Chiranjeevi: ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ 154ನೇ ಸಿನಿಮಾ ‘ವಿಶ್ವಂಭರ’(Vishwambhara). ಕಳೆದ ವರ್ಷ ಸೆಟ್ಟೇರಿದ ಸಿನಿಮಾ ಚಿತ್ರೀಕರಣ ಹೈದ್ರಾಬಾದ್‌ನಲ್ಲಿ ಬಿಡುವಿಲ್ಲದೆ ನಡೆಯುತ್ತಿದೆ. ವಸಿಷ್ಠ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಸಿನಿಮಾ ಫ್ಯಾಂಟಸಿ ಸಬ್ಜೆಕ್ಟ್ ಒಳಗೊಂಡಿದೆ. ಮೆಗಾ ಸ್ಟಾರ್ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದು ಸಿನಿಮಾಗಾಗಿ ತೂಕ ಕೂಡ ಇಳಿಸಿಕೊಂಡಿದ್ದಾರೆ.
‘ವಿಶ್ವಂಭರ’(Vishwambhara) ಶೂಟಿಂಗ್ ಹೈದ್ರಾಬಾದ್‌ನಲ್ಲಿ ನಡೆಯುತ್ತಿದೆ. ಸದ್ಯ ಚಿತ್ರದ ಇಂಟರ್ವಲ್ ಸೀನ್ ಫೈಟಿಂಗ್ ಚಿತ್ರೀಕರಣ ಚಾಲ್ತಿಯಲ್ಲಿದೆ. ಇಂಟ್ರಸ್ಟಿಂಗ್ ಅಂದ್ರೆ ಚಿತ್ರದ ಇಂಟರ್ವಲ್ ಫೈಟ್ ದೃಶ್ಯಗಳನ್ನೇ ಬರೋಬ್ಬರಿ 26ದಿನ ಚಿತ್ರೀಕರಿಸುತ್ತಿದೆ ಚಿತ್ರತಂಡ. ಖ್ಯಾತ ಸಾಹಸ ನಿರ್ದೇಶಕರಾದ ರಾಮ-ಲಕ್ಷ್ಮಣ್ ಸಾರಥ್ಯದಲ್ಲಿ ಫೈಟಿಂಗ್ ಸೀನ್ ಸೆರೆ ಹಿಡಿಯಲಾಗುತ್ತಿದೆ. ಫೈಟಿಂಗ್ ದೃಶ್ಯಕ್ಕೆಂದೆ ದುಬಾರಿ ವೆಚ್ಚದಲ್ಲಿ ಸೆಟ್ ಹಾಕಲಾಗಿದ್ದು, 54ಅಡಿ ಹನುಮಾನ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಇಂಟೆನ್ಸ್ ಹಾಗೂ ರಿಸ್ಕಿ ಫೈಟಿಂಗ್ ಸೀನ್‌ಗಳಲ್ಲಿ ಚಿರಂಜೀವಿ(Chiranjeevi) ತೊಡಗಿಸಿಕೊಂಡಿದ್ದಾರೆ. ಅಷ್ಟೇಯಲ್ಲ, ಕೆರಿಯರ್‌ನ ಬಹು ನಿರೀಕ್ಷಿತ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾರಂತೆ ಮೆಗಾ ಸ್ಟಾರ್.
ರಾಮ-ಲಕ್ಷ್ಮಣ್ ಈ ಚಿತ್ರಕ್ಕೆಂದೇ ವಿಶೇಷ ರೀತಿಯಲ್ಲಿ ಸಾಹಸ ದೃಶ್ಯಗಳನ್ನು ಕಟ್ಟಿಕೊಡುತ್ತಿದ್ದು, ಹಿಂದೆಂದೂ ನೋಡಿರದ ರೀತಿಯಲ್ಲಿ ಮಾಸ್ ಫೈಟಿಂಗ್ ದೃಶ್ಯಗಳನ್ನು ‘ವಿಶ್ವಂಭರ’ಕ್ಕಾಗಿ ಹೆಣೆದಿದ್ದಾರೆ. ಅದಕ್ಕೆ ತಕ್ಕಂತೆ ಚಿರಂಜೀವಿ(Chiranjeevi) ಸಾಥ್ ನೀಡಿದ್ದು ಇದೇ ಮೊದಲ ಬಾರಿಗೆ ಒಂದು ಫೈಟಿಂಗ್ ಸೀನ್‌ಗಾಗಿ 26 ದಿನ ಡೇಟ್ಸ್ ನೀಡಿದ್ದಾರೆ. ತೂಕ ಇಳಿಸಿಕೊಂಡಿರುವ ಚಿರಂಜೀವಿ ಸಕತ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.
ಚಿತ್ರದಲ್ಲಿ ತ್ರಿಶಾ(Trisha Krishnan) ನಾಯಕಿಯಾಗಿ ನಟಿಸುತ್ತಿದ್ದು, ಸುರಭಿ, ಇಶಾ ಚಾವ್ಲಾ, ರಾವ್ ರಮೇಶ, ಕುನಾಲ್ ಕಪೂರ್ ಸೇರಿದಂತೆ ಹಲವು ತಾರೆಯರು ತಾರಾಗಣದಲ್ಲಿದ್ದಾರೆ. ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. 2025ಕ್ಕೆ ‘ವಿಶ್ವಂಭರ’ ಚಿತ್ರ ಬಿಡುಗಡೆಯಾಗುತ್ತಿದೆ.