Bollywood: ಒಂದ್ಕಾಲದಲ್ಲಿ ಬಿಟೌನ್ ಎಂದು ಕರೆಸಿಕೊಳ್ಳೊ ಬಾಲಿವುಡ್(Bollywood) ಅಂಗಳವನ್ನು ಟಚ್ ಮಾಡೋಕು ಆಗಲ್ಲ, ಬೀಟ್ ಮಾಡೋಕು ಆಗಲ್ಲ ಅನ್ನೋ ಮಾತಿತ್ತು. ಬಿಗ್ ಬಜೆಟ್ ಸಿನಿಮಾಗಳು, ಲೆಜೆಂಡ್ ಆಕ್ಟರ್ಸ್‌ಗಳು, ಕಲರ್‌ಫುಲ್ ಸೆಟ್, ದುಬಾರಿ ವೆಚ್ಚದ ಸಾಂಗ್ಸ್, ಕಲರ್ ಫುಲ್ ತಾರಾಬಳಗ, ಅದ್ದೂರಿ ಮೇಕಿಂಗ್ ಇದೆಲ್ಲವುಗಳಿಂದ ಸಿನಿಪ್ರಿಯರ ಕಣ್ಮನ ಸೆಳೆಯುತ್ತಿತ್ತು ಬಿಟೌನ್. ರೆಕಾರ್ಡ್ ಬ್ರೇಕಿಂಗ್ ಸಿನಿಮಾಗಳು, ಕೋಟಿ ಕೋಟಿ ಕಲೆಕ್ಷನ್ ಇದೆಲ್ಲ ಬಿಟೌನ್‌ನಲ್ಲಿ ಮಾತ್ರ ಸಾಧ್ಯ ಎಂಬ ಲೇಬಲ್ ಇತ್ತು. ಆದ್ರೀಗ ಕಾಲ ಬದಲಾಗಿದೆ. ಬಿಟೌನ್ ಬೀಟ್ ಮಾಡೋ ಶಕ್ತಿ ಸೌತ್ ಇಂಡಸ್ಟ್ರಿಗೆ ಇದೆ ಅನ್ನೋದು ಪ್ರೂವ್ ಆಗಿದೆ.
ಬಿಟೌನ್ ಸಿನಿಮಾ ಸೋಲುಗಳಿಂದ ಕಂಗೆಟ್ಟಿದೆ. ಸ್ಟಾರ್ ಸಿನಿಮಾಗಳು ಹೀನಾಯ ಸೋಲು ಕಾಣುತ್ತಿವೆ. ಬಿಗ್ ಬಜೆಟ್ ಸಿನಿಮಾಗಳು ಕಮಾಲ್ ಮಾಡುತ್ತಿಲ್ಲ. ಕಳೆದ ಮುರ್ನಾಲ್ಕು ವರ್ಷದಿಂದ ಬಿಟೌನ್ ನಲುಗಿ ಹೋಗಿದೆ. ಬಾಕ್ಸ್ ಆಫೀಸ್ ಧೂಳೀಪಟ ಮಾತುಗಳು ಕೇಳದೇ ಬೆರಗಾಗಿದೆ. ಬಿಟೌನ್ ಬಗ್ಗೆ ಕೇಳಿ ಬರ್ತಿದ್ದ ಮಾತುಗಳೆಲ್ಲ ಸೌತ್ ಇಂಡಸ್ಟ್ರಿ ಬಗ್ಗೆ ಕೇಳಿ ಬರ್ತಿದೆ. ಸಿನಿಮಾ ಪ್ರಿಯರು ಸೌತ್ ಇಂಡಸ್ಟ್ರಿಯಲ್ಲಿ ಯಾವ ಸಿನಿಮಾ ಬರ್ತಿದೆ ಅನ್ನೋದರತ್ತ ಗಮನ ಹರಿಸುತ್ತಿದ್ದಾರೆ. ಬಿಟೌನ್ ಹಮ್ಮು ಬಿಮ್ಮು ತೊರೆದು ಸೌತ್ ಇಂಡಸ್ಟ್ರಿಗೆ ಶರಣಾಗಿದೆ. ನಮಗೂ ಸಿನಿಮಾ ಮಾಡಿ ಎಂದು ಸ್ಟಾರ್ ನಟರುಗಳು ಸೌತ್ ನಿರ್ದೇಶಕರ ಬೆನ್ ಬಿದ್ದಿದ್ದಾರೆ. ಇದರ ನಡುವೆ ರಾಕಿ ಭಾಯ್ ಯಶ್(Yash)ಬಹು ನಿರೀಕ್ಷಿತ ‘ರಾಮಾಯಣ’(Ramayana) ಸಿನಿಮಾಗೆ ಪ್ರೊಡ್ಯೂಸರ್ ಆಗಿರೋದು ದೊಡ್ಡ ಮೈಲಿಗಲ್ಲು.
ಅರ್ಜುನ್ ರೆಡ್ಡಿ(Arjun Reddy) ಸಿನಿಮಾ ಟಾಲಿವುಡ್‌ನಲ್ಲಿ ಸೆನ್ಸೇಶನ್ ಹಿಟ್ ಕಂಡ ನಂತರ ಸಂದೀಪ್ ರೆಡ್ಡಿ ವಂಗ(Sandeep Reddy Vanga)ಗೆ ಬಿಟೌನ್‌ನಿಂದ ಬುಲಾವ್ ಬಂತು. ನಂತರ ತಮ್ಮ ಸಿನಿಮಾವನ್ನು ‘ಕಬೀರ್ ಸಿಂಗ್’(Kabir Sing) ಹೆಸರಲ್ಲಿ ಶಾಹಿದ್ದ್‌ಗೆ ನಿರ್ದೇಶನ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಮಾಡಿದ್ರು. ಶಾರೂಕ್(Shah Rukh Khan) ತಮ್ಮ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡೋದು ನಿಂತಾಗ ತಿರುಗಿ ನೋಡಿದ್ದು ಸೌತ್ ವೆರಿ ಟ್ಯಾಲೆಂಟೆಡ್ ಡೈರೆಕ್ಟರ್ ಅಟ್ಲೀ(Atlee) ಯತ್ತ. ‘ಜವಾನ್’(Jawan) ಶಾರೂಕ್‌ಗೆ ಮರುಜೀವ ನೀಡಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾ (Animal) ರಣಬೀರ್ ಕಪೂರ್‌ಗೆ ಸಕ್ಸಸ್ ತಂದಿದೆ. ಇದೀಗ ಬಿಟೌನ್ ‘ಗಲ್ಲಿ ಬಾಯ್’ ರಣವೀರ್(Ranveer Singh) ಕೂಡ ಸೌತ್ ನಿರ್ದೇಶಕನ ಹಿಂದೆ ಬಿದ್ದಿದ್ದಾರೆ. ‘ಹನು-ಮಾನ್’(Hanu-Man) ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್ ವರ್ಮಾ ಜೊತೆ ಸಿನಿಮಾ ಮಾಡೋ ಹಂಬಲ ವ್ಯಕ್ತಪಡಿಸಿದ್ರು. ಅದರಂತೆ ಇಬ್ಬರ ಕಾಂಬಿನೇಶನ್‌ನಲ್ಲಿ ಸಿನಿಮಾ ಸೆಟ್ಟೇರೋಕೆ ಎಲ್ಲಾ ಸಿದ್ದತೆಯೂ ನಡೆಯುತ್ತಿದೆ. ಸಲ್ಮಾನ್ ಖಾನ್ ಎ.ಆರ್ ಮುರುಗದಾಸ್ ಜೊತೆ ಸಿಕಂದರ್ ಸಿನಿಮಾ ಮಾಡ್ತಿದ್ದಾರೆ.
ಕೇವಲ ಕ್ರೇಜಿ಼ ನಿರ್ದೇಶನಕ್ಕೆ ಮನಸೋತಿಲ್ಲ ಸೌತ್ ಸಿನಿಮಾದಲ್ಲಿ ನಟಿಸಲು ಬಿಟೌನ್ ನಟರು ಹಂಬಲಿಸುತ್ತಿದ್ದಾರೆ. ‘ಕೆಜಿಎಫ್’(KGF) ಸಿನಿಮಾಲ್ಲಿ ಸಂಜು ಬಾಬಾ ಆಗಮನದ ನಂತರ, ಅಕ್ಷಯ್ ಕುಮಾರ್(Akshay Kumar) ‘ಕಣ್ಣಪ್ಪ’(Kannappa) ಸಿನಿಮಾ ಮೂಲಕ ಟಿಔನ್‌ಗೆ ಎಂಟ್ರಿ ಕೊಟ್ಟಿದ್ದಾರೆ, ಬಿಗ್ ಬಿ ಅಮಿತಾಬ್(Amitabh Bachchan) ‘ಕಲ್ಕಿ’(Kalki) ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೌತ್ ಸಿನಿಮಾಗಳ ಅಬ್ಬರ ಕಂಡು ಬಿಟೌನ್ ನಿರ್ಮಾಪಕರು ದಂಗಾಗಿ ಹೋಗಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ವಿತರಣೆ ಹಕ್ಕು ಪಡೆದ ಬಿಟೌನ್ ನಿರ್ಮಾಪಕರು. ಸೌತ್ ಸಿನಿಮಾದ ಪಲ್ಸ್ ಅರಿತು ದೊಡ್ಡ ಸ್ಟಾರ್‌ಗಳ ಸಿನಿಮಾಗಳನ್ನು ಹಿಂದಿ ಬೆಲ್ಟ್ ನಲ್ಲಿ ವಿತರಣೆ ಮಾಡಲು ಮುಗಿ ಬೀಳುತ್ತಿದ್ದಾರೆ. ಇದಕ್ಕೆ ಜೂ.NTR ‘ದೇವರ’(Devara), ಅಲ್ಲು ಅರ್ಜುನ್(Allu Arjun) ‘ಪುಷ್ಪ2’(Pushpa2) ಸಿನಿಮಾಗಳು ಸಾಕ್ಷಿ.
ಹೀಗೆ ಬಿಟೌನ್ ಅಂಗಳ ಸೌತ್ ಸಿನಿಮಾಗಳಿಗೆ, ಕ್ರೇಜಿ಼ ನಿರ್ದೇಶನಕ್ಕೆ ಮನಸೋತಿದೆ. ಇಲ್ಲಿ ನಡೆಯುವ ಸಿನಿಮಾ ಮ್ಯಾಜಿಕ್‌ಗೆ ಮಂಡಿಯೂರಿ ಶರಣಾಗಿದೆ. ಸದ್ಯ ಸೌತ್ ಸ್ಟಾರ್‌ಗಳು, ಸೌತ್ ಸಿನಿಮಾಗಳು, ಸೌತ್ ಡೈರೆಕ್ಟರ್‌ಗಳು ಬಿಟೌನ್ ಅಂಗಳವನ್ನು ರೂಲ್ ಮಾಡ್ತಿದ್ದಾರೆ ಅಂದ್ರೆ ಅತಿಶಯೋಕ್ತಿಯೇನಲ್ಲ.