Journey To Ayodhya: ಇಡೀ ದೇಶವೇ ಶ್ರೀರಾಮನ ಜಪ ಮಾಡುತ್ತಿದೆ. ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಬಾಲ ರಾಮನ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಸಿನಿಮಾರಂಗದಲ್ಲಿ ರಾಮನ ಕುರಿತ ಸಿನಿಮಾ ನಿರ್ಮಾಣದತ್ತ ಗಮನ ಹೆಚ್ಚಾಗಿದೆ. ಈಗಾಗಲೇ ಸಿನಿ ಜಗತ್ತು ಮೈತಾಲಜಿ ಸಿನಿಮಾಗಳ ಹಿಂದೆ ಬಿದ್ದಿದ್ದು, ಶ್ರೀರಾಮನ ಕುರಿತ ಸಿನಿಮಾಗಳನ್ನು ನಿರ್ಮಾಣ ಮಾಡುವತ್ತ ಅನೇಕ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು ಮುಂದಾಗಿದ್ದಾರೆ. ಅದಕ್ಕೆ ಮುನ್ನುಡಿ ಎಂಬಂತೆ ಟಾಲಿವುಡ್‌ನಲ್ಲಿ ಸಿನಿಮಾ ಘೋಷಣೆಯಾಗಿದೆ.
ಶ್ರೀರಾಮ ನವಮಿಯಂದೇ ಟಾಲಿವುಡ್ ಹೆಸರಾಂತ ನಿರ್ಮಾಣ ಸಂಸ್ಥೆ ರಾಮನ ಕುರಿತ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ಖಾತ್ರಿ ಪಡಿಸಿದೆ. ಟಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣಕ್ಕೆ ಲಗ್ಗೆ ಇಟ್ಟಿರುವ ‘ಚಿತ್ರಾಲಯಂ ಸ್ಟುಡಿಯೋಸ್’(Chitralayam Studios) ತನ್ನ ಪ್ರೊಡಕ್ಷನ್‌ನ ಎರಡನೇ ಸಿನಿಮಾ ಅನೌನ್ಸ್ ಮಾಡಿದೆ. ಶ್ರೀ ರಾಮನ ಕುರಿತ ಈ ಚಿತ್ರಕ್ಕೆ ಸದ್ಯದ ಮಟ್ಟಿಗೆ ‘ಜರ್ನಿ ಟು ಅಯೋಧ್ಯ'(Journey To Ayodhya) ಎಂದು ಟೈಟಲ್ ಇಡಲಾಗಿದ್ದು, ನಿರ್ಮಾಪಕ ವೇಣು ದೊನೆಪುಡಿ ಪೋಸ್ಟರ್ ಲಾಂಚ್ ಮಾಡಿ ರಾಮ ನವಮಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಹಿರಿಯ ನಿರ್ದೇಶಕ ವಿ ಎನ್ ಆದಿತ್ಯ(VN Aditya) ಈ ಐತಿಹಾಸಿಕ ಚಿತ್ರಕ್ಕೆ ಕಥೆ ನೀಡುತ್ತಿದ್ದು, ಯುವ ನಿರ್ದೇಶಕರೊಬ್ಬರು ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಸ್ಟಾರ್ ನಟ-ನಟಿಯರು ಚಿತ್ರದ ಭಾಗವಾಗಲಿದ್ದು, ಸದ್ಯದಲ್ಲೇ ಒಂದೊಂದೇ ಮಾಹಿತಿ ರಿವೀಲ್ ಮಾಡೋದಾಗಿ ವೇಣು ದೊನೆಪುಡಿ(Venu Donepudi) ತಿಳಿಸಿದ್ದಾರೆ. ಬಿಗ್ ಬಜೆಟ್‌ನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗ್ತಿರುವ ಈ ಚಿತ್ರ ಮುಂದಿನ ವರ್ಷ ತೆರೆ ಕಾಣಲಿದೆ.
‘ಚಿತ್ರಾಲತಂ ಸ್ಟುಡಿಯೋಸ್’(ChitralayamStudios)ನಿರ್ಮಾಣದ ಮೊದಲ ಸಿನಿಮಾದಲ್ಲಿ ಗೋಪಿಚಂದ್(Gopichand) ನಟಿಸುತ್ತಿದ್ದಾರೆ. ‘ವಿಶ್ವಂ’(Viswam) ಚಿತ್ರ ಈಗಾಗಲೇ ಸಖತ್ ಬಝ್ ಕ್ರಿಯೇಟ್ ಮಾಡಿದೆ. ಇದೀಗ ಎರಡನೇ ಸಿನಿಮಾವಾಗಿ ಮೈತಾಲಜಿ ಸಬ್ಜೆಕ್ಟ್ ಕೈಗೆತ್ತಿಕೊಂಡಿದೆ ‘ಚಿತ್ರಾಲಯಂ ಸ್ಟುಡಿಯೋಸ್’.