Chiyaan Vikram: ‘ತಂಗಳನ್’(Thangalaan) ಅಬ್ಬರಿಸಲು ರೆಡಿಯಾಗಿರುವ ನಟ ಚಿಯಾನ್ ವಿಕ್ರಮ್(Chiyaan Vikram) ಅಭಿಮಾನಿಗಳಿಗೆ ಹುಟ್ಟುಹಬ್ಬದಂದೇ ಡಬಲ್ ಧಮಾಕ ನೀಡಿದ್ದಾರೆ. ಒಂದ್ಕಡೆ ‘ತಂಗಳನ್’ ಸ್ಪೆಷಲ್ ವೀಡಿಯೋದಲ್ಲಿ ವಿಕ್ರಮ್ ಅವತಾರ ಕಂಡು ಸಿನಿದುನಿಯಾ ಬೆಕ್ಕಸ ಬೆರಗಾಗಿದ್ರೆ ಅದೇ ದಿನವೇ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ನಟ ಚಿಯಾನ್ ವಿಕ್ರಮ್(Chiyaan Vikram) ಹೊಸದೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ.If You are a Gangstar I am a Monstar ಎಂದು ಕ್ಯಾಪ್ಷನ್ ಇರುವ ‘ವೀರ ಧೀರ ಸೂರನ್’(Veera Dheera Sooran) ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ‘ತಂಗಳನ್’(Thangalaan) ನಂತರ ‘ವೀರ ಧೀರ ಶೂರ’ನಾಗಿ ಬರೋದಾಗಿ ಟೈಟಲ್ ಟೀಸರ್ ಮೂಲಕ ಜಬರ್ದಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ವಿಕ್ರಮ್ 62ನೇ ಸಿನಿಮಾ ಇದಾಗಿದೆ. ಲಾಂಗ್ ಹಿಡಿದು ನಿಂತ ಪೋಸ್ಟರ್, ಶಿವರ್ ತರಿಸುವ ಟೈಟಲ್ ಟೀಸರ್ ಕಣ್ತುಂಬಿಕೊಂಡು ಕಿಕ್ಕೇರಿಸಿಕೊಂಡಿದ್ದಾರೆ ವಿಕ್ರಮ್ ಭಕ್ತಗಣ. ಅಂದ್ಹಾಗೆ ಈ ಚಿತ್ರ ವಿಕ್ರಮ್ ‘ವೀರ ಧೀರ ಸೂರನ್’ ಸಿನಿಮಾದ ಸೀಕ್ವೆಲ್ ಆಗಿದೆ.
‘ವೀರ ಧೀರ ಸೂರನ್’(Veera Dheera Sooran) ಚಿತ್ರದಲ್ಲಿ ಗ್ಯಾಂಗ್ ಸ್ಟಾರ್ ಅವತಾರ ತಾಳಿರುವ ಚಿಯಾನ್(Chiyaan Vikram) ಕಾಳಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸಿದ್ದಾರ್ಥ್ ನಟನೆಯ ‘ಚಿತ್ತ’ ಸಿನಿಮಾ ನಿರ್ದೇಶಿಸಿದ್ದ ಎಸ್ ಯು ಅರುಣ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಮಲಯಾಳಂ ನಟ ಸೂರಜ್ ವೆಂಜರಮೂಡು, ಎಸ್‌ಜೆ.ಸೂರ್ಯ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಯುವ ನಟಿ ದುಶಾರ ವಿಜಯನ್ ವಿಕ್ರಮ್‌ಗೆ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.