನು ಚಿತ್ರರಂಗಕ್ಕೆ ಪರಿಚಯಿಸುವಲ್ಲಿ ಸಖತ್ ಬ್ಯುಸಿಯಿದ್ದಾರೆ. ಪುತ್ರಿ ಚೊಚ್ಚಲ ಚಿತ್ರ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಶಾರೂಕ್ ಕೋಟಿ ಕೋಟಿ ಬಂಡವಾಳ ಹೂಡಲು ರೆಡಿಯಾಗಿದ್ದಾರೆ.
ಹೌದು, ಸದ್ಯ ಕಿಂಗ್ ಖಾನ್(Shah Rukh Khan) ಚಿತ್ತ ಮಗಳನ್ನು ಬಿಟೌನ್‌ಗೆ ಲಾಂಚ್ ಮಾಡೋದು. ಅದೇ ಕೆಲಸದಲ್ಲಿ ಬಾದ್‌ಷಾ ಬ್ಯುಸಿಯಾಗಿದ್ದಾರೆ. ಚಿತ್ರಕ್ಕೆ ‘ಕಿಂಗ್'(King) ಎಂದು ಹೆಸರಿಡಲಾಗಿದ್ದು, ಪುತ್ರಿ ಸುಹಾನ ಖಾನ್ ಜೊತೆ ಶಾರೂಕ್ ಕೂಡ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ತಂದೆ, ಮಗಳು ಜೊತೆಯಾದ ಈ ಚಿತ್ರಕ್ಕೆ ಸುಜೋಯ್ ಘೋಶ್(Sujoy Ghosh) ನಿರ್ದೇಶನದ ಸಾರಥ್ಯ ವಹಿಸಿದ್ದಾರೆ.
‘ಕಿಂಗ್'(King) ಆಕ್ಷನ್ ಪವರ್ ಪ್ಯಾಕ್ಡ್ ಸಿನಿಮಾವಾಗಿದ್ದು, ಚಿತ್ರಕ್ಕೆ ಶಾರೂಕ್ 200 ಕೋಟಿ ಬಂಡವಾಳ ಹೂಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನುತ್ತಿದೆ ಬಿಟೌನ್ ಮೂಲಗಳು. ಮಗಳನ್ನು ಅದ್ದೂರಿಯಾಗಿ ಪರಿಚಯಿಸಲು ಜೊತೆಗೆ ಪುತ್ರಿ ಚೊಚ್ಚಲ ಚಿತ್ರದ ಮೇಕಿಂಗ್ ವಿಚಾರದಲ್ಲಿ ಕೊಂಚವೂ ಕಾಂಪ್ರಮೈಸ್ ಆಗಬಾರದು ಎನ್ನುವುದು ಶಾರೂಕ್ ಕಾಳಜಿ. ಇದ್ರಿಂದ 200 ಕೋಟಿ ಬಂಡವಾಳ ಹಾಕಲು ಶಾರೂಕ್ ರೆಡಿಯಾಗಿದ್ದಾರಂತೆ. ಪ್ರಿ ಪ್ರೊಡಕ್ಷನ್ ಕೆಲಸದಲಿ ಕಿಂಗ್ ಚಿತ್ರತಂಡ ನಿರತವಾಗಿದ್ದು, ಮೇನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮಗಳ ಚಿತ್ರಕ್ಕೆ ಕೋಟಿ ಕೋಟಿ ಬಂಡವಾಳ ಸುರಿಯುತ್ತಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ.