Rajinikanth: ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಹಾಗೂ ಲೋಕೇಶ್ ಕನಕರಾಜ್(Lokesh Kanagaraj) ಸಿನಿಮಾದ ಟೈಟಲ್ ಕೊನೆಗೂ ರಿವೀಲ್ ಆಗಿದೆ. ಟ್ವಿಟ್ಟರ್‌ನಲ್ಲಿ ಕಳೆದೆರಡು ದಿನದಿಂದ ಟ್ರೆಂಡಿಂಗ್‌ನಲ್ಲಿದ್ದ ‘ತಲೈವರ್171’ಗೆ ಉತ್ತರ ಸಿಕ್ಕಿದೆ. ಚಿತ್ರಕ್ಕೆ ‘ಕೂಲಿ’(Coolie) ಎಂದು ಟೈಟಲ್ ಇಡಲಾಗಿದೆ. ಟೈಟಲ್ ಕಂಡು ಸೂಪರ್ ಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಟೈಟಲ್ ಟೀಸರ್ ಕಂಡು ಕ್ರೇಜಿ಼ಯಾಗಿದ್ದಾರೆ
‘ವಿಕ್ರಮ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದಂತೆ ಟ್ಯಾಲೆಂಟೆಡ್ ಯುವ ನಿರ್ದೇಶಕ ಲೋಕೇಶ್ ಕನಕರಾಜ್ ಭೇಡಿಕೆಯೂ ಹೆಚ್ಚಾಗಿತ್ತು. ‘ಲಿಯೋ’ ನಂತರ ಕ್ರೇಜ಼್ ಸೃಷ್ಟಿಸಿದ್ದೇ ಲೋಕೇಶ್ ಹಾಗೂ ತಲೈವಾ ಕಾಂಬಿನೇಶನ್. ಇಬ್ಬರೂ ಜೊತೆಯಾಗಿ ಸಿನಿಮಾ ಮಾಡ್ತಾರೆ ಅಂದಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ಟಾಪಿಕ್ ಟ್ರೆಂಡಿಂಗ್‌ನಲ್ಲಿತ್ತು. ಈ ಕಾಂಬೋಗೆ ಟೈಟಲ್ ಏನಿರುತ್ತೆ ಅನ್ನೋದನ್ನೇ ಎದುರು ನೋಡುತ್ತಿತ್ತು ಸಿನಿಲೋಕ. ಅದಕ್ಕೀಗ ಉತ್ತರ ಸಿಕ್ಕಿದೆ. ‘ಕೂಲಿ’(Coolie) ಟೈಟಲ್ ಟೀಸರ್ ರಿಲೀಸ್ ಆಗಿ ಕಿಕ್ಕೇರಿಸಿದೆ. ರಜನಿ ಸ್ವ್ಯಾಗ್‌ಗೆ ಫಿದಾ ಆಗಿದ್ದಾರೆ ವರ್ಲ್ಡ್ ವೈಡ್ ಫ್ಯಾನ್ಸ್.
1981ರಲ್ಲಿ ತೆರೆಕಂಡ ‘ಥಿ’(Thee) ಸಿನಿಮಾದಲ್ಲಿ ಸೂಪರ್ ಸ್ಟಾರ್ ಕೂಲಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ತಲೈವಾ ನಿರ್ವಹಿಸಿದ್ದ ಪಾತ್ರವನ್ನೇ ಸಿನಿಮಾ ಟೈಟಲ್ ಆಗಿ ಇಟ್ಟಿದ್ದು ಕ್ಯೂರಿಯಾಸಿಟಿ ಮೂಡಿಸಿದೆ. ಕಲಾನಿತಿ ಮಾರನ್ ಬಂಡವಾಳ ಹೂಡುತ್ತಿರುವ ಈ ಚಿತ್ರ ಬಿಗ್ ಬಜೆಟ್‌ನಲ್ಲಿ ಮೂಡಿ ಬರಲಿದೆ. ʼಜೈಲರ್ʼ ಸಿನಿಮಾ ಸಕ್ಸಸ್ ಬಳಿಕ ರಜನಿ(Rajinikanth) ‘ವೆಟ್ಟೈಯನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಚಿತ್ರೀಕರಣ ಮುಗಿಯುತ್ತಿದ್ದಂತೆ ಯಂಗ್ ಡೈರೆಕ್ಟರ್ ಸಿನಿಮಾ ಅಖಾಡಕ್ಕೆ ಬರಲಿದ್ದಾರೆ.