Deepoka:Padukone: ‘ಸಿಂಗಂ ಅಗೈನ್’(Singham Again),,,ಬಾಲಿವುಡ್ ಅಂಗಳದ ಬಹು ನಿರೀಕ್ಷಿತ ಸಿನಿಮಾ. ಆಗಸ್ಟ್‌ನಲ್ಲಿ ಸಿನಿಮಾ ತೆರೆ ಕಾಣುವ ನಿರೀಕ್ಷೆಯಿದೆ. ರೋಹಿತ್ ಶೆಟ್ಟಿ(Rohit Shetty) ಈ ಬಾರಿ ಚಿತ್ರವನ್ನು ಇನ್ನೂ ರೋಚಕವಾಗಿ ಕಟ್ಟಿಕೊಡುವ ಎಲ್ಲಾ ಭರವಸೆಯನ್ನೂ ಮೂಡಿಸಿದ್ದಾರೆ. ಇದೀಗ ಸ್ಟಾರ್ ಡೈರೆಕ್ಟರ್ ರೋಹಿತ್ ಶೆಟ್ಟಿ ತಮ್ಮ ರೀಲ್ & ರಿಯಲ್ ಲೈಫ್ ಹೀರೋ ಯಾರು ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ(Deepika Padukone) ‘ಸಿಂಗಂ ಅಗೈನ್’(Singham Again)ಶೂಟಿಂಗ್ ಅಖಾಡಕ್ಕೆ ಇಳಿದು ಎಲ್ಲರ ಹುಬ್ಬೇರುವಂತೆ ಮಾಡಿದ್ರು. ಪ್ರೆಗ್ನೆಂಟ್ ಆಗಿದ್ರು ಕಮಿಂಟ್‌ಮೆಂಟ್ ಬಿಡದಿದ್ದಕ್ಕೆ ನೆಟ್ಟಿಗರು ಶಬ್ಬಾಸ್ ಎಂದಿದ್ರು. ಇದೀಗ ನಿರ್ದೇಶಕ ನಿರ್ದೇಶಕ ರೋಹಿತ್ ಶೆಟ್ಟಿ(Rohit Shetty) ಕೂಡ ದೀಪಿಕಾರನ್ನು ಹೊಗಳಿದ್ದು ಸ್ಪೆಷಲ್ ಫೋಟೋ ಶೇರ್ ಮಾಡಿ ʼಮೈ ಹೀರೋ ಎಂದು ಬರೆದುಕೊಂಡಿದ್ದಾರೆ. ರೀಲ್ ಹಾಗೂ ರಿಯಲ್ ಎರಡರಲ್ಲೂ ನನ್ನ ಹೀರೋ ಎಂದು ಕ್ಯಾಪ್ಷನ್ ನೀಡಿದ್ದಾರೆ. ಲೇಡಿ ಸಿಂಗಂʼ ಎಂದು ದೀಪಿಕಾ ಪಡುಕೋಣೆಯನ್ನು ಟ್ಯಾಗ್ ಮಾಡಿದ್ದಾರೆ. ರೋಹಿತ್ ಶೆಟ್ಟಿ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ.
ಇಂಟ್ರಸ್ಟಿಂಗ್ ಸಂಗತಿಯಂದ್ರೆ ರೋಹಿತ್ ಶೆಟ್ಟಿ ಕ್ಯಾಪ್ಷನ್ ಜೊತೆಗೆ ಹಂಚಿಕೊಂಡಿರುವ ದೀಪಿಕಾ ಫೋಟೋ ವೈರಲ್ ಆಗಿದೆ. ‘ಸಿಂಗಂ ಅಗೈನ್’ ಪೋಸ್‌ನಲ್ಲಿರುವ ದೀಪಿಕಾ(Deepika Padukone), ಸಿಂಗಂ ಸರಣಿಯ ಅಜಯ್ ದೇವಗನ್(Ajay Devgn) ಐಕಾನಿಕ್ ಪೋಸ್‌ನಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಡಿಪ್ಪಿ ನೀಡಿರೋ ಪೋಸ್, ರೋಹಿತ್ ಶೆಟ್ಟಿ(Rohit Shetty) ಕ್ಯಾಪ್ಷನ್ ಇರುವ ಪೋಸ್ಟ್ ಸಖತ್ ವೈರಲ್ ಆಗಿದೆ.
ಬಿಟೌನ್ ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ(Rohit Shetty)ಸೂಪರ್ ಹಿಟ್ ಸಿನಿಮಾಗಳಾದ ‘ಗೋಲ್‌ಮಾಲ್’ ಸೀರೀಸ್ ಸೃಷ್ಟಿಕರ್ತ. ಆಕ್ಷನ್ ಸಿನಿಮಾ ಹಿಂದೆ ಬಿದ್ದಿರುವ ರೋಹಿತ್ ಸಿಂಗಂ ಮೂಲಕ ಕಮಾಲ್ ಮಾಡಿದ್ರು. ಸಿಂಗಂ ಸರಣಿಯ ನಾಲ್ಕನೆ ಅವತರಣಿಕೆ ‘ಸಿಂಗಂ ಅಗೈನ್’(Singham Again). ಬಿಟೌನ್ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಅಜಯ್ ದೇವಗನ್(Ajay Devgn), ಅಕ್ಷಯ್ ಕುಮಾರ್, ರಣವೀರ್ ಸಿಂಗ್(Ranveer Singh)ಹಾಗೂ ದೀಪಿಕಾ ಪಡುಕೋಣೆ(Deepika Padukone) ಮುಖ್ಯ ತಾರಾಬಳಗದಲ್ಲಿದ್ದಾರೆ.