Pushpa2: ಅಲ್ಲು ಅರ್ಜುನ್(Allu Arjun) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ2’(Pushpa2). ದಿನದಿಂದ ದಿನಕ್ಕೆ ಎಲ್ಲರ ಅಟೆಂಶನ್ ಗ್ರ್ಯಾಬ್ ಮಾಡ್ತಿದೆ. ಟೀಸರ್ ಝಲಕ್ ಮೂಲಕ ಯೂಟ್ಯೂಬ್‌ನಲ್ಲಿ ಫೈರ್ ಎಬ್ಬಿಸಿರುವ ಈ ಚಿತ್ರ ಈದೀಗ ಪ್ರಿರೀಲಿಸ್ ಬ್ಯುಸಿನೆಸ್‌ನಲ್ಲೂ ದಾಖಲೆ ಬರೆದಿದೆ.
ಆಗಸ್ಟ್ 15ರಂದು ತೆರೆಕಾಣಲು ಸಜ್ಜಾಗಿರುವ ‘ಪುಷ್ಪ2’(Pushpa2) ಸಿನಿಮಾ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಸುಕುಮಾರ್(Sukumar) ಹಾಗೂ ಐಕಾನ್ ಸ್ಟಾರ್ ಈ ಸಿನಿಮಾ ಮೂಲಕ ಹೊಸ ರೆಕಾರ್ಡ್ ಬರೆಯೋಕೆ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಸಿನಿಮಾ ರಿಲೀಸ್ ಮುನ್ನವೇ ಈ ಚಿತ್ರ ತೆಲುಗು ಚಿತ್ರರಂಗದಲ್ಲಿ ಹೊಸ ರೆಕಾರ್ಡ್ ತನ್ನದಾಗಿಸಿಕೊಂಡಿದೆ. ಮೊನ್ನೆ ಮೊನ್ನೆಯಷ್ಷೇ ಹಿಂದಿ ರೈಟ್ಸ್, ಆಡಿಯೋ ರೈಟ್ಸ್, ಟಿವಿ ರೈಟ್ಸ್, ಓಟಿಟಿ ರೈಟ್ಸ್ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡಿದ್ದ ಟೀಂ ಪುಷ್ಪ. ಪ್ರಿರೀಲೀಸ್ ಬ್ಯುಸಿನೆಸ್‌ನಲ್ಲಿ ಸಾವಿರ ಕೋಟಿ ದಾಖಲೆ ಬರೆದಿದೆ.
ರಿಲೀಸ್‌ಗೂ ಮೊದಲೇ ಪುಷ್ಪರಾಜ್ ಬಾಕ್ಸ್ ಆಫೀಸ್ ರೂಲ್ ಮಾಡೋಕೆ ಶುರು ಮಾಡ್ಡಿದ್ದು, ಈಗಾಗಲೇ ಒಟ್ಟಾರೆ ಸಾವಿರ ಕೋಟಿ ಕಲೆಕ್ಷನ್ ಮಾಡಿ ಕಲೆಕ್ಷನ್‌ನಲ್ಲೀ ರೆಕಾರ್ಡ್ ಬರೆದು ಫೈರ್ ಮಾಡಿದೆ. ಹಿಂದಿ ಡಬ್ಬಿಂಗ್ ರೈಟ್ಸ್ 300 ಕೋಟಿಗೆ ಮಾರಿದ ಮೊದಲ ಸಿನಿಮಾ ಎನ್ನಿಸಿಕೊಂಡಿದ್ದ ಅಲ್ಲು ಅರ್ಜುನ್(Allu Arjun) ಸಿನಿಮಾವೀಗ ಟಿವಿ,ಓಟಿಟಿ, ಆಡಿಯೋ ಒಳಗೊಂಡಂತೆ ಸಾವಿರ ಕೋಟಿ ಕ್ಲಬ್ ಸೇರಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಎಲ್ಲವೂ ಸಿನಿಮಾ ಮೇಲಿನ ಕ್ರೇಜ಼್ ಸಿಕ್ಕಾಪಟ್ಟೆ ಹೆಚ್ಚಿಸಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಹೀಗೆ, ರಿಲೀಸ್ ಆದ ಮೇಲೆ ಬಾಕ್ಸ್ ಆಫೀಸ್ ಧೂಳಿಪಟ ಎನ್ನುತ್ತಿದೆ ಸ್ಟೈಲಿಶ್ ಸ್ಟಾರ್ ಭಕ್ತಗಣ.