Puri Jagannath: ಸೌತ್ ಇಂಡಿಯಾದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್(Puri Jagannath) ಸ್ಟಾರ್ ಯಾಕೋ ಸರಿಯಿಲ್ಲ. ಬಹು ನಿರೀಕ್ಷೆಯಿಂದ ಮಾಡಿದ್ದ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿತ್ತು. ರಾಮ್ ಪೋತಿನೇನಿ ಜೊತೆ ಸೇರಿ ಇಸ್ಮಾರ್ಟ್ ಶಂಕರ್ ಸೀಕ್ವೆಲ್ ಕೈಗೆತ್ತಿಕೊಂಡಿರುವ ಪುರಿ ಜಗನ್ನಾಥ್‌ಗೆ ಶೂಟಿಂಗ್ ಕಂಪ್ಲೀಟ್ ಮಾಡಲು ಅಡಚಣೆ ಉಂಟಾಗುತ್ತಿದೆ.
ಡಬಲ್ ಇಸ್ಮಾರ್ಟ್(Double Ismart) ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸಂಜಯ್ ದತ್ ಒಳಗೊಂಡ ಬಹುದೊಡ್ಡ ತಾರಾಬಳಗವಿದೆ. ಚಿತ್ರೀಕರಣದ ಕೊನೆಯ ಹಂತದಲ್ಲಿರುವಾಗಲೇ ಹಣಕಾಸಿನ ಬಿಕ್ಕಟ್ಟು ಹಾಗೂ ಬ್ಯುಸಿನೆಸ್ ವಿಚಾರಕ್ಕೆ ನಾಲ್ಕು ತಿಂಗಳು ಶೂಟಿಂಗ್ ನಿಲ್ಲಿಸಿತ್ತು ಚಿತ್ರತಂಡ. ಸಿನಿಮಾ ಬಗ್ಗೆ ಹಿಂದಿ ಬೆಲ್ಟ್ ಕಡೆಯಿಂದ ಯಾರೂ ಒಲವು ತೋರುತ್ತಿಲ್ಲವಂತೆ. ಇದರ ಜೊತೆಗೆ ನಟ ರಾಮ್ ಪೋತಿನೇನಿ(Ram Pothineni) ಸಂಭಾವನೆ ವಿಚಾರಕ್ಕೆ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಎಲ್ಲದರಿಂದ ಶೂಟಿಂಗ್‌ಗೆ ಅಡಚಣೆಯಾಗಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು.
ಭಿನ್ನಾಭಿಪ್ರಾಯ ಹಾಗೂ ಹಣಕಾಸಿನ ಸಮಸ್ಯೆ ಬಗೆ ಹರಿದಿದ್ದು, ಮತ್ತೆ ಸಿನಿಮಾ ಶೂಟಿಂಗ್ ಆರಂಭಿಸಿದೆ ಎಂಬ ಸುದ್ದಿ ಟಿಟೌನ್‌ನಲ್ಲಿ ಕೇಳಿ ಬರ್ತಿದೆ. ಚಾರ್ಮೆ ಹಾಗೂ ಪುರಿ ಜಗನ್ನಾಥ್(Puri Jagannath) ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ನಿರ್ದೇಶನವಿದೆ.