South Stars: ಸಿನಿಮಾ ಮಾರ್ಕೆಂಟ್ ದೊಡ್ಡದಾಗಿದೆ. ಭಾರತೀಯ ಸಿನಿಮಾಗಳು ಗ್ಲೋಬಲ್ ಲೆವೆಲ್‌ನಲ್ಲಿ ಸೌಂಡ್ ಮಾಡ್ತಿವೆ. ಸೂಪರ್ ಸ್ಟಾರ್ ಸಿನಿಮಾಗಳು ನೂರು ಕೋಟಿ ಇನ್ನೂರು ಕೋಟಿ ಕಲೆಕ್ಷನ್ ಆದಾಗ ಅಬ್ಬಾ ಅಂತಿದ್ದ ಕಾಲ ಹೋಯ್ತು. ಈಗೇನಿದ್ರು ಎಷ್ಟು ಸಾವಿರ ಕೋಟಿ ಕಲೆಕ್ಷನ್ ಆಯ್ತು ಅನ್ನೋ ಲೆಕ್ಕಾಚಾರ. ಇದೆಲ್ಲದರ ಪರಿಣಾಮ ನಟ- ನಟಿಯರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.
ಈಗೇನಿದ್ದರೂ ಪ್ಯಾನ್ ಇಂಡಿಯಾ ಸಿನಿಮಾ ಹವಾ. ದೊಡ್ಡವರ ದೊಡ್ಡ ಬಜೆಟ್ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೂಡಬೇಕಂದ್ರೆ ಬಜೆಟ್ ಕೂಡ ಇನ್ನೂರು ಮುನ್ನೂರು ಕೋಟಿ ಬೇಕು. ಇನ್ನೊಂದು ಕಡೆ ಸಿನಿಮಾ ಹಿಟ್ ಆಗ್ತಿದ್ದಂತೆ ಸ್ಟಾರ್ ವ್ಯಾಲ್ಯೂ ಕೂಡ ಹೆಚ್ಚಾಗಿ ನಟರೂ ಸಿನಿಮಾ ತಂಡದ ಮುಂದೆ ತಮ್ಮ ಡಿಮ್ಯಾಂಡ್ ಇಡ್ತಿದ್ದಾರೆ. ಸಲ್ಮಾನ್ ಖಾನ್(Salman Khan) 100 ಕೋಟಿ ತೆಗೆದುಕೊಂಡು ರೆಕಾರ್ಡ್ ಕ್ರಿಯೇಟ್ ಮಾಡಿದ ಕಾಲ ಮುಗಿದಿದೆ. ಈಗ ಒಂದು ಬಿಗ್ ಹಿಟ್ ನೀಡಿದವರೆಲ್ಲ ಕೋಟಿ ಕದ ತಟ್ಟುತ್ತಿದ್ದಾರೆ.
ಇತ್ತೀಚೆಗೆ ರಜನಿಕಾಂತ್(Rajinikanth) ಜೈಲರ್ ಸೀಕ್ವೆಲ್‌ಗೆ 250 ಕೋಟಿ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿಯಾಗಿತ್ತು. ಸೂಪರ್ ಸ್ಟಾರ್ ಸಂಭಾವನೇ ಬೆನ್ನಲ್ಲೇ ಸೌತ್ ಸ್ಟಾರ್‌ಗಳ ಸಂಭಾವನೆ ವಿಚಾರ ಸಖತ್ ಸುದ್ದಿಯಲ್ಲಿದೆ. ಸದ್ಯದ ಬಝ್ ಪ್ರಕಾರ ಪ್ರಭಾಸ್ (Prabhas), ಅಲ್ಲು ಅರ್ಜುನ್ (Allu Arjun), ರಾಮ್‌ಚರಣ್ (Ram Charan) ಸೇರಿದಂತೆ ಹಲವರು ತಮ್ಮ ಸಂಭಾವನೆ ಮೊತ್ತದಲ್ಲಿ ನೂರು ಕೋಟಿ ಗಡಿ ದಾಟಿದ್ದಾರಂತೆ.
ಬಾಹುಬಲಿ ಖ್ಯಾತಿಯ ಪ್ರಭಾಸ್(Prabhas) ಕಲ್ಕಿ(Kalki)ಗಾಗಿ 200 ಕೋಟಿ ತೆಗೆದುಕೊಂಡಿದ್ದಾರಂತೆ, ಅಲ್ಲು ಅರ್ಜುನ್ ಪುಷ್ಪ2(Pushpa)ಗಾಗಿ 150 ಕೋಟಿ, ರಾಮ್ ಚರಣ್ 100 ಕೋಟಿ, ಜೂ.ಎನ್‌ಟಿಆರ್(Jr.NTR) ದೇವರ ಚಿತ್ರಕ್ಕೆ 75 ಕೋಟಿ ತೆಗೆದುಕೊಂಡಿದ್ದು, ಮುಂಬರುವ ಸಿನಿಮಾಗಳಿಗೆ 100 ಕೋಟಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರಂತೆ, ನಟ ಮಹೇಶ್ ಬಾಬು ಕೂಡ ಸಂಭಾವನೆ ಹೆಚ್ಚಿಸಿಕೊಂಡಿದ್ದು ರಾಜಮೌಳಿ ಸಿನಿಮಾಕ್ಕೆ 100ಕೋಟಿ ಸಂಭಾವನೆ ಪಡೆಯಲಿದ್ದಾರಂತೆ.
ಒಂದ್ಕಾಲದಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯೋದು ಬಿಟೌನ್‌ಗೆ ಸೀಮಿತವಾಗಿತ್ತು. ಅದು ಬಿಟ್ಟರೆ ಸೌತ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಹೆಚ್ಚು ಸಂಭಾವನೆ ಪಡೆಯುವ ನಟನಾಗಿದ್ದರು. ಆದ್ರೀಗ ಸ್ಟಾರ್ ನಟರೆಲ್ಲ ತಮ್ಮ ಮಾರ್ಕೆಟ್ ದೊಡ್ಡದಾಗುತ್ತಿದ್ದಂತೆ ನೂರು ಕೋಟಿ ಗೆರೆ ದಾಟಿ ಸಂಭಾವನೆ ಕೇಳುತ್ತಿರೋದು ಕಾಮನ್ ಸಂಗತಿಯಾಗಿದೆ.