Aamir Khan: ‘ಲಾಲ್ ಸಿಂಗ್ ಚಡ್ಡ’ ಸಿನಿಮಾ ನಂತರ ಬ್ರೇಕ್ ತೆಗೆದುಕೊಂಡಿದ್ದ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಶೂಟಿಂಂಗ್ ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾರೆ. ತಮ್ಮ ಮುಂಬರುವ ಸಿನಿಮಾ ‘ಸಿತಾರೆ ಜಮೀನ್ ಪರ್’(Sitaare Zameen Par) ಸಿನಿಮಾ ಶೂಟಿಂಗ್‌ಗಾಗಿ ಡೆಲ್ಲಿಗೆ ಬಂದಿಯಲಿದ್ದಾರೆ ಆಮೀರ್ ಖಾನ್. ಮೇನಲ್ಲಿ ಸಿತಾರೆ ಜಮೀನ್ ಪರ್ ಶೂಟಿಂಗ್ ಆರಂಭವಾಗಲಿದ್ದು, ನೆಚ್ಚಿನ ನಟನ ಸಿನಿಮಾ ಕಳೆದ ವರ್ಷವೂ ನೋಡಿರದ ಭಕ್ತಗಣ. ಸಿನಿಮಾ ಅಪ್ಡೇಟ್ ನೋಡಿ ಸಂತಸದಲ್ಲಿದ್ದಾರೆ.
ಆಮೀರ್ ಖಾನ್(Aamir Khan) ಹಾಗೂ ಹತ್ತಕ್ಕೂ ಹೆಚ್ಚು ಮಕ್ಕಳು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಡೆಲ್ಲಿಯ ಹಲವು ಭಾಗಗಳನ್ನು ಚಿತ್ರೀಕರಣಕ್ಕಾಗಿ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ. ‘ಸಿತಾರೆ ಜಮೀನ್ ಪರ್’(Sitaare Zameen Par) ಅನೌನ್ಸ್ ಆದಾಗ ಆಮೀರ್ ಈ ಸಿನಿಮಾ ನಿಮ್ಮನ್ನು ತುಂಬಾ ರಂಜಿಸಲಿದೆ. ನಗಿಸಲಿದೆ. ಸಿನಿಮಾ ಥೀಮ್ ತಾರೆ ಜಮೀನ್ ಪರ್ ರೀತಿಯೇ ಇರಲಿದೆ ಆದ್ರೆ ಆ ಸಿನಿಮಾ ಕಣ್ಣಲ್ಲಿ ನೀರು ತರಿಸಿತ್ತು, ಇದು ಆ ರೀತಿಯದ್ದೇ ಬೇರೆ ಆಯಾಮದ ಸಿನಿಮಾ. ಅದಕ್ಕಾಗಿಯೇ ತುಂಬಾ ಆಲೋಚಿಸಿ ಟೈಟಲ್ ಇಡಲಾಗಿದೆ ಎಂದಿದ್ದರು.
ಬೇರೆ ಬೇರೆ ಸಮಸ್ಯೆಗಳಿಂದ ಬಳಲುತ್ತಿರುವ ಒಂಭತ್ತು ಹುಡುಗರ ಕಹಾನಿ ಸುತ್ತ ಚಿತ್ರ ಹೆಣೆಯಲಾಗಿದೆ. ಆಮೀರ್ ಸಿನಿಮಾ ಎಂದರೆ ಅಲ್ಲಿ ವಿಶೇಷತೆ ಇದೇ ಇರುತ್ತೆ. ಈ ಚಿತ್ರ ಅದಕ್ಕೆ ಹೊರತಾಗಿಲ್ಲ. ಆರ್. ಎಸ್. ಪ್ರಸನ್ನ ನಿರ್ದೇಶನದಲ್ಲಿ ಚಿತ್ರ ಮೂಡಿ ಬರ್ತಿದೆ. 2007ರಲ್ಲಿ ತೆರೆಕಂಡ ‘ತಾರೆ ಜಮೀನ್ ಪರ್’ ಸಿನಿಮಾದಲ್ಲಿ ನಟಿಸಿದ್ದ ಬಾಲನಟ ದರ್ಶೀಲ್ ಸಫರಿ ಈ ಚಿತ್ರದಲ್ಲೂ ಮಿಂಚಲಿದ್ದಾರೆ. ನಟಿ ಜೇನಿಲಿಯಾ(Genelia) ಚಿತ್ರದ ಮುಖ್ಯ ತಾರಾಗಣದಲ್ಲಿ ಬಣ್ಣ ಹಚ್ಚಿದ್ದಾರೆ.