Ajaneesh Loknath: ಅಜನೀಶ್ ಲೋಕನಾಥ್ ಸ್ಯಾಂಡಲ್ವುಡ್ ಅಂಗಳದ ಪ್ರತಿಭಾವಂತ ಸಂಗೀತ ನಿರ್ದೇಶಕ. ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’ ಇವರ ಬಿಗ್ ಬ್ರೇಕ್ ಸಿನಿಮಾಗಳಾದ್ರೆ, ‘ಕಾಂತಾರ’(Kantara) ಇವರ ಟ್ರೇಡ್ ಮಾರ್ಕ್. ಕಾಂತಾರ ಸಿನಿಮಾ ಮೂಲಕ ಮ್ಯಾಜಿಕ್ ಸೃಷ್ಟಿಸಿದ ಅಜನೀಶ್ ಲೋಕನಾಥ್(Ajaneesh Loknath)ಗೆ ಗಾಂಧೀನಗರ ಮಾತ್ರವಲ್ಲ ಟಾಲಿವುಡ್, ಕಾಲಿವುಡ್ನಲ್ಲೂ ಸಿಕ್ಕಾಪಟ್ಟೆ ಬೇಡಿಕೆ.
ಅಜನೀಶ್(Ajaneesh Loknath)ಗೆ ಕನ್ನಡದ ಜೊತೆಗೆ ತಮಿಳು, ತೆಲುಗು ಇಂಡಸ್ಟ್ರಿಯ್ಲಲಿ ಬೇಡಿಕೆ ಹೆಚ್ಚಾಗಿದೆ. ಕುರಂಗು ಬೊಮ್ಮಾಯಿ, ‘ರಿಚ್ಚಿ’ ಮೂಲಕ ಕಾಲಿವುಡ್ಗೆ ಹೆಜ್ಜೆ ಇಟ್ಟ ಅಜನೀಶ್ ‘ನಿಮಿರ್’, ವಿಜಯ್ ಸೇತುಪತಿ(Vihay Sethupathi) ‘ಮಹಾರಾಜ’ ಸಿನಿಮಾಗೆ ಸಂಗೀತ ನಿರ್ದೇಶನ ನೀಡಿದ್ದಾರೆ. ತೆಲುಗಿನಲ್ಲೂ ಅಜನೀಶ್ಗೆ ಅಪಾರ ಬೇಡಿಕೆಯಿದೆ. ‘ಕಿರಾಕ್ ಪಾರ್ಟಿ’ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಿತರಾಗಿ ‘ನನ್ನು ದೋಚುಕುಂಡುವಟೆ’, ‘ವಿರೂಪಾಕ್ಷ’, ‘ಮಂಗಲವಾರಂ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದು, ‘ಒಡೆಲಾ 2’ ಹಾಗೂ ಬೆಳ್ಳಂಕೊಂಡ ಸಾಯಿ ಶ್ರೀನಿವಾಸ್ ಸಿನಿಮಾಗೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡದಲ್ಲೂ ಸಾಲು ಸಾಲು ಸಿನಿಮಾಗಳಿಗೆ ಅಜನೀಶ್ ಸಹಿ ಮಾಡಿದ್ದಾರೆ. ಸುದೀಪ್(Sudeep) ಅಭಿನಯದ ‘ಮ್ಯಾಕ್ಸ್’, ಉಪೇಂದ್ರ(Upendra) ‘ಯುಐ’(UI), ‘ಕಾಂತಾರ ಪ್ರೀಕ್ವೆಲ್’(Kantara), ಶ್ರೀಮುರಳಿ ‘ಬಘೀರ’, ದರ್ಶನ್(Darshan) ಅಭಿನಯದ ‘ಡೆವಿಲ್’ ಬಹು ನಿರೀಕ್ಷಿಯ ಸಿನಿಮಾಗಳಾಗಿವೆ. ‘ಉಳಿದವರು ಕಂಡಂತೆ’ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದ ಖ್ಯಾತಿ ಇವರದ್ದು. ಫಿಲ್ಮಂ ಫೇರ್, ಐಫಾ ಅವಾರ್ಡ್ ಸೇರಿದಂತೆ ಹಲವು ಅವಾರ್ಡ್ಗಳು ಇವರ ಮ್ಯೂಸಿಕ್ ಮ್ಯಾಜಿಕ್ಗೆ ಒಲಿದು ಬಂದ ಪ್ರಶಸ್ತಿಗಳು.