Raj B Shetty: ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಖ್ಯಾತಿ ಜೊತೆಗೆ ಗಟ್ಟಿಯಾಗಿ ನೆಲೆಯೂರಿದವರು ರಾಜ್ ಬಿ ಶೆಟ್ಟಿ(Raj B Shetty). ನಟನೆ, ನಿರ್ದೇಶನ, ಬರವಣಿಗೆ ಹೀಗೆ ಇವರು ಸ್ಯಾಂಡಲ್ವುಡ್ ಭರವಸೆಯ ಪ್ರತಿಭೆ. ಸದ್ಯ ನಿರ್ದೇಶನಕ್ಕೆ ಬ್ರೇಕ್ ಹಾಕಿ ನಟನೆಯಲ್ಲಿ ಫುಲ್ ಬ್ಯುಸಿಯಾಗಿದ್ದು, ಬ್ಲ್ಯಾಕ್ ಕೋಬ್ರಾ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ದುನಿಯಾ ವಿಜಯ್(Duniya Vijay) ‘ಭೀಮ’ ಸಿನಿಮಾ ಬಿಡುಗಡೆಯ ನಡುವೆ ಹೊಸ ಸಿನಿಮಾಗೆ ಮುದ್ರೆ ಒತ್ತಿದ್ದಾರೆ. ಕಾಟೇರ(Katera) ಬ್ಯಾಕ್ ಬೋನ್, ಜಂಟಲ್ಮ್ಯಾನ್ ಸೂತ್ರಧಾರನ ಜೊತೆ ಕೈ ಜೋಡಿಸಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಅಳಿದವರ ಕಥೆಯಲ್ಲ ಅಳಿದು ಉಳಿದವರ ಕಥೆ ಎಂಬ ಅಡಿಬರಹದೊಂದಿಗೆ ಆಕ್ಷನ್ ಸಿನಿಮಾವೆಂದು ಸೂಚನೆ ನೀಡಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ(Raj B Shetty) ನಟಿಸುತ್ತಿದ್ದಾರೆ ಎಂಬ ಬಿಗ್ ಅಪ್ಡೇಟ್ ಚಿತ್ರತಂಡ ನೀಡಿದೆ. ಸುದ್ದಿ ಕೇಳಿ ಸಿನಿಮಾ ಮೇಲಿನ ಕ್ರೇಜ಼್ ಹೆಚ್ಚಾಗಿದೆ. ಜೊತೆಗೆ ವಿಲನ್ ಪಾತ್ರದಲ್ಲಿ ಬಣ್ಣ ಹಚ್ಚುತ್ತಾರಾ, ಯಾವ ಪಾತ್ರ ಟೋಬಿ ನಟ ನಿರ್ವಹಿಸುತ್ತಾರೆ ಎನ್ನುವ ಕ್ಯೂರಿಯಾಸಿಟಿ ಮೂಡಿದೆ. ಈ ಸಿನಿಮಾವಲ್ಲದೇ ಅರ್ಜುನ್ ಜನ್ಯ ನಿರ್ದೇಶನದ ೪೫, ಮಲಯಾಳಂ ಸೂಪರ್ ಸ್ಟಾರ್ ನಟನೆಯ ಟರ್ಬೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಜ್ ಬಿ ಶೆಟ್ಟಿ ಬ್ಯುಸಿಯಾಗಿದ್ದಾರೆ.
‘ಗರುಡ ಗಮನ ವೃಷಭ ವಾಹನ’ ಸಿನಿಮಾ ರಾಜ್ ಬಿ ಶೆಟ್ಟಿ(Raj B Shetty) ಅಭಿನಯಕ್ಕೆ, ನಿರ್ದೇಶನಕ್ಕೆ ಹಿಡಿದ ಕನ್ನಡಿ. ಆದ್ರೆ ಈ ಸಿನಿಮಾ ಚಿತ್ರಮಂದಿರದಲ್ಲಿ ಹೆಚ್ಚು ದಿನ ನೆಲೆ ನಿಲ್ಲಲಿಲ್ಲ. ಇದಾದ ನಂತರ ಬಂದ ‘ಟೋಬಿ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಗಳು ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿತ್ತು. ಅದರಲ್ಲೂ ಟೋಬಿ ಸಿನಿಮಾ ಮೇಲೆ ಸ್ವತಃ ರಾಜ್ ಬಿ ಶೆಟ್ಟಿಯೇ ಇನ್ನಿಲ್ಲದ ನಿರೀಕ್ಷೆ ಇಟ್ಟುಕೊಂಡಿದ್ರು ಆದ್ರೆ ಖಾತೆ ತೆಗೆಯೊದರೊಳಗೆ ಸಿನಿಮಾ ಎತ್ತಂಗಡಿಯಾಯ್ತು. ಸತತ ಸೋಲು ಅವರಿಗೂ ನಿದ್ದೆ ಗೆಡಿಸಿದೆ. ಒಂದಿಷ್ಟು ಆತ್ಮಾವಲೋಕನಕ್ಕೆ ಜಾರಿರುವ ರಾಜ್ ಬಿ ಶೆಟ್ಟಿ ನಟನೆಗೆಯತ್ತ ಗಮನ ಹರಿಸಿದ್ದಾರೆ.