ಸೋಮವಾರ, ಜುಲೈ 7, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

JrNTR: ‘ದೇವರ’, ‘ವಾರ್‌2’ ಮೊದಲೇ ಸ್ಟ್ರ್ರಾಂಗ್‌ ಆಯ್ತು ಬಾಂಡಿಂಗ್-‌ ಉತ್ತರದಲ್ಲಿ ಜೂ.NTR ಹವಾ ಜೋರು

Bharathi Javalliby Bharathi Javalli
29/04/2024
in Majja Special
Reading Time: 1 min read
JrNTR: ‘ದೇವರ’, ‘ವಾರ್‌2’ ಮೊದಲೇ ಸ್ಟ್ರ್ರಾಂಗ್‌ ಆಯ್ತು ಬಾಂಡಿಂಗ್-‌ ಉತ್ತರದಲ್ಲಿ ಜೂ.NTR ಹವಾ ಜೋರು

Jr̤NTR: ಮ್ಯಾನ್‌ ಆಫ್‌ ಮಾಸಸ್‌ ಜೂ.NTR ಕ್ರೇಜ಼್ ಜೋರಾಗಿದೆ. ‘ದೇವರ’(Devara) ಸಿನಿಮಾ ಬಿಡುಗಡೆ ಅನೌನ್ಸ್‌ ಆದ ಮೇಲಂತೂ ಆ ಕ್ರೇಜ಼್ ಲೆವೆಲ್‌ ದುಪ್ಪಟ್ಟಾಗಿದೆ. ಕೇವಲ ಸೌತ್‌ನಲ್ಲಿ ಮಾತ್ರವಲ್ಲ ನಾರ್ತ್‌ನಲ್ಲೂ ಜೂ.NTR ಕ್ರೇಜ಼್ ಹೆಚ್ಚಾಗಿದೆ. ಇದರ ನಡುವೆ ಬಿಟೌನ್‌ ಮಂದಿ ಕೂಡ ಮ್ಯಾನ್‌ ಆಫ್‌ ಮಾಸಸ್‌ ಸ್ನೇಹ ಅರಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬೆಳಿಗ್ಗೆಯಿಂದ ಒಂದಿಷ್ಟು ಫೋಟೋ ವೀಡಿಯೋಗಳು ಹರಿದಾಡ್ತಿವೆ. ಅದು ಜೂ.NTR, ಹೃತಿಕ್‌ ರೋಷನ್‌(Hrithik Roshan), ರಣಬೀರ್‌ ಕಪೂರ್‌(Ranbeer Kapoor), ಆಲಿಯಾ(Alia Bhat), ಕರಣ್‌ ಜೋಹಾರ್‌(Karan Johar) ಫೋಟೋ ವೀಡಿಯೋಗಳು. ಕಾರಣ ಸ್ಪೆಷಲ್‌ ಏನಿಲ್ಲ. ಎಲ್ಲರೂ ಬಾಂಧ್ರಾದ ರೆಸ್ಟೋರೆಂಟ್‌ ಒಂದರಲ್ಲಿ ಸೇರಿ ಒಟ್ಟಾಗಿ ಡಿನ್ನರ್‌ ಮಾಡಿದ್ದಾರೆ. ಜೂ.NTR ಪತ್ನಿ, ಹೃತಿಕ್‌ ಗರ್ಲ್‌ ಫ್ರೆಂಡ್‌ ಸಭಾ ಕೂಡ ಈ ಸ್ನೇಹಕೂಟದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಗಮನ ಸೆಳೆಯುತ್ತಿವೆ.

ಆದ್ರೆ ವಿಷಯ ಅದಲ್ಲ. ಇಷ್ಟು ಬೇಗ ಬಿಟೌನ್‌ ದಿಗ್ಗಜರೊಂದಿಗೆ ಜೂ. NTR ಸ್ನೇಹ ಚಿಗುರೊಡೆದದ್ದು ಹೇಗೆ. ಈ ಬಾಂದವ್ಯ ಬೆಳೆದಿದ್ದು ಹೇಗೆ ಅನ್ನೋದು. ಆರ್‌ಆರ್‌ಆರ್‌(RRR) ಸಿನಿಮಾ ಮೂಲಕ ವರ್ಲ್ಡ್‌  ವೈಡ್‌ ಫೇಮಸ್‌ ಆದ ಜೂ.NTR  ಎಲ್ಲಾ ಇಂಡಸ್ಟ್ರಿಗೂ ಚಿರಪರಿಚಿತರಾಗಿದ್ರು. ಆದ್ರೆ ಇಷ್ಟೊಂದು ಗಾಢ ಸ್ನೇಹ ಬೆಳೆದಿರಲಿಲ್ಲ. ಆದ್ರೀಗ ಬಾಂದವ್ಯ ಗಟ್ಟಿಯಾಗಿದೆ. ಇದಕ್ಕೆಲ್ಲಾ ದೇವರಸ ಸಿನಿಮ  ಒಂದು ಕಾರಣವಾದ್ರೆ, ಇನ್ನೊಂದು ವಾರ್‌ ೨ ಸಿನಿಮಾ ಅಂತಿದೆ ಟಿಟೌನ್.

ಹೌದು, ಜೂ.NTR ‘ದೇವರ’(Devara) ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕೊರಟಾಲ ಶಿವ, ಮ್ಯಾನ್‌ ಆಫ್‌ ಮಾಸಸ್‌ ಕಾಂಬೋ ಮೇಲೆ ಎಕ್ಸ್‌ಪೆಕ್ಟೇಶನ್ ಜಾಸ್ತಿಯಾಗಿದೆ. ಸೌತ್‌ ಸಿನಿಮಾದ ಕ್ರೇಜ಼್ ಅರಿತ ಕರಣ್‌ ಜೋಹಾರ್‌ ಹಿಂದಿ ಬೆಲ್ಟ್‌ನಲ್ಲಿ ದಾಖಲೆ ಮೊತ್ತಕ್ಕೆ ‘ದೇವರ’ ವಿತರಣೆ ಹಕ್ಕು ಖರೀದಿಸಿದ್ದಾರೆ. ಮ್ಯಾನ್‌ ಆಫ್‌ ಮಾಸಸ್‌ ಕ್ರೇಜ಼್, ಫ್ಯಾನ್‌ ಫಾಲೋಯರ್ಸ್‌ ಕಂಡು ‘ವಾರ್‌ 2’ ಸಿನಿಮಾಗೂ ವೆಲ್ಕಂ‌ ಸಿಕ್ಕಿದೆ. ಹೃತಿಕ್‌ ಜೊತೆ ಜೂ.NTR ತೆರೆಹಂಚಿಕೊಳ್ಳುತ್ತಿದ್ದಾರೆ. ಮೊದಲ ಬಾರಿ ಹಿಂದಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದೆಲ್ಲಾ ಕಾರಣದಿಂದ ಬಿಟೌನ್‌ ಮಂದಿ ಜೊತೆ ತಾರಕ್‌ ಸ್ನೇಹ ಗಟ್ಟಿಯಾಗಿದೆ. ಮೊದಲೇ ಸ್ನೇಹಜೀವಿ ಆದ್ದರಿಂದ ಇನ್ನಷ್ಟು ಅಭಿಮಾನದಿಂದ ಬಿಟೌನ್‌ ದಿಗ್ಗಜರು ಸೇಹಹಸ್ತ ಚಾಚಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Aamir Khan: ಕಪಿಲ್‌ ಶರ್ಮಾ ಶೋ ಶ್ಲಾಘಿಸಿದ ಆಮೀರ್‌ ಖಾನ್‌ -‌ ಮಿಸ್ಟರ್‌ ಪರ್ಫೆಕ್ಷನಿಸ್ಟ್ ನೋವು ಮರೆಸಿತ್ತಂತೆ ಈ ಕಾರ್ಯಕ್ರಮ..!

Aamir Khan: ಕಪಿಲ್‌ ಶರ್ಮಾ ಶೋ ಶ್ಲಾಘಿಸಿದ ಆಮೀರ್‌ ಖಾನ್‌ -‌ ಮಿಸ್ಟರ್‌ ಪರ್ಫೆಕ್ಷನಿಸ್ಟ್ ನೋವು ಮರೆಸಿತ್ತಂತೆ ಈ ಕಾರ್ಯಕ್ರಮ..!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.