Yash: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ಟಾಕ್ಸಿಕ್’(Toxic).. ಎಲ್ಲೇ ಹೋದ್ರು ಕನ್ನಡದ ಕುವರನ ಟಾಕ್ಸಿಗ್ ಸಿನಿಮಾದ್ದೆ ಮಾತು. ಕೆಜಿಎಫ್, ಕೆಜಿಎಫ್2(KGF2) ಸಿನಿಮಾ ನಂತರ ನ್ಯಾಶನಲ್ ಲೆವಲ್ ನಲ್ಲಿ ಕ್ರೇಜ಼್ ಸೃಷ್ಟಿಸಿರುವ ನಟ ಯಶ್(Yash). ಕೇವಲ ಭಾರತೀಯ ಚಿತ್ರರಂಗವಲ್ಲ ವರ್ಲ್ಡ್ ಸಿನಿಪ್ರಿಯರ ಮೆಚ್ಚುಗೆಗೆ ಯಶ್ ಪಾತ್ರರಾಗಿದ್ದಾರೆ. ಫ್ಯಾನ್ಸ್ ಬಳಗ ದೊಡ್ಡದಾಗಿದೆ.
ಮಲೆಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್(Geetu Mohandas) ಯಶ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಹೆಸರಾಯ್ತು, ನಿರ್ದೇಶಕರಾಯ್ತು, ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಆಯ್ತು ಇಷ್ಟೆಲ್ಲಾ ತಿಳಿದುಕೊಂಡ ಮೇಲೂ ಸಿನಿಮಾದಲ್ಲಿ ಯಾರ್ ಇರ್ತಾರೆ ಅನ್ನೋದು ಎಲ್ಲರ ಕುತೂಹಲ. ಕಿಯಾರ ಅಡ್ವಾನಿ(Kaira Advani) ಯಶ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದು, ಬಿಟೌನ್ ಬೆಬೊ ಕರಿನಾ ಕಪೂರ್(Kareena Kapoor) ಯಶ್ ಅಕ್ಕನ ಪಾತ್ರಕ್ಕೆ ಸೆಲೆಕ್ಟ್ ಆಗಿದ್ರು. ಆದ್ರೀಗ ಬೇಬೋ ಚಿತ್ರತಂಡದಿಂದ ಹೊರ ನಡೆದಿದ್ದಾರೆ. ಇದಕ್ಕೆ ಕಾರಣ ಸಿನಿಮಾ ಥೀಮ್ ಎನ್ನಲಾಗ್ತಿದೆ.
ಟಾಕ್ಸಿಕ್(Toxic) ಗ್ಯಾಂಗ್‌ಸ್ಟರ್ ಸಿನಿಮಾವಾಗಿದ್ದು, ಚಿತ್ರದ ಕಥೆಯಲ್ಲಿ ಬರುವ ಸಂಕೀರ್ಣ ವಿಷಯಗಳಿಂದ ತಮ್ಮ ಪಾತ್ರದಲ್ಲಾಗಬಹುದಾದ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾದಿಂದ ಹೊರ ನಡೆದಿದ್ದಾರಂತೆ ಕರೀನಾ. ಚಿಕ್ಕಪುಟ್ಟ ಭಿನ್ನಾಭಿಪ್ರಾಯದಂದ ಬಿಟೌನ್ ಬೇಬೋ ಟಾಕ್ಸಿಕ್‌ಗೆ ಟಾಟಾ ಬೈಬೈ ಹೇಳಿದ್ದು, ಯಶ್(Yash) ಅಕ್ಕನ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.
ಕೆಜಿಎಫ್(KGF) ಸೀಕ್ವೆಲ್ ನಂತರ ಯಶ್ ಮುಂದಿನ ನಿಲುವೇನು ಎನ್ನುವುದೇ ಎಲ್ಲರ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಕನ್ನಡದಲ್ಲಿ ನಟಿಸ್ತಾರಾ. ಬಾಲಿವುಡ್ ಹೋಗ್ತಾರಾ, ಯಾವ ನಿರ್ದೇಶಕ ಯಶ್‌ಗೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ವು. ಯಶ್(Yash) ಮುಂದಿನ ಸಿನಿಮಾ ಹೇಗಿರುತ್ತೆ ಅನ್ನೋದೇ ಅವರ ಫ್ಯಾನ್ಸ್ ಕನವರಿಗೆ ಆಗಿತ್ತು. ಅದಕ್ಕೆಲ್ಲ ಆನ್ಸರ್ ಟಾಕ್ಸಿಕ್ ಆಗಿತ್ತು. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಬರ್ತಿರುವ ಈ ಚಿತ್ರಕ್ಕೆ ಮಾನ್‌ಸ್ಟಾರ್ ಮೈಂಡ್ ಕ್ರಿಯೇಶನ್ಸ್ ಮೂಲಕ ಯಶ್ ಕೂಡ ಒನ್ ಆಫ್ ದಿ ಪ್ರೊಡ್ಯೂಸರ್.