Salman Khan: ಕಬೀರ್ ಖಾನ್ ನಿರ್ದೇಶನದಲ್ಲಿ ಸಲ್ಮಾನ್ ಖಾನ್ (Salman Khan) ಹಾಗೂ ಕರೀನಾ ಕಪೂರ್(Kareen Kapoor) ನಟಿಸಿದ್ದ ಸಿನಿಮಾ ‘ಭಜರಂಗಿ ಭಾಯಿಜಾನ್’(Bhajrangi Bhaijaan) 2015ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿತ್ತು. ಸಲ್ಲು ಅಭಿನಯಕ್ಕೆ ಫಿದಾ ಆಗಿದ್ರು. ಸಾಕಷ್ಟು ಪ್ರಶಂಸೆ ಪಡೆದುಕೊಂಡ ಈ ಸಿನಿಮಾವೀಗ ಮತ್ತೆ ಲೈಮ್ ಲೈಟ್‌ನಲ್ಲಿದೆ.
ಭಜರಿಂಗಿ ಭಾಯಿಜಾನ್(Bhajrangi Bhaijaan) ಸಿನಿಮಾ ಸೀಕ್ವೆಲ್ ಬರುತ್ತೆ ಎನ್ನುವ ವಿಚಾರ ಬಾಲಿವುಡ್‌ನಲ್ಲಿ ಕೇಳಿ ಬರ್ತಾನೆ ಇತ್ತು. ಆಗಾಗ ಮುನ್ನೆಲೆಗೆ ಬಂದು ಸರಿದು ಹೋಗ್ತಿದ್ದ ವಿಚಾರಕ್ಕೀಗ ಜೀವ ಬಂದಿದೆ. ಸಲ್ಲು(Salman Khan) ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಮೂಲಗಳ ಪ್ರಕಾರ ಈ ಚಿತ್ರದ ಕಥೆ ರೆಡಿಯಾಗಿದೆಯಂತೆ. ಸಲ್ಮಾನ್ ಖಾನ್ ಕಥೆ ಕೇಳಿ ಡೇಟ್ಸ್ ನೀಡುವುದೊಂದೇ ಬಾಕಿಯಿದೆಯಂತೆ. ಇದು ಬಿಟೌನ್ ಪಂಡಿತರ ಅಂತೆಕಂತೆಯಲ್ಲ. ಸ್ವತಃ ನಿರ್ಮಾಪಕರೇ ಹೇಳಿದ ಸತ್ಯ.
ಹೌದು, ನಿರ್ಮಾಪಕ ಕೆ.ಕೆ ರಾಧಾಮೋಹನ್(KK Radhamohan) ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಾಹುಬಲಿ ಖ್ಯಾತಿಯ ವಿಜಯೇಂದ್ರ ಪ್ರಸಾದ್ ರಾಧಾಮೋಹನ್ ಅವರ ಎರಡು ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ. ಎರಡೂ ಕಥೆಗಳು ಫೈನಲ್ ಆಗಿದ್ದು ನಿರ್ಮಾಪಕರು ಅದನ್ನು ಓದಿ ಓಕೆ ಮಾಡಿದ್ದಾರೆ. ಅದರಲ್ಲಿ ಒಂದು ರೌಡಿ ರಾತೋರ್(Rowdy Rathor2) ಸಿನಿಮಾದ ಸೀಕ್ವೆಲ್ ಕಥೆಯಾಗಿದೆ. ‘ರೌಡಿ ರಾಥೋರ್ 2’ ಕಥೆ ರೆಡಿಯಾಗಿದ್ದು ಫೈನಲ್ ಆಗಿದೆ. ಚಿತ್ರದ ತಾರಾಬಳಗದ ಹುಡುಕಾಟದಲ್ಲಿದ್ದೇವೆ ಎಂದಿದ್ದಾರೆ ರಾಧಾಮೋಹನ್.
ಇದೇ ಸಮಯದಲ್ಲಿ ಭಜರಂಗಿ ಭಾಯ್‌ಜಾನ್(Bhajrangi Bhaijaan) ಸೀಕ್ವೆಲ್ ಬಗ್ಗೆಯೂ ಸುಳಿವು ನೀಡಿದ್ದಾರೆ. ‘ಭಜರಂಗಿ ಬಾಯ್‌ಜಾನ್’ ಸಿನಿಮಾ ಕಥೆ ಓದಿದ್ದೇನೆ. ಆದಷ್ಟು ಬೇಗ ಸಲ್ಮಾನ್ ಖಾನ್‌ಗೆ ಕಥೆ ವಿವರಿಸಲಾಗುವುದು. ಮುಂದೇನಾಗುತ್ತೆ ಕಾದು ನೋಡಬೇಕು ಎಂದಿದ್ದಾರೆ. ಈ ಮೂಲಕ ಭಜರಂಗಿ ಭಾಯಿಜಾನ್ ಸೀಕ್ವೆಲ್ ಬಂದೇ ಬರುತ್ತೆ ಎನ್ನುವುದಕ್ಕೆ ಖಾತ್ರಿ ಸಿಕ್ಕಿದೆ. ಸದ್ಯ ಸಲ್ಮಾನ್ ಖಾನ್(Salman Khan) ‘ಸಿಕಂದರ್’ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದು ಈ ಸಿನಿಮಾಗೆ ಯಾವಾಗ ಅಸ್ತು ಅಂತಾರೆ ಕಾದುನೋಡಬೇಕು.