Mahesh Babu: ನಿರ್ದೇಶಕ ಎಸ್.ಎಸ್ ರಾಜಮೌಳಿ(S.S.Rajamouli̧̧), ಮಹೇಶ್ ಬಾಬು(Mahesh Babu) ಈಗ ಸೆಂಟರ್ ಆಫ್ ದಿ ಸಿನಿಮಾ ವರ್ಲ್ಡ್. ಇವರಿಬ್ಬರು ಎಲ್ಲೇ ಹೋದ್ರು ಸಖತ್ ಸುದ್ದಿಯಾಗುತ್ತಿದೆ. ಕಾರಣ ಇವರಿಬ್ಬರ ಕಾಂಬಿನೇಶನ್ ಸಿನಿಮಾ ಬರ್ತಿರೋದು. ಇದೀಗ ಹೈದ್ರಾಬಾದ್‌ನಲ್ಲಿ ಜಕ್ಕಣ್ಣ ಹಾಗೂ ಮಹೇಶ್ ಬಾಬು ಒಟ್ಟಿಗೆ ಕಾಣಿಸಿಕೊಂಡಿದ್ದು, ಇಬ್ಬರನ್ನು ಕಂಡು ಫ್ಯಾನ್ಸ್ ಸಿನಿಮಾ ಯಾವಾಗ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಎಸೆದಿದ್ದಾರೆ.
ಮಹೇಶ್ ಬಾಬು(Mahesh Babu)29ನೇ ಸಿನಿಮಾವೀಗ ವರ್ಲ್ಡ್ ಫೇಮಸ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ S S Rajamouli)ಅಖಾಡದಲ್ಲಿದೆ. ಇಬ್ಬರ ಕಾಂಬಿನೇಶನ್ ಸಿನಿಮಾಗೆ ಶುರುವಿಗೂ ಮುಂಚೆಯೇ ಕ್ರೇಜ಼್ ಗೇನು ಬರವಿಲ್ಲ. ಜಕ್ಕಣ್ಣ ಕೂಡ ಭರ್ಜರಿ ಸಿದ್ದತೆಯಲ್ಲಿದ್ದಾರೆ. ಸಿನಿಮಾ ಕಾರಣಕ್ಕಾಗಿ ಈ ಇಬ್ಬರುದ ದುಬೈ ಪ್ಲೈಟ್ ಹತ್ತಿದ್ರು ಅಲ್ಲೊಂದಿಷ್ಟು ಸಿನಿಮಾ ಡಿಸ್ಕಷನ್ ಮಾಡಿದ್ದಾರೆ. ಇದೀಗ ಹೈದಾಬಾದ್ ವಾಪಸ್ಸಾಗಿದ್ದು ಫ್ಯಾನ್ಸ್ ಸಿನಿಮಾ ಬಗ್ಗೆ ಎಕ್ಸೈಟ್‌ಮೆಂಟ್ ನ್ಯೂಸ್ ಸಿಗಬಹುದೇ ಎಂದು ಕಾಯ್ತಿದ್ದಾರೆ.
‘ಗುಂಟೂರು ಖಾರಂ’ ಬಾಕ್ಸ್ ಆಫೀಸ್‌ನಲ್ಲಿ ಮಹೇಶ್ ಬಾಬು(Mahesh Babu) ಗೆ ಹೇಳಿಕೊಳ್ಳುವ ಯಶಸ್ಸು ನೀಡಿಲ್ಲ. ಮುಂದಿನ ಎರಡು ವರ್ಷದ ಕಾಲ್‌ಶೀಟ್ ರಾಜ್‌ಮೌಳಿ(S S Rajamouli)ಗೆ ನೀಡಿದ್ದಾರೆ. ಜೂನ್‌ನಲ್ಲಿ ಸೆಟ್ಟೇರುವ ನಿರೀಕ್ಷೆ ಇರುವ ಈ ಸಿನಿಮಾಗೆ ತಾಲೀಮು ಆರಂಭಿಸಿದ್ದಾರೆ. ಚಿತ್ರಕ್ಕೆ ‘ಮಹಾರಾಜ’ ಟೈಟಲ್ ಇಡಲು ರಾಜಮೌಳಿ ಆಲೋಚನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಸಾವಿರ ಕೋಟಿ ಬಜೆಟ್‌ನಲ್ಲಿ ಸೆಟ್ಟೇರಲಿದೆ ಎಂಬ ಟಾಕ್ ಕೂಡ ಜೋರಾಗಿ ಕೇಳಿ ಬರ್ತಿದ್ದು, ಈ ಎಲ್ಲಾ ಊಹ – ಪೋಹಕ್ಕೂ ಉತ್ತರ ಚಿತ್ರತಂಡ ಯಾವಾಗ ನೀಡುತ್ತೆ ಕಾದು ನೋಡಬೇಕು.