Nithin: ಟಾಲಿವುಡ್ ಸ್ಟಾರ್ ನಟ ನಿತಿನ್(Nithin) ಅಭಿನಯಿಸುತ್ತಿರುವ ಆಕ್ಷನ್ ಪವರ್ ಪ್ಯಾಕ್ಡ್ ಸಿನಿಮಾ ‘ರಾಬಿನ್‌ಹುಡ್’(Robinhood). ಬಾಕ್ಸ್ ಆಫೀಸ್‌ನಲ್ಲಿ ಗೆಲುವಿನ ನಗು ನೋಡಲು ಕಾಯುತ್ತಿರುವ ನಿತಿನ್ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ‘ರಾಬಿನ್‌ಹುಡ್’ಗೆ ನಾಯಕಿಯರೇ ಸಿಗುತ್ತಿಲ್ಲ.
‘ರಾಬಿನ್‌ಹುಡ್’(Robinhood) ಹಾಗೂ ‘ತಮ್ಮುಡು’ ಸಿನಿಮಾಲ್ಲಿ ನಿತಿನ್(Nithin) ಬ್ಯುಸಿಯಾಗಿದ್ದಾರೆ. ತಮ್ಮುಡು ಚಿತ್ರಕ್ಕೆ ಕನ್ನಡತಿ ಸಪ್ತಮಿ ಗೌಡ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಆದರೆ ಆಕ್ಷನ್ ಅಡ್ವೆಂಚರ್ ‘ರಾಬಿನ್ ಹುಡ್’ ಸಿನಿಮಾಗೆ ನಾಯಕಿ ಮಾತ್ರ ಫೈನಲ್ ಆಗ್ತಿಲ್ಲ. ಸಿನಿಮಾ ಸೆಟ್ಟೇರಿದಾಗ ರಶ್ಮಿಕಾ ಮಂದಣ್ಣ(Rashmika Mandanna) ನಿತಿನ್ ಜೋಡಿಯಾಗ್ತಾರೆ ಎಂದು ಚಿತ್ರತಂಡ ತಿಳಿಸಿತ್ತು. ಆದ್ರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ರಶ್ಮಿಕಾ ಚಿತ್ರದಿಂದ ಹೊರ ನಡೆದಿದ್ದಾರೆ. ರಶ್ಮಿಕಾ ಜಾಗವನ್ನು ಶ್ರೀಲೀಲಾ(Sreeleela)ತುಂಬುತ್ತಾರೆ ಎಂದು ಸುದ್ದಿಯಾಗಿತ್ತು ಆದ್ರೆ ಶ್ರೀಲೀಲಾ ಕೂಡ ನಿತಿನ್ ಕೈ ಹಿಡಿಯಲಿಲ್ಲ.
ಚಿತ್ರತಂಡ ಅವರ್ನ ಬಿಟ್, ಇವರ್ನ ಬಿಟ್ ಅಂತ ಒಬ್ಬರಾದ ಮೇಲೆ ಒಬ್ಬರನ್ನು ನಾಯಕಿಯಾಗಿ ಕರೆತರುವ ಪ್ರಯತ್ನದಲ್ಲಿದೆ. ಆದರೆ ಯಾರೂ ಫೈನಲ್ ಆಗಿಲ್ಲ. ಸದ್ಯ ಲೇಟೆಸ್ಟ್ ಮಾಹಿತಿ ಪ್ರಕಾರ ರಾಶಿ ಖನ್ನಾ(Rashi Khanna) ನಿತಿನ್(Nithin) ಜೋಡಿಯಾಗಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಚಿತ್ರತಂಡ ಈ ಬಗ್ಗೆ ಇಲ್ಲಿವರೆಗೂ ಕನ್ಫರ್ಮ್ ಮಾಡಿಲ್ಲ. ಒಂದುವೇಳೆ ರಾಶಿ ಖನ್ನಾ ಗ್ರೀನ್ ಸಿಗ್ನಲ್ ನೀಡಿದ್ರೆ ನಾಯಕಿ ಹುಡುಕಾಟಕ್ಕೆ ಕೊನೆಗೂ ಇತಿಶ್ರೀ ಹಾಡಲಿದೆ ಚಿತ್ರತಂಡ.
ಇದೆಲ್ಲದರ ನಡುವೆ ಸಿನಿಮಾ ತಂಡ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಡಿಸೆಂಬರ್ 20ಕ್ಕೆ ‘ರಾಬಿನ್‌ಹುಡ್’ ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಚಿತ್ರವನ್ನು ವೆಂಕಿ ಕುಡುಮುಲ(Venki Kudumula) ನಿರ್ದೇಶಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್(Mythri Movie Makers) ಬ್ಯಾನರ್ ನಡಿ ಮೂಡಿ ಬರ್ತಿರುವ ಚಿತ್ರಕ್ಕೆ ಜಿ.ವಿ.ಪ್ರಕಾಶ್ ಸಂಗೀತ ನಿರ್ದೇಶನವಿದೆ.