Prem Nenapirali: ‘ನೆನಪಿರಲಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ, ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ನೆಲೆಯೂರಿದವರು ನಟ ಪ್ರೇಮ್(Prem). ಒಂದಲ್ಲ ಒಂದು ಡಿಫ್ರೆಂಟ್ ಸಿನಿಮಾಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸೋ ಪ್ರೇಮ್‌ಗೆ ಬ್ಲಾಕ್ ಬಸ್ಟರ್ ಗೆಲುವೊಂದು ಹಲವು ವರ್ಷದಿಂದ ಮರೀಚಿಕೆಯಾಗಿಯೇ ಉಳಿದಿದೆ. ಇದ್ರಿಂದ ಸಿನಿಮಾ ಸೆಲೆಕ್ಷನ್ ವಿಚಾರದಲ್ಲಿ ಚ್ಯೂಸಿಯಾಗಿರುವ ಲವ್ಲಿ ಸ್ಟಾರ್(Lovely Star) ಅಳೆದು ತೂಗಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
ಪ್ರೇಮ್(Prem) ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ. ನಯಾ ಸಿನಿಮಾದಲ್ಲಿ ಮತ್ತೆ ಖಾಕಿ ಅವತಾರ ಎತ್ತಿದ್ದಾರೆ. ಹೊಸ ನಿರ್ದೇಶಕ ಹೊಸ ಐಡಿಯಾಲಜಿ, ಫ್ರೆಶ್ ಕಥೆಗೆ ಫಿದಾ ಆಗಿ ನಟಿಸೋಕೆ ರೆಡಿಯಾಗಿದ್ದಾರೆ. ಲವ್ಲಿ ಸ್ಟಾರ್ ಹುಟ್ಟುಹಬ್ಬಕ್ಕೆ ಸಿನಿಮಾ ಫೋಸ್ಟರ್ ಬಿಡುಗಡೆಯಾಗಿದ್ದು, ಮುಹೂರ್ತ ಕೂಡ ನೆರವೇರಿದೆ. ಈ ಮೂಲಕ ‘ಶತ್ರು’ ಸಿನಿಮಾ ನಂತರ ಅಂದ್ರೆ ಒಂದು ದಶಕದ ಬಳಿಕ ಲವ್ಲಿ ಸ್ಟಾರ್ ಮತ್ತೆ ಖಾಕಿ ತೊಟ್ಟು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ತೇಜಸ್ ಬಿ.ಕೆ(Thejas B K) ಚೊಚ್ಚಲ ನಿರ್ದೇಶನದ ಸಿನಿಮಾವಿದು. ಲವ್ಲಿ ಸ್ಟಾರ್‌ರನ್ನು ಖಡಕ್ ಆಗಿ ತೆರೆಮೇಲೆ ತೋರಿಸುವ ಪ್ರಯತ್ನಕ್ಕೆ ಇಳಿದಿರುವ ನಿರ್ದೇಶಕರು ಕಥೆ, ಚಿತ್ರಕಥೆ ಹೆಣೆದು ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ವಾಸುಕಿ ವೈಭವ್(Vasuki Vaibhav) ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರೀಕರಣ ಹೊರಡಲಿರುವ ಚಿತ್ರತಂಡ ಚಿತ್ರದ ತಾರಾಬಳಗದ ಬಗ್ಗೆ ಮಾಹಿತಿ ನೀಡಲಿದೆ. ಇನ್ನೂ ಹೆಸರಡಿದ ಈ ಚಿತ್ರ ಪ್ರೇಮ್ 28ನೇ ಸಿನಿಮಾವಾಗಿದ್ದು, ಹೊಸಬರ ಜೊತೆ ಕೈ ಜೋಡಿಸಿರುವ ಪ್ರೇಮ್(Prem) ನಸೀಬು ಈ ಚಿತ್ರದ ಮೂಲಕ ಬದಲಾಗುತ್ತಾ ಕಾದು ನೋಡಬೇಕು.