Dheeran R Rajkumar: ಧೀರನ್ ರಾಮ್ ಕುಮಾರ್…ದೊಡ್ಮನೆ ಹುಡುಗ..ಚಿತ್ರರಂಗ ಕಂಡ ಸ್ಪುರದ್ರೂಪಿ ನಟ ರಾಮ್‌ಕುಮಾರ್ ಪುತ್ರ. ‘ಶಿವ’ ಸಿನಿಮಾ ಮೂಲಕ ನಾಯಕ ನಟನಾಗಿ ತೆರೆಮೇಲೆ ಎಂಟ್ರಿ ಕೊಟ್ಟ ಡಾ.ರಾಜ್ ಮೊಮ್ಮಗನಿಗೆ ಭವ್ಯ ಸ್ವಾಗತವೇನೋ ಸಿಕ್ಕಿತು. ಆದ್ರೆ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಹಿಟ್ ನೀಡಲಿಲ್ಲ. ಹೆಸರು, ಬ್ಯಾಗ್ರೌಂಡ್, ಅಭಿಮಾನಿಗಳ ಬೆಂಬಲ ಎಲ್ಲವೂ ಇದ್ದರೂ ಸಿನಿಮಾವೇಕೋ ಕೈ ಹಿಡಿಯುತ್ತಿಲ್ಲ. ಆ ನಂತರ ಧೀರನ್ ಸಿನಿಮಾಗಳಲ್ಲಿ ಆಕ್ಟಿವ್ ಆಗಿಲ್ಲ. ಎಲ್ಲೋದ್ರಪ್ಪ ಧೀರನ್(Dheeran R Rajkumar) ಅನ್ನೋವಷ್ಟರಲ್ಲಿ ಸಿಹಿ ಸುದ್ದಿ ಹೊತ್ತು ಬಂದಿದ್ದಾರೆ.
ಡಾ. ರಾಜ್(Drr̤ Rajkumar) ಮೊಮ್ಮಗ, ನಟ ರಾಮ್‌ಕುಮಾರ್ ಪುತ್ರ ಧೀರನ್ ರಾಮ್ ಕುಮಾರ್ ಒಂದಿಷ್ಟು ಗ್ಯಾಪ್ ಬಳಿಕ ಮತ್ತೆ ಬಣ್ಣ ಹಚ್ಚೋಕೆ ರೆಡಿಯಾಗಿದ್ದಾರೆ. ಸಿನಿಮಾ ಪಲ್ಸ್ ಅರ್ಥ ಮಾಡಿಕೊಂಡು, ಇನ್ನಷ್ಟು ತಯಾರಿ ಮಾಡಿಕೊಂಡು, ಫ್ರೆಶ್ ಕಥೆಯೊಂದಿಗೆ ಮತ್ತೆ ಹೀರೋ ಆಗಿ ಮಿಂಚುವ ಭರವಸೆಯನ್ನು ಜೀವಂತವಾಗಿಸಿಕೊಂಡಿದ್ದಾರೆ. ಈ ಬಾರಿ ದೊಡ್ಡ ನಿರ್ಮಾಣ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್(Krg Studios) ಧೀರನ್ ರಾಮ್‌ಕುಮಾರ್‌ರನ್ನು ರೀಲಾಂಚ್ ಮಾಡುವ ಹೊಣೆ ಹೊತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಧೀರನ್ ಸಂತಸ ಹಂಚಿಕೊಂಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾತೃಗಳಾದ ಯೋಗಿ ಜಿ ರಾಜ್, ಕಾರ್ತಿಕ್ ಗೌಡ ಜೊತೆ ಇರುವ ಫೋಟೋವನ್ನು ಬೆಳ್ಳಂಬೆಳಿಗ್ಗೆ ಧೀರನ್ ಹಂಚಿಕೊಂಡಿದ್ದಾರೆ. ಈ ಮೂಲಕ ಗ್ರ್ಯಾಂಡ್ ಕಂಬ್ಯಾಕ್ ನೀಡುವ ಸಿಹಿ ಸುದ್ದಿ ನೀಡಿದ್ದಾರೆ. ಕೇವಲ ಸಿನಿಮಾ ಕಸರತ್ತು, ಸಿನಿಮಾ ಪಟುಗಳನ್ನಷ್ಟೇ ಅಪ್ಡೇಟ್ ಮಾಡಿಕೊಂಡಿಲ್ಲ. ಹೆಸರಲ್ಲೂ ಅಪ್ಡೇಟ್ ಆಗಿದ್ದಾರೆ ಧೀರನ್. ಧೀರನ್ ರಾಮ್‌ಕುಮಾರ್ ಹೆಸರನ್ನು ಧೀರನ್ ಆರ್ ರಾಜ್‌ಕುಮಾರ್(Dheeran R Rajkumar) ಎಂದು ಬದಲಾಯಿಸಿಕೊಂಡಿದ್ದಾರೆ.
‘ಶಿವ 143’(Shiva 143) ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಅಂಗಳಕ್ಕೆ ನಾಯಕನಾಗಿ ಎಂಟ್ರಿಕೊಟ್ಟ ದೊಡ್ಮನೆ ಕುಡಿ ಧೀರನ್ ರಾಮ್‌ಕುಮಾರ್. ಒಂದಿಷ್ಟು ಕಾಯುವಿಕೆಯ ನಂತರ ‘ಶಿವ 143’ 2022ರಲ್ಲಿ ತೆರೆಕಂಡಿತ್ತು. ಟಗರು ಪುಟ್ಟಿ ಮಾನ್ವಿತ ಕಾಮತ್ ಜೊತೆ ಸ್ಕ್ರೀನ್ ಶೇರ್ ಮಾಡಿದ ಧೀರನ್((Dheeran R Rajkumar) ರಾ ಎಂಟ್ರಿ ಸಖತ್ ಕಿಕ್ ಕೊಟ್ಟಿತ್ತು. ದೊಡ್ಮನೆ ಬಳಗ ಕೂಡ ಎಲ್ಲರಂತೆ ಧೀರನ್‌ರನ್ನು ಪ್ರೀತಿಯಿಂದ ಬರಮಾಡಿಕೊಂಡಿತ್ತು, ಸಪೋರ್ಟ್ ನೀಡಿತ್ತು. ಆದ್ರೆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ನೋಡೋಕೆ ಒಳ್ಳೆ ಪರ್ಸನಾಲಿಟಿ, ಸಿನಿಮಾ ಹೀರೋಗೆ ಬೇಕಾದ ಎಲ್ಲಾ ಕ್ವಾಲಿಟೀಸ್ ಇದ್ದರೂ ಈ ಸಿನಿಮಾ ನಂತರ ಯಾವ ಸಿನಿಮಾಗಳು ಕೈ ಬೀಸಿ ಕರೆಯಲಿಲ್ಲ. ಸಿನಿಮಾ ನನಗಲ್ಲ ಅಂತ ಮತ್ತೆ ಐಟಿ ಜಾಬ್‌ನತ್ತ ಮುಖಮಾಡಿದ್ರಾ ಅನ್ನೋವಾಗಲೇ ಗ್ರ್ಯಾಂಡ್ ಕಂ ಬ್ಯಾಕ್ ಮಾಡುವ ಬಿಗ್ ನ್ಯೂಸ್ ನೀಡಿದ್ದಾರೆ. ಒಂದಿಷ್ಟು ಬದಲಾವಣೆ ಜಾಡು ಹಿಡಿದ ಬಂದ ಧೀರನ್‌ಗೆ ಈ ಬಾರಿ ಸಿನಿಮಾ ಎನ್ನುವ ಅದೃಷ್ಟ ದೇವತೆ ಕೈ ಹಿಡಿಯುತ್ತಾಳಾ ಕಾದು ನೋಡಬೇಕು.