Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಮುಂದಿನ ವಾರ ಹಬ್ಬದ ಸಂಭ್ರಮ. ಇದಕ್ಕೆ ಕಾರಣ ಪುನೀತ್ ಸಿನಿಮಾಗಳು ರೀರಿಲೀಸ್ ಆಗುತ್ತಿದೆ. ಅಪ್ಪು ಅಭಿನಯದ ಅಂಜನಿಪುತ್ರ ಸಿನಿಮಾ ರಿರೀಲೀಸ್ ಮಾಡೋದಾಗಿ ನಿರ್ಮಾಪಕ ಎನ್.ಎಂ.ಕುಮಾರ್((N.M.Kumar) ಹೇಳಿದ್ದರು ಇದೀಗ ಮತ್ತೊಂದು ಸಿನಿಮಾ ಮರು ಬಿಡುಗಡೆಯಾಗುತ್ತಿದೆ.
ಜಾಕಿ ಸಿನಿಮಾ ರೀರಿಲೀಸ್ ಆಗಿ ಕೆಆರ್‌ಜಿ ಸಂಸ್ಥೆ ಗೆಲುವು ಕಂಡಿತ್ತು. ಮರು ಬಿಡುಗಡೆಯಾದ ಜಾಕಿ ಸಿನಿಮಾ ದಾಖಲೆ ಬರೆದಿತ್ತು. ಇದರ ಬೆನ್ನಲ್ಲೇ ನಿರ್ಮಾಪಕ ಎನ್.ಎಂ ಕುಮಾರ್ ತಮ್ಮ ನಿರ್ಮಾಣದಲ್ಲಿ ತೆರೆಕಂಡ ಅಂಜನಿಪುತ್ರ(Anjani Putra) ಸಿನಿಮಾವನ್ನು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ಮುಂದಿನ ವಾರ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಆದ್ರೀಗ ಇದರ ಬೆನ್ನಲ್ಲೇ ಕೆ.ಮಾದೇಶ್ ನಿರ್ದೇಶನದಲ್ಲಿ ಬಂದ ಪವರ್ ಸ್ಟಾರ್(Power Star) ಸಿನಿಮಾವನ್ನು ರೀರಿಲೀಸ್ ಮಾಡುತ್ತಿದ್ದು, ಬಂಗಾರಪೇಟೆ ಬಾಬು ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಈ ಸಿನಿಮಾವನ್ನೂ ಕೂಡ ಮುಂದಿನ ವಾರವೇ ಬಿಡುಗಡೆ ಮಾಡಲಾಗ್ತಿದೆ. ಇದ್ರಿಂದ ನಿರ್ಮಾಪಕ ಎನ್.ಎಂ ಕುಮಾರ್ ಬೇಸರಗೊಂಡಿದ್ದಾರೆ.
ಅಂಜನಿಪುತ್ರ ಸಿನಿಮಾ ಮರು ಬಿಡುಗಡೆ ಮಾಡೋದಾಗಿ ನಾನು ತಿಳಿಸಿದ್ದೇ ಇದೀಗ ಪವರ್ ಸ್ಟಾರ್(Puneeth Rajkumar) ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಎರಡು ಸಿನಿಮಾ ಒಟ್ಟಿಗೆ ಬಂದರೆ ಕಲೆಕ್ಷನ್‌ಗೆ ಪೆಟ್ಟು ಬೀಳುತ್ತೆ ಎನ್ನುವುದು ಎನ್.ಎಂ. ಕುಮಾರ್(N.M.Kumar) ಅಳಲು. ಬೇಕಂತಲೇ ಈ ರೀತಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಫಿಲಂ ಚೇಂಬರ್ ಮೆಟ್ಟಿಲೇರಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ನೊಂದು ಕಡೆ ಎರಡೂ ಸಿನಿಮಾಗಳು ಅಭಿಮಾನಿಗಳ ಅಚ್ಚುಮೆಚ್ಚಿನ ಸಿನಿಮಾಗಳು. ಈ ರೀತಿ ಎರಡೂ ಸಿನಿಮಾಗಳನ್ನು ಒಟ್ಟಿಗೆ ಮರು ಬಿಡುಗಡೆ ಮಾಡಿದ್ರೆ ಯಾವ ಸಿನಿಮಾವನ್ನು ನೋಡೋದು, ಯಾವ ಸಿನಿಮಾವನ್ನು ಸಂಭ್ರಮಿಸೋದು ಎಂಬ ಸಂಕಷ್ಟಕ್ಕೆ ಅಪ್ಪು ಅಭಿಮಾನಿಗಳು ಸಿಲುಕಿದ್ದಾರೆ.