Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ(Katera) ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ. ತರುಣ್ ಸುಧೀರ್(Tarun Sudheer) ಹಾಗೂ ದರ್ಶನ್(Darshan) ಕಾಂಬೋ ಮೂರನೇ ಬಾರಿಯೂ ಕ್ಲಿಕ್ ಆಗಿದೆ. ಈ ಬಾರೀ ದೊಡ್ಡ ಗೆಲುವೇ ಈ ಜೋಡಿ ಕಂಡಿದೆ. ಬಹುದೊಡ್ಡ ಸಕ್ಸಸ್ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್(Rockline Venkatesh) ಸಂತಸವನ್ನು ಇಮ್ಮಡಿಗೊಳಿಸಿದೆ. ಆ ಖುಷಿಯಲ್ಲಿ ಇದಕ್ಕೆ ಕಾರಣೀಭೂತರಾದವರನ್ನು ಗುರುತಿಸಿ ಅವರಿಗೆ ಗೌರವ ನೀಡಿದ್ದಾರೆ.
ಕಳೆದ ವರ್ಷ ತೆರೆಕಂಡ ಕಾಟೇರ ದಾಸನ ದರ್ಶನ್(Darshan)ಗೆ ಬಿಗ್ ಸಕ್ಸಸ್ ನೀಡುವುದರ ಜೊತೆಗೆ ಇಂಡಸ್ಟ್ರಿಗೂ ದೊಡ್ಡ ಗೆಲುವನ್ನು ತಂದುಕೊಂಡಿತ್ತು. ಮುಖ್ಯವಾಗಿ ನಿರ್ದೇಶಕ ತರುಣ್ ಸುಧೀರ್ ಆಯ್ಕೆ ಮಾಡಿಕೊಂಡ ಕಥೆ ಚಿತ್ರದ ದೊಡ್ಡ ಶಕ್ತಿ. ಈ ದೊಡ್ಡ ಶಕ್ತಿಗೆ ಸಂಭಾಷಣೆಕಾರರಾಗಿ, ಕಥೆಗಾರರಾಗಿ ಬೆವರು ಹರಿಸಿದವರು ಟಗರು ಖ್ಯಾತಿಯ ಮಾಸ್ತಿ ಹಾಗೂ ನಿರ್ದೇಶಕ ಹಾಗೂ ಸಂಭಾಷಣೆಗಾರರಾಗಿ ಗುರುತಿಸಿಕೊಂಡಿರುವ ಜಡೇಶ್ ಕುಮಾರ್ ಹಂಪಿ. ಇವರ ಶ್ರಮ ಅರಿತ ರಾಕ್‌ಲೈನ್ ವೆಂಕಟೇಶ್ ಕಾರ್ ಉಡುಗೊರೆ ನೀಡಿದ್ದಾರೆ. ತೆರೆಹಿಂದೆ ದುಡಿದ ಕಥೆಗಾರರಿಗೆ ಸಲ್ಲಬೇಕಾದ ಗೌರವ ನೀಡಿ ರಾಕ್‌ಲೈನ್ ವೆಂಕಟೇಶ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೋಟಿ ಬಂಡವಾಳ ಹಾಕಿದ್ವಿ, ಅದ್ದೂರಿ ಸಿನಿಮಾ ಮಾಡಿದ್ವಿ, ಸ್ಟಾರ್ ನಟನಿಗೆ ಸಿನಿಮಾ ಮಾಡಿ ಖಜಾನೆ ತುಂಬಿಸಿಕೊಂಡ್ವಿ ಎನ್ನೋ ನಿರ್ಮಾಪಕರ ಮಧ್ಯೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್(Rockline Venkatesh) ಈ ಬಾರಿ ಕೊಂಚ ವಿಭಿನ್ನ ಎನಿಸಿದ್ದಾರೆ. ಸಿನಿಮಾ ಸಕ್ಸಸ್‌ಗೆ ಕಾರಣೀಭೂತರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಮೂಲಕ ಸಕ್ಸಸ್ ಖುಷಿಯನ್ನು ಆನಂದಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಕಾಟೇರ ಸಕ್ಸಸ್‌ನಿಂದ ಫುಲ್ ಖುಷಿಯಾಗಿದ್ದಾರೆ. ಆ ಖುಷಿಯಲ್ಲೇ ಚಿತ್ರದ ಕಥೆಗೆ ಬೆನ್ನೆಲುಬಾಗಿ ನಿಂತ ಬರಹಗಾರರಾದ ಮಾಸ್ತಿ(Masthi), ಜಡೇಶ್ ಕುಮಾರ್ ಹಂಪಿ(Jadesh K Hampi) ಹಾಗೂ ಪ್ರಮುಖ ಪಾತ್ರದಲ್ಲಿ ಮಿಂಚಿದ ನಟ ಸೂರಜ್‌ಗೆ ಉಡುಗೊರೆಯಾಗಿ ಸ್ವಿಫ್ಟ್ ಕಾರ್ ನೀಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan), ನಿರ್ದೇಶಕ ತರುಣ್ ಸುಧೀರ್, ರಾಕ್‌ಲೈನ್ ವೆಂಕಟೇಶ್ ಹಾಗೂ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ದರ್ಶನ್ ಸ್ವತಃ ಕಾರ್ ಚಾಲನೆ ಮಾಡಿ ಮಾಸ್ತಿ, ಜಡೇಶ್ ಕುಮಾರ್ ಹಂಪಿ ಹಾಗೂ ಸೂರಜ್‌ಗೆ ಕಾರ್ ಹಸ್ತಾಂತರಿಸಿದ್ದಾರೆ. ಕಾಟೇರ ಸಕ್ಸಸ್ ನಂತರ ನಿರ್ದೇಶಕ ತರುಣ್ ಸುಧೀರ್ ಬಿಎಂಡಬ್ಲೂ ಕಾರ್ ಖರೀದಿ ಮಾಡಿ ಸುದ್ದಿಯಾಗಿದ್ರು. ಸದ್ಯ ರಾಕ್‌ಲೈನ್ ವೆಂಕಟೇಶ್ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.