Shruti Haasan: ಸೌತ್ ಸಿನಿ ದುನಿಯಾದ ಸ್ಟಾರ್ ನಟಿ ಶೃತಿ ಹಾಸನ್(Shruti Haasan) ಇತ್ತೀಚೆಗೆ ರಜನಿ ಸಿನಿಮಾಗೆ ಆಯ್ಕೆಯಾಗಿ ಸುದ್ದಿಯಾಗಿದ್ರು. ‘ಸಲಾರ್’ ಮೂಲಕ ಕಮಾಲ್ ಮಾಡಿದ ನಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಕರಾಜ್(Lokesh Kankaraj) ಜೊತೆ ಅಭಿನಯಿಸಿದ ವೀಡಿಯೋ ಸಾಂಗ್ ‘ಇನಿಮೆಲ್’ ಕೂಡ ಬಿಗ್ ಸಕ್ಸಸ್ ಕಂಡಿದೆ. ಇದೀಗ ಮತ್ತೆ ಶೃತಿ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರೋದು ಬ್ರೇಕಪ್ ಕಾರಣಕ್ಕೆ.
ನಟಿ ಶೃತಿ ಹಾಸನ್(Shruti Haasan) ಬ್ರೇಕಪ್‌ಗಳಿಂದ ನೊಂದು ಬೆಂದಿದ್ದಾರೆ. ಇದೀಗ ಬಹು ಕಾಲದ ಗೆಳೆಯನೊಂದಿಗೆ ಮದುವೆಯಾಗ್ತಾರೆ ಸೂಪರ್ ಸ್ಟಾರ್ ಮಗಳು ಅನ್ನೋವಾಗಲೇ ಬ್ರೇಕಪ್ ಸುದ್ದಿ ಕೇಳಿ ಬರ್ತಿದೆ. ಈ ಸುದ್ದಿ ಕೇಳಿ ನೆಟ್ಟಿಗರು ಇವರಿಗೇನು ಇದೆಲ್ಲಾ ಕಾಮನ್ ಅಂತಿದ್ರೆ, ಅಭಿಮಾನ ಬಳಗ ಅಯ್ಯೋ ಛೇ ಎಂದು ಮನನೊಂದುಕೊಳ್ತಿದ್ದಾರೆ. ಹೌದು, ಈ ಬ್ರೇಕಪ್ ಸುದ್ದಿ ಈ ರೀತಿ ಬಿರುಗಾಳಿಯಂತೆ ಹಬ್ಬಲು ಕಾರಣ ಶೃತಿ ಹಾಸನ್. ನಾಲ್ಕು ವರ್ಷದ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದಾರಂತೆ. ಬಾಯ್‌ಫ್ರೆಂಡ್ ನಟ ಸಂತನು ಹಜರೀಕ(Santanu Hazarika) ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಆದ್ರಿಂದಲೇ ಇನ್ಸ್‌ಸ್ಟಾಗ್ರಾಂನಲ್ಲಿ ಜೊತೆಯಾಗಿದ್ದ ಎಲ್ಲಾ ಫೋಟೋವನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಇಬ್ಬರು ಒಬ್ಬರಿಗೊಬ್ಬರು ಅನ್‌ಫಾಲೋ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಸಂತನು ಹಜರೀಕ್((Santanu Hazarika)ಗೂ ಮುನ್ನ ಲಂಡನ್ ಮೂಲದ ಮ್ಯುಸಿಶಿಯನ್ ಪ್ರೀತಿಯಲ್ಲಿ ಬಿದ್ದಿದ್ದರು ಶೃತಿ ಹಾಸನ್((Shruti Haasan). ಬಹು ಕಾಲದ ಡೇಟಿಂಗ್ ನಂತರ ಮೈಕೆಲ್ ಕೋರ್ಸೆಲ್‌ನಿಂದ ದೂರವಾಗಿದ್ರು. ಆದಾದ ನಂತರ ನಟ ಸಂತನು ಜೊತೆ ಸೀರಿಯಸ್ ಆಗಿ ಲವ್‌ನಲ್ಲಿ ಬಿದ್ದಿದ್ದ ಶೃತಿ ಮದುವೆಯಾಗಲು ರೆಡಿಯಾಗಿದ್ದರು. ಆದ್ರೀಗ ಇಬ್ಬರ ನಡುವೆ ಏನೋ ಸರಿ ಬಂದಿಲ್ಲ ಎನಿಸುತ್ತೆ ಇದೆ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಹಾಗಾದ್ರೆ 39 ವರ್ಷದ ಶೃತಿ ಹಾಸನ್ ಮದುವೆ ಯಾವಾಗ ಅನ್ನೋದು ಎಲ್ಲರ ಪ್ರಶ್ನೆ.