Pushpa2: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ2’ ಸಿನಿಮಾ ಕ್ರೇಜ಼್ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ದುಪ್ಪಟ್ಟಾಗುತ್ತಿದೆ. ಚಿತ್ರತಂಡ ದಿನಕ್ಕೊಂದು ಎಕ್ಸೈಟಿಂಗ್ ಸುದ್ದಿ ನೀಡುತ್ತ ಬಝ್ ಕ್ರಿಯೇಟ್ ಮಾಡುತ್ತಲೇ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಅಂಗಳದಿಂದ ಈಗ ತೇಲಿ ಬಂದಿರುವ ಸುದ್ದಿಯಂತೂ ಸಖತ್ ಕ್ರೇಜ಼ಿಯಾಗಿದೆ.
‘ಪುಷ್ಪ2’(Pushpa2) ತಂಡ ಹೊಸ ಸುದ್ದಿಯನ್ನು ಸಿನಿಮಾಗಾಗಿ ಎದುರು ನೋಡುತ್ತಿರುವ ಭಕ್ತಗಣಕ್ಕೆ ನೀಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದೇ ಮೊದಲ ಬಾರಿಗೆ ಬೆಂಗಾಲಿ ಭಾಷೆಯಲ್ಲೂ ತೆರೆ ಕಾಣುತ್ತಿದೆ. ಅಲ್ಲಿಗೆ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಜೊತೆಗೆ ಬೆಂಗಾಲಿ ಭಾಷೆಯಲ್ಲೂ ಅಲ್ಲು ಅರ್ಜುನ್(Allu Arjun) ಭಕ್ತಗಣ ಸಿನಿಮಾ ನೋಡಿ ಕಣ್ತುಂಬಿಕೊಳ್ಳಬಹುದು. ಈ ಲೇಟೆಸ್ಟ್ ಸುದ್ದಿ ನೀಡಿದ್ದು, ಬೇರೆ ಯಾರೂ ಅಲ್ಲ ಚಿತ್ರದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್.
ಸಂದರ್ಶನವೊಂದರಲ್ಲಿ ದೇವಿ ಶ್ರೀ ಪ್ರಸಾದ್(Devi Sri Prasad) ಆರು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. ಬೆಂಗಾಲಿ ಭಾಷೆಯಲ್ಲೂ ಸಿನಿಮಾ ತೆರೆ ಕಾಣಲಿದ್ದು, ಸಿನಿಮಾದ ಹಾಡುಗಳಿಗಾಗಿ ಎರಡು ತಿಂಗಳು ಮೀಸಲಿಟ್ಟಿದ್ದೆ. ಪ್ರತಿ ಭಾಷೆಯ ಗೀತರಚನೆಕಾರರ ಜೊತೆ ಕುಳಿತು ಚರ್ಚಿಸಿ ಹಾಡುಗಳನ್ನು ಮಾಡಲಾಗಿದೆ ಎಂದಿದ್ದಾರೆ.
‘ಪುಷ್ಪ2’(Pushpa2) ಲೋಕ ದಿನದಿಂದ ದಿನಕ್ಕೆ ಕ್ರೇಜಿ಼ಯಾಗುತ್ತಿದ್ದು, ಚಿತ್ರ ಪ್ರಮುಖ ದೃಶ್ಯಕ್ಕಾಗಿ ಮ್ಯಾಸಿವ್ ಅಂಡರ್ ವಾಟರ್ ಸೀಕ್ವೆನ್ಸ್ ಕೂಡ ಚಿತ್ರೀಕರಿಸಲಾಗಿದೆಯಂತೆ. ಈಗಾಗಲೇ ಕ್ರಿಕೆಟರ್ ಡೇವಿಡ್ ವಾರ್ನರ್ ಚಿತ್ರತಂಡದಲ್ಲಿ ಗೆಸ್ಟ್ ಅಪಿಯರೆನ್ಸ್‌ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಸಿನಿಮಾದ ಪ್ರಿರಿಲೀಸ್ ಬ್ಯುಸಿನೆಸ್ ಸಾವಿರ ಕೋಟಿ ದಾಟಿ ರೆಕಾರ್ಡ್ ಕೂಡ ಬರೆದಿದೆ. ಇದರ ನಡುವೆ ನಾರ್ತ್ ಅಮೇರಿಕಾದಲ್ಲೂ ಅಲ್ಲು ಅರ್ಜುನ್ ಸಿನಿಮಾ ಕಮಾಲ್ ಮಾಡೋಕೆ ರೆಡಿಯಾಗಿದ್ದು, ನಾರ್ತ್ ಅಮೇರಿಕಾ ವಿತರಕರ ಜೊತೆ ಚರ್ಚೆಯಲ್ಲಿದೆ ಚಿತ್ರತಂಡ. ಇದೀಗ ಹೊಸ ವೆಂಚರ್ ಬಗ್ಗೆ ತಿಳಿಸಿರೋದು ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ಡಬಲ್ ಅಲ್ಲ ತ್ರಿಬಲ್ ಮಾಡಿದೆ.