Deepika Padukone: ಬಿಟೌನ್ ಸ್ಪುರದ್ರೂಪಿ ನಟಿ, ಕನ್ನಡತಿ, ಅಭಿಮಾನಿಗಳ ನೆಚ್ಚಿನ ನಟಿ ಡಿಪ್ಪಿ ಅಲಿಯಾಸ್ ಡೀಪಿಕಾ ಪಡುಕೋಣೆ(Deepika Padukone). ಅಂದ-ಚೆಂದ ವಯ್ಯಾರದಲ್ಲಿ ತಮ್ಮದೇ ಆದ ಸ್ವ್ಯಾಗ್ ಹೊಂದಿರುವ ಈಕೆ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಬಿಟೌನ್ ಬಹು ಬೇಡಿಕೆಯ ನಟಿ ಫೈಟರ್ ಸಿನಿಮಾ ರಿಲೀಸ್ ನಂತರ ಒಂದಿಷ್ಟು ವಿಶ್ರಾಂತಿ ಮೂಡ್‌ಗೆ ಜಾರಿದ್ರು, ಆದ್ರೀಗ ಮತ್ತೆ ಶೂಟಿಂಗ್ ಅಂಗಳಕ್ಕೆ ಇಳಿದಿದ್ದು ಡಿಪ್ಪಿ ಕಂಡು ವಾವ್ ಎನ್ನುತ್ತಿದೆ ಪ್ರೇಕ್ಷಕ ವಲಯ.
ಬಿಟೌನ್‌ನಲ್ಲಿ ‘ಸಿಂಗಂ ಅಗೈನ್’(Singham Again) ಸಿನಿಮಾ ಸೆಟ್ಟೇರಿದ್ದು ಗೊತ್ತೇ ಇದೆ. ನಿರ್ದೇಶಕ ರೋಹಿತ್ ಶೆಟ್ಟಿ(Rohit Shetty) ಮತ್ತೊಮ್ಮೆ ಸಿಂಗಂ ಸರಣಿಯನ್ನು ಕೈಗೆತ್ತಿಕೊಂಡಿದ್ದು ಅದ್ದೂರಿಯಾಗಿ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಸಿಗಂ ಅಗೈನ್‌ನಲ್ಲಿ ಮತ್ತೊಮ್ಮೆ ಅಜಯ್ ದೇವಗನ್(Ajay Devgn), ರಣವೀರ್ ಸಿಂಗ್(Ranveer Singh), ಅಕ್ಷಯ್ ಕುಮಾರ್(Akshay Kumar) ಸಮಾಗಮವಾಗಿದೆ. ತ್ರಿವಳಿ ಸ್ಟಾರ್ ನಟರ ಸಂಗಮ ಸಿನಿಮಾ ಮೇಲೆ ಕ್ರೇಜ಼್ ಹೆಚ್ಚಿಸಿದೆ. ದೀಪಿಕಾ ಪಡುಕೋಣೆ(Deepika Padukone) ಕೂಡ ಲೇಡಿ ಸಿಗಂ ಆಗಿ ಖಡಕ್ ಪೊಲೀಸ್ ಅಧಿಕಾರಿ ಶಕ್ತಿ ಶೆಟ್ಟಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಲೇಟೆಸ್ಟ್ ಸಮಾಚಾರ ಏನಪ್ಪಾ ಅಂದ್ರೆ ಡಿಪ್ಪಿ ಚಿತ್ರೀಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಖಾಕಿ ತೊಟ್ಟು ಶೂಟಿಂಗ್ ಅಖಾಡಕ್ಕೆ ಇಳಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರೆ, ಅದ್ರಲ್ಲೇನು ವಿಶೇಷ ಅನ್ನೋದು ಎಲ್ಲರ ಪ್ರಶ್ನೆ. ಆ ಪ್ರಶ್ನೆಗೆ ಉತ್ತರವೂ ಇದೆ. ದೀಪಿಕಾ(Deepika Padukone) ಹಾಗೂ ರಣವೀರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಡಿಪ್ಪಿ ಕೆಲ ತಿಂಗಳ ಹಿಂದೆ ಸಿಹಿ ಸುದ್ದಿ ಹಂಚಿಕೊಂಡಿದ್ರು. ಇದ್ರಿಂದ ಸಿನಿಮಾಗೆ ಬ್ರೇಕ್ ಹಾಕಿ ವಿಶ್ರಾಂತಿಗೆ ಜಾರಿದ್ರು. ಇದೀಗ ಸಿನಿಮಾ ಶೂಟಿಂಗ್‌ಗೆ ಮತ್ತೆ ಎಂಟ್ರಿ ಕೊಟ್ಟಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣವೀರ್(Ranveer Singh) ಹಾಗೂ ದೀಪಿಕಾ(Deepika Padukone) ನಂತರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. 2024 ಫೆಬ್ರವರಿಯಲ್ಲಿ ಡಿಪ್ಪಿ ತಾಯಿಯಾಗ್ತಿರುವ ಬಗ್ಗೆ ಸಿಹಿಸುದ್ದಿ ಹಂಚಿಕೊಂಡಿದ್ರು. ಸೆಪ್ಟಂಬರ್‌ನಲ್ಲಿ ತಾರಾ ಜೋಡಿ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳಲಿದೆ. ‘ಸಿಂಗಂ ಅಗೈನ್’(Singham Again) ಕಳೆದ ವರ್ಷವೇ ಸೆಟ್ಟೇರಿತ್ತು. ಸಿನಿಮಾ ಕೂಡ ಇದೇ ಆಗಸ್ಟ್‌ನಲ್ಲಿ ಬಿಡುಗಡೆ ಮಾಡೋದಕ್ಕೆ ರೋಹಿತ್ ಶೆಟ್ಟಿ ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರಿಂದ ಚಿತ್ರೀಕರಣಕ್ಕೆ ಯಾವುದೇ ತೊಂದರೆಯಾಗಬಾರದೆಂದು ಶೂಟಿಂಗ್‌ನಲ್ಲಿ ಭಾಗಿಯಾಗಿ ವೃತ್ತಿ ಗೌರವ ಮೆರೆದಿದ್ದಾರೆ ದೀಪಿಕಾ. ಡಿಪ್ಪಿ ಕಮಿಟ್‌ಮೆಂಟ್‌ಗೆ ಸಲಾಂ ಹೇಳ್ತಿದ್ದಾರೆ ಅಭಿಮಾನಿಗಳು ಹಾಗೂ ನೆಟ್ಟಿಗರು.
ಟೈಗರ್ ಶ್ರಾಫ್, ಕರೀನಾ ಕಪೂರ್, ಅರ್ಜುನ್ ಕಪೂರ್, ಜಾಕಿ ಶ್ರಾಫ್ ಸೇರಿದಂತೆ ಬಿಟೌನ್ ಸ್ಟಾರ್ ನಟ-ನಟಿಯರ ತಾರಾಬಳಗ ಚಿತ್ರದಲ್ಲಿದೆ. ಬಹು ತಾರಾಗಣದ ಈ ಚಿತ್ರದ ಮೇಲೆ ಸಿನಿರಸಿಕರು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ರೋಹಿತ್ ಶೆಟ್ಟಿ(Rohit Shetty) ಅದ್ದೂರಿ ಸಿನಿಮಾ ಮ್ಯಾಜಿಕ್ ಮಾಡುತ್ತಾ ಅನ್ನೋದಕ್ಕೆ ಉತ್ತರ ಈ ವರ್ಷವೇ ಸಿಗಲಿದೆ.