Tanisha Kuppanda: ಬಿಗ್‌ಬಾಸ್ ಮೂಲಕ ಖ್ಯಾತಿಗಳಿಸಿರುವ ಕಿರುತೆರೆ ಹಾಗೂ ಸಿನಿಮಾ ನಟಿ ತನಿಷಾ ಕುಪ್ಪಂಡ(Tanisha Kuppanda). ಬಿಗ್‌ಬಾಸ್ ನಂತರ ಮತ್ತೆ ಸಿನಿಮಾ ನಟನೆಯಲ್ಲಿ ಬ್ಯುಸಿಯಾಗಿರುವ ಈಕೆ ಹೋಟೆಲ್ ಉದ್ಯಮಿ ಕೂಡ ಹೌದು. ಬಿಗ್‌ಬಾಸ್ ನಂತರ ಇವರ ಹೆಸರು ವರ್ತೂರ್ ಸಂತೋಷ್(Varthur Santhosh) ಜೊತೆ ತಳುಕು ಹಾಕಿಕೊಂಡಿದ್ದು ಪ್ರೀತಿ - ಗೀತಿ ಏನಿಲ್ಲ ಅಂತೇಳಿ ತಮ್ಮ ಹಳೆಯ ಲವ್ ಬ್ರೇಕಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಆರು ವರ್ಷ ಪ್ರೀತಿಸಿದ ಹುಡುಗನ ಜೊತೆಗಿನ ಬ್ರೇಕಪ್ ವಿಚಾರ ತನಿಷಾ(Tanisha Kuppanda) ಹೇಳಿಕೊಂಡಿದ್ದಾರೆ. ಆತನ ಜೊತೆ ಮದುವೆ ಆಗಬೇಕು ಎಂದು ಆಸೆ ಪಟ್ಟಿದ್ದೆ. ಆದರೆ ಆತ ತುಂಬಾ ಪೊಸೆಸಿವ್ ಆಗಿದ್ದ. ಅವರ ಪೊಸಿಸೆವ್ ಕಾರಣದಿಂದ ಅಶ್ವಿನಿ ನಕ್ಷತ್ರ ಸೀರಿಯಲ್ ಅರ್ಧಕ್ಕೆ ಬಿಡಬೇಕಾಯಿತು. ಅವರೇ ನನ್ನ ಜೀವ ಎಂದುಕೊಂಡು ಬರುವ ಅವಕಾಶಗಳನ್ನು ಕೈಚೆಲ್ಲಿದೆ. ತುಂಬಾ ಅನುಮಾನ ಪಡುತ್ತಿದ್ದ. ನಮ್ಮ ಮನೆಯಲ್ಲಿ ನಟನೆ ಒಪ್ಪೋದಿಲ್ಲ ಎಂದು ನನಗೆ ನಟನೆ ಮಾಡದಂತೆ ಒತ್ತಡ ಹೇರುತ್ತಿದ್ದ. ಶೂಟಿಂಗ್ ಸಮಯದಲ್ಲಿ ನನಗೆ ಗೊತ್ತಾಗದ ಹಾಗೆ ಸೆಟ್‌ಗೆ ಬಂದು ನಾನು ಏನ್ ಮಾಡ್ತಿದ್ದೇನೆ ಎಂದು ಗಮನಿಸುತ್ತಿದ್ದ. ಸೆಟ್‌ನಲ್ಲಿರುವವರಿಗೆ ಅಣ್ಣ ಎಂದು ಕರೆಯಬೇಕು ಎಂದು ರೂಲ್ಸ್ ಮಾಡಿದ್ರು. ಇದೆಲ್ಲವೂ ಬರು ಬರುತ್ತಾ ತೀರಾ ಕಿರಿಕಿಯಾಗಿ ಬ್ರೇಕಪ್ ಮಾಡಿಕೊಳ್ಳಬೇಕಾಯ್ತು ಎಂದು ತಮ್ಮ ಪಾಸ್ಟ್ ಲೈಫ್ ಬಗ್ಗೆ ಒಪನ್ ಆಗಿ ಮಾತನಾಡಿದ್ದಾರೆ.
ಮಂಗಳ ಗೌರಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ತನಿಷಾ(Tanisha Kuppanda)’ಇಂತಿ ನಿಮ್ಮ ಆಶಾ’, ‘ಸರಯೂ’, ‘ಸತ್ಯಂ ಶಿವಂ ಸುದರಂ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ದಂಡುಪಾಳ್ಯ’, ‘ಉಂಡೆನಾಮ’, ‘ಪೆಂಟಗಾನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಈಕೆ ಬಿಗ್ ಬಾಸ್ 10ನೇ ಸೀಸನ್ ಭಾಗವಹಿಸಿ ಖ್ಯಾತಿ ಗಳಿಸಿಕೊಂಡಿದ್ದಾರೆ.