Ajith Kumar: ಕಾಲಿವುಡ್ ಸ್ಟಾರ್ ನಟ ಅಜಿತ್(Ajith Kumar) ಅಪಾರ ಅಭಿಮಾನಿ ಬಳಗಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ತಲಾ ಅಭಿಮಾನಿಗಳು ಈ ಸುದ್ದಿ ಕೇಳಿದ್ದಲ್ಲಿಂದ ಥ್ರಿಲ್ ಆಗಿದ್ದಾರೆ. ಸೆಲೆಬ್ರೇಶನ್ ಮೂಡ್‌ನಲ್ಲಿದ್ದಾರೆ. ಅದಕ್ಕೆ ಕಾರಣ ತಲಾ ಅಜಿತ್ ಸಿನಿಮಾದ ರಿರಿಲೀಸ್.
ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ‘ಬಿಲ್ಲ’(Billa) ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಈ ಸುದ್ದಿ ಕಿವಿಗೆ ಬಿದ್ದಲ್ಲಿಂದ ತಲಾ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಮೊದಲೇ ಮೇ 1ರಂದು ತಲಾ ಅಜಿತ್(Ajith Kumar) ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ಸಖತ್ ಸೆಲೆಬ್ರೆಶನ್‌ಗೆ ಪ್ಲ್ಯಾನ್ ಮಾಡಿಕೊಂಡಿದ್ದ ಮಂದಿ ಇದೀಗ ‘ಬಿಲ್ಲ’ ಸಿನಿಮಾ ರಿರಿಲೀಸ್ ಸುದ್ದಿ ಕೇಳಿ ಖುಷಿಯ ಜೋಶ್ ಡಬಲ್ ಮಾಡಿಕೊಂಡಿದ್ದಾರೆ.
‘ಬಿಲ್ಲ’(Billa) ಸಿನಿಮಾ ತಮಿಳುನಾಡಿನ ಹಲವು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. 2007ರಲ್ಲಿ ತೆರೆಕಂಡ ಆಕ್ಷನ್ ಎಂಟಟೈನ್ಮೆಂಟ್ ಸಿನಿಮಾ ಇದಾಗಿದ್ದು, ವಿಷ್ಣುವರ್ಧನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ತೆರೆಮೇಲೆ ಆಕ್ಷನ್ ಹೀರೋ ಆಗಿ ಧಮಾಕ ಮಾಡಿದ್ದ ತಲಾ ಅಭಿಮಾನಿಗಳಿಗೆ ಕಿಕ್ ನೀಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಕಂಡ ಸಿನಿಮಾವೀಗ ಅಜಿತ್(Ajith Kumar) ಹುಟ್ಟುಹಬ್ಬದ ಪ್ರಯುಕ್ತ ಮತ್ತೆ ಬೆಳ್ಳಿ ಪರದೆ ಮೇಲೆ ಬರಲಿದೆ. ಈ ವರ್ಷ ಅಜಿತ್ ಬಹು ನಿರೀಕ್ಷಿತ ‘ವಿದಾಮುಯರ್ಚಿ’(Vidaamuyarchi) ಸಿನಿಮಾ ಮೂಲಕ ಬಿಗ್ ಸ್ಕ್ರೀನ್ ಮೇಲೆ ರಾರಾಜಿಸಲಿದ್ದಾರೆ. ಇದಲ್ಲದೇ ಗುಡ್ ಬ್ಯಾಡ್ ಅಗ್ಲಿ ಸಿನಿಮಾಗೂ ಸಹಿ ಮಾಡಿದ್ದಾರೆ ತಲಾ.