Rajinikanth: ಸೂಪರ್ ಸ್ಟಾರ್ ರಜನೀಕಾಂತ್(Rajinikanth) ತಮ್ಮ ವೃತ್ತಿ ಜೀವನದ 170ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೈಲರ್ ಸಿನಿಮಾ ಹಿಟ್ ಆದ ಮೇಲೆ ರಜನಿ ವೆಟ್ಟಯೈನ್(Vettaiyan) ಸಿನಿಮಾ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಿ(Amithab Bachchan) ಹಂಚಿಕೊಂಡಿರುವ ಫೋಟೋಸ್ ಆ ನಿರೀಕ್ಷೆಯನ್ನ ನೂರು ಪಾಲು ಹೆಚ್ಚು ಮಾಡಿದೆ.
ತಲೈವಾ ಅಭಿಮಾನಿಗಳ ನಿದ್ದೆ ಕೆಡಿಸಿದೆ ಆ ಫೋಟೋಗಳು. ವೆಟ್ಟೈಯನ್ ಸಿನಿಮಾದಲ್ಲಿ ರಜನಿ ಜೊತೆ ಇಂಡಿಯಾನ್ ಸೂಪರ್ ಸ್ಟಾರ್ ಬಿಗ್ ಬಿ(Amithab Bachchan)ಕೂಡ ನಟಿಸುತ್ತಿದ್ದಾರೆ. ಬಿಗ್‌ಬಿ ಹಾಗೂ ಚಿತ್ರತಂಡ ಹಂಚಿಕೊಂಡ ಈ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೆಟ್ಟೈಯನ್ ಮೇಲಿನ ನಿರೀಕ್ಷೆ, ಕ್ರೇಜ಼್ ಎಲ್ಲವೂ ಹೆಚ್ಚಾಗಿದೆ.
ಕೇವಲ ಫೋಟೋ ಮಾತ್ರ ಹಂಚಿಕೊಂಡಿಲ್ಲ. ತನ್ನ ಆತ್ಮೀಯ ಸ್ನೇಹಿತನ ಬಗ್ಗೆ ಒಂದೆರಡು ಸಾಲು ಮನದುಂಬಿ, ಮನಸಾರೆ ಬರೆದಿದ್ದಾರೆ. ರಜನಿ ಸರಳತೆ, ವಿನಮ್ರತೆಗೆ ಅಮಿತಾಬ್ ಬಚ್ಚನ್((Amithab Bachchan) ಮತ್ತೊಮ್ಮೆ ಫಿದಾ ಆಗಿದ್ದಾರೆ. ‘ಅಷ್ಟೊಂದು ಸ್ಟಾರ್‌ಡಂ ಇದ್ದರೂ ಮೊದಲು ಹೇಗಿದ್ದರೋ ಈಗಲೂ ಅಷ್ಟೇ ಸರಳತೆಯಿಂದ ಇದ್ದಾರೆ. ತಲಾ ದಿ ಗ್ರೇಟ್ ರಜನಿ ಜೊತೆ ಮತ್ತೊಮ್ಮೆ ನಟಿಸುತ್ತಿರುವುದಕ್ಕೆ ತುಂಬಾ ಗೌರವ ಇದೆ’ ಎಂದಿದ್ದಾರೆ.
ಟಿ.ಜೆ. ಜ್ಞಾನವೇಲ್ ನಿರ್ದೇಶನದ ‘ವೆಟ್ಟೈಯನ್’(Vettaiyan) ಸಿನಿಮಾ ಮುಂಬೈನಲ್ಲಿ ಚಿತ್ರೀಕರಣ ನಡೆಸುತ್ತಿದೆ. ಬಿಗ್ ಬಿ ಅಮಿತಾಬ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್‌ನಲ್ಲಿ ಇಂದಿನಿಂದ ಭಾಗಿಯಾಗಿದ್ದಾರೆ. ಅಷ್ಟಕ್ಕೂ ಈ ಜೋಡಿ ಇದೇ ಮೊದಲೇನಲ್ಲ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು 1983ರಲ್ಲಿ ತೆರೆಂಡ ‘ಅಂಧಾ ಕಾನೂನ್’, 1985ರಲ್ಲಿ ಬಂದ ‘ಗೆರಫ್ತಾರ್’ ಹಾಗೂ 1991ರಲ್ಲಿ ಬಿಡುಗಡೆಯಾದ ‘ಹಮ್ ಸಿನಿಮಾದಲ್ಲಿ ಈ ಇಬ್ಬರು ಒಟ್ಟಿಗೆ ನಟಿಸಿದ್ದರು. ಇದೀಗ ಮೂರು ದಶಕದ ಬಳಿಕ ಇಂಡಿಯನ್ ಸಿನಿಮಾದ ಎರಡು ದೊಡ್ಡ ತಾರೆಗಳು ಒಟ್ಟಿಗೆ ನಟಿಸುತ್ತಿದ್ದಾರೆ.