Kamal Haasan: ‘ಥಗ್ ಲೈಫ್’(Thug Life) ಕಮಲ್ ಹಾಸನ್ ಅಭಿನಯದ ಹೈ ವೋಲ್ಟೇಜ್ ಸಿನಿಮಾ. ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ(Mani ratnam) ಆಕ್ಷನ್ ಕಟ್ ಹೇಳ್ತಿದ್ದಾರೆ. ಇಬ್ಬರ ಕಾಂಬಿನೇಶನ್ ಸಿನಿಮಾ ಅಂದ್ರೆ ಕೇಳಬೇಕಾ..?. ಕ್ರೇಜ಼್, ಕ್ಯೂರಿಯಾಸಿಟಿಗೇನು ಬರವಿಲ್ಲ. ಫಸ್ಟ್ ಲುಕ್ ಮೂಲಕ ಗಮನ ಸೆಳೆದ ಚಿತ್ರತಂಡ ಚಿತ್ರೀಕರಣ ಆರಂಭಿಸಿದೆ.
ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಕಮಲ್ ಹಾಸನ್(Kamal Haasan) ‘ಥಗ್ ಲೈಫ್’ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನ್ಯೂ ಡೆಲ್ಲಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ನಟ ಸಿಂಬು ಸೇರಿದಂತೆ, ತ್ರಿಶಾ. ದುಲ್ಕರ್ ಸಲ್ಮಾನ್ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 1987ರಲ್ಲಿ ತೆರೆಕಂಡ ‘ನಾಯಕನ್’ ನಂತರ ಬರೋಬ್ಬರಿ ಮೂರು ದಶಕದ ಬಳಿಕ ಈ ಜೋಡಿ ತೆರೆಮೇಲೆ ಮೋಡಿ ಮಾಡಲು ರೆಡಿಯಾಗಿದೆ. ಫಸ್ಟ್ ಲುಕ್ ಮೂಲಕ ಗಮನ ಸೆಳೆದ ‘ಥಗ್ ಲೈಫ್’(Thug Life) ಚಿತ್ರದಲ್ಲಿ ಕಮಲ್ ಮೂರು ಅವತಾರವೆತ್ತಲಿದ್ದಾರೆ.
2022ರಲ್ಲೇ ಅನೌನ್ಸ್ ಆದ ಚಿತ್ರವಿದು. 2023ರಲ್ಲಿ ಟೈಟಲ್ ರಿವೀಲ್ ಮಾಡಲಾಗಿತ್ತು. ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಮಣಿರತ್ನಂ, ‘ಇಂಡಿಯನ್-2’(Indian2)ಸಿನಿಮಾದಲ್ಲಿ ಕಮಲ್(Kamal Haasan) ಬ್ಯುಸಿಯಾಗಿದ್ದರಿಂದ ಈ ವರ್ಷ ಶೂಟಿಂಗ್ ಆರಂಭಿಸಿದೆ ಚಿತ್ರತಂಡ. ಕಮಲ್ ವೃತ್ತಿ ಜೀವನದ 234ನೇ ಸಿನಿಮಾ ಇದಾಗಿದೆ. ರಂಗರಾಯ, ಶಕ್ತಿವೇಲ್ ಹಾಗೂ ನಾಯಕಾರ್ ಎಂಬ ಮೂರು ಪಾತ್ರದಲ್ಲಿ ‘ಉಳಗ ನಾಯಗನ್’ ತೆರೆಮೇಲೆ ಕಾಣಸಿಗಲಿದ್ದಾರೆ.
ಸಿಂಬು, ದುಲ್ಕರ್ ಸಲ್ಮಾನ್, ಜಯಂ ರವಿ, ತ್ರಿಶಾ(Trisha Krishnan), ಅಭಿರಾಮಿ, ಗೌತಮ್ ಕಾರ್ತಿಕ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ. ಎ.ಆರ್.ರೆಹಮಾನ್(AR.Rahman) ಸಂಗೀತ ನಿರ್ದೇಶನ ‘ಥಗ್ ಲೈಫ್’ ಚಿತ್ರಕ್ಕಿದೆ.